ETV Bharat / bharat

Instagramನಲ್ಲಿನ ದೋಷ ಕಂಡು ಹಿಡಿದ ಭಾರತೀಯ ಹ್ಯಾಕರ್​​.. Facebook​ ನೀಡ್ತು ಇಷ್ಟೊಂದು ಬಹುಮಾನ!

author img

By

Published : Jun 17, 2021, 7:56 PM IST

ಇನ್​ಸ್ಟಾಗ್ರಾಂನಲ್ಲಿನ ದೋಷ ಕಂಡು ಹಿಡಿದಿರುವುದಕ್ಕಾಗಿ 21 ವರ್ಷದ ಭಾರತೀಯ ಹ್ಯಾಕರ್ಸ್​ಗೆ ಫೇಸ್​ಬುಕ್​​ 22 ಲಕ್ಷ ರೂ. ಬಹುಮಾನ ನೀಡಿದೆ.

Mayur Fartade
Mayur Fartade

ಮುಂಬೈ: ಭಾರತ ಸೇರಿದಂತೆ ಪ್ರಪಂಚದಾದ್ಯಂತ ಕೋಟ್ಯಂತರ ಜನರು ಇನ್​ಸ್ಟಾಗ್ರಾಂ, ಟ್ವಿಟರ್​, ಫೇಸ್​ಬುಕ್​ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣ ಬಳಕೆ ಮಾಡ್ತಿದ್ದಾರೆ. ಆದರೆ, ಅನೇಕ ಸಲ ಸೋಷಿಯಲ್​ ಮೀಡಿಯಾಗಳಿಂದ ಅನೇಕರು ವಂಚನೆಗೊಳಗಾಗಿದ್ದಾರೆ.

ಇದರ ಮಧ್ಯೆ ಇನ್​ಸ್ಟಾಗ್ರಾಂನಲ್ಲಿನ ಸಮಸ್ಯೆವೊಂದನ್ನ ಕಂಡು ಹಿಡಿದಿರುವುದಕ್ಕಾಗಿ ಭಾರತೀಯ ಹ್ಯಾಕರ್​ಗೆ ಫೇಸ್​ಬುಕ್​ ಸಂಸ್ಥೆ ದಾಖಲೆಯ 22 ಲಕ್ಷ ರೂ.($30000) ಬಹುಮಾನ ಘೋಷಣೆ ಮಾಡಿದ್ದು, ಇದರ ಬಗ್ಗೆ ತನ್ನ ಅಕೌಂಟ್​ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಮಹಾರಾಷ್ಟ್ರದ ಸೋಲಾಪುರ ಮೂಲದ ಮಯೂರ್​​​ಗೆ ಫೇಸ್​ಬುಕ್​​ ಈ ಬಹುಮಾನ ನೀಡಿದೆ. ಇನ್​ಸ್ಟಾಗ್ರಾಂನಲ್ಲಿನ ದೋಷ ಕಂಡು ಹಿಡಿದಿರುವುದಕ್ಕಾಗಿ ಈ ಬಹುಮಾನ ನೀಡಿರುವುದಾಗಿ ಅದು ಹೇಳಿಕೊಂಡಿದೆ. C++, ಫೈಥಾನ್​ನಂತಹ ಕೌಶಲ್ಯ ಹೊಂದಿರುವ ಸೋಲಾಪುರ ಮೂಲದ ಮಯೂರ್​, ಏಪ್ರಿಲ್​ 16ರಂದು ಫೇಸ್​ಬುಕ್​​ಗೆ ಇನ್​ಸ್ಟಾಗ್ರಾಂ ದೋಷದ ಬಗ್ಗೆ ಮಾಹಿತಿ ನೀಡಿದ್ದರು.

ಇದಕ್ಕೆ ಏಪ್ರಿಲ್​ 19ರಂದು ಪ್ರತಿಕ್ರಿಯೆ ಸಹ ಬಂದಿತ್ತು. ಜತೆಗೆ ಹೆಚ್ಚಿನ ಮಾಹಿತಿ ನೀಡುವಂತೆ ತಂಡ ಆತನ ಬಳಿ ಮನವಿ ಮಾಡಿಕೊಂಡಿತ್ತು. ಸಂಪೂರ್ಣ ಮಾಹಿತಿ ನೀಡಿದ ಬಳಿಕ ಅದರ ಮೇಲೆ ಕೆಲಸ ಮಾಡಿರುವ ತಂಡ ಇನ್​ಸ್ಟಾಗ್ರಾಂ ಬಗ್​​ ಸಮಸ್ಯೆಗೆ ಜೂನ್​​ 15ರಂದು ಮುಕ್ತಿ ಹೇಳಿದೆ.

ಇದನ್ನೂ ಓದಿರಿ: ಭಾರತಕ್ಕೆ ಚೋಕ್ಸಿ ಕರೆತರಲು ಡೊಮಿನಿಕಾದೊಂದಿಗೆ ನಿರಂತರ ಮಾತುಕತೆ: ವಿದೇಶಾಂಗ ಸಚಿವಾಲಯ

ಏನಿದು ದೋಷ?

ಇನ್​ಸ್ಟಾಗ್ರಾಂ ಪ್ರೊಫೈಲ್​ನಲ್ಲಿ ಖಾಸಗಿಯಾಗಿ ಇಟ್ಟುಕೊಂಡಿರುವ ಅನೇಕ ಫೋಟೋ, ಪೋಸ್ಟ್​, ದಾಖಲೆ ಸೇರಿದಂತೆ ಅನೇಕ ಮಹತ್ವದ ಮಾಹಿತಿ ಇತರರು ಸುಲಭವಾಗಿ ಕಳ್ಳತನ ಮಾಡುವ ಬಗ್ಗೆ ಮಾಹಿತಿ ನೀಡಿದ್ದರು. ಸೆಲಿಬ್ರೆಟಿಗಳನ್ನ ಫಾಲೋ ಮಾಡದೇ ಅವರ ಅಕೌಂಟ್​ನಲ್ಲಿನ ವಿಡಿಯೋ, ಫೋಟೋ ಕಳ್ಳತನ ಮಾಡುವ ಮೂಲಕ ಅನೇಕರು ಸಾವಿರಾರು ರೂಪಾಯಿಗಳಿಕೆ ಮಾಡುತ್ತಿದ್ದರು.

ವಿಶೇಷವಾಗಿ ಹ್ಯಾಕರ್ಸ್​ಗಳು ಇನ್​ಸ್ಟಾಗ್ರಾಂನಲ್ಲಿನ ಖಾಸಗಿ ಚಿತ್ರ, ವಿಡಿಯೋಗಳನ್ನ ಅಕ್ರಮವಾಗಿ ಹೇಗೆ ಪಡೆದುಕೊಳ್ಳುತ್ತಾರೆ ಎಂಬುದನ್ನ ಅವರು ತಿಳಿಸಿದ್ದರಿಂದ ಫೇಸ್​ಬುಕ್ ಫುಲ್ ಖುಷ್​ ಆಗಿತ್ತು. ಹೀಗಾಗಿ ಮಯೂರ್​ಗೆ ಫೇಸ್​ಬುಕ್​​ ಸಂಸ್ಥೆ ಬಹುಮಾನ ಘೋಷಣೆ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.