ನವದೆಹಲಿ: ನ್ಯಾಯಾಲಯದ ಆದೇಶವೊಂದು ಕಪೋಲಕಲ್ಪಿತವಾಗಿದೆ ಎಂದು ಹೇಳಿರುವ ಆಂತರಿಕ ತನಿಖಾ ವರದಿಯನ್ನು ಪರಿಗಣಿಸಿ ದೂರು ದಾಖಲಿಸುವಂತೆ ಸುಪ್ರೀಂ ಕೋರ್ಟ್ ತನ್ನ ರಿಜಿಸ್ಟ್ರಾರ್‌ಗೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಎ.ಎಸ್ ಓಕಾ ಮತ್ತು ಪಂಕಜ್ ಮಿಥಾಲ್ ಅವರನ್ನೊಳಗೊಂಡ ಪೀಠ ರಿಜಿಸ್ಟ್ರಾರ್ (ನ್ಯಾಯಾಂಗ ಪಟ್ಟಿ) ವರದಿಯನ್ನು ಪರಿಶೀಲಿಸಿತು. ಈ ನ್ಯಾಯಾಲಯದ ಆದೇಶದ ನಕಲು ಎಂದು ಹೇಳಲಾದ ದಾಖಲೆಯು 'ಕೃತಕ' ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದೆ. ಆದ್ದರಿಂದ, ವ್ಯಾಪ್ತಿಯ ಪೊಲೀಸ್ ಠಾಣೆಗೆ ದೂರು ನೀಡುವಂತೆ ರಿಜಿಸ್ಟ್ರಾರ್‌ಗೆ ಪೀಠ ಹೇಳಿದೆ. ಅಲ್ಲದೇ 2 ತಿಂಗಳೊಳಗೆ ತನಿಖೆಯ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿಗೆ ಸೂಚಿಸಿದೆ.
ಇದನ್ನೂ ಓದಿ: ಹೊಸ ಸೇವಾ ಕಾನೂನು ಪ್ರಶ್ನಿಸುವ ಅರ್ಜಿ ತಿದ್ದುಪಡಿ; ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಅನುಮತಿ
ಈ ಹಿಂದೆ ಸಂಬಂಧಪಟ್ಟ ವಕೀಲರಿಗೆ ನೊಟೀಸ್ ಜಾರಿ ಮಾಡಿದ್ದ ನ್ಯಾಯಾಲಯ, "ಪ್ರೀತಿ ಮಿಶ್ರಾ ಅವರ ಪಾತ್ರವನ್ನು ಪರಿಶೀಲಿಸಲು ವಕೀಲರಿಗೆ ನೊಟೀಸ್ ನೀಡಿದ್ದರೂ, ಅವರು ಇಂದು ಈ ನ್ಯಾಯಾಲಯಕ್ಕೆ ಹಾಜರಾಗದಿರಲು ನಿರ್ಧರಿಸಿದ್ದಾರೆ" ಎಂಬುವುದನ್ನು ಗಮನಿಸಿದೆ. ಪ್ರೀತಿ ವಹಿಸಿದ್ದಾರೆ ಎನ್ನಲಾದ ಪಾತ್ರವನ್ನು ಪರಿಶೀಲಿಸುವುದು, ರಿಜಿಸ್ಟ್ರಾರ್ ದೂರು ಸಲ್ಲಿಸುವಾಗ, ಅವರ ವರದಿಯಲ್ಲಿ ಉಲ್ಲೇಖಿಸಲಾದ ಅನುಬಂಧಗಳೊಂದಿಗೆ ಈ ಆದೇಶದ ಪ್ರತಿಯನ್ನು ಸಹ ಸಲ್ಲಿಸಬೇಕು ಎಂದು ಪೀಠ ಹೇಳಿದೆ. ಪ್ರಕರಣದ ಹೆಚ್ಚಿನ ವಿಚಾರಣೆಗೆ ಡಿಸೆಂಬರ್ 1ರಂದು ದಿನಾಂಕ ನಿಗದಿಪಡಿಸಿದೆ.
ಇದನ್ನೂ ಓದಿ: 370ನೇ ವಿಧಿ ಮೇಲಿನ ನಿಮ್ಮ ತೀರ್ಪು ಮಾನಸಿಕ ದ್ವಂದ್ವ ಕೊನೆಗಾಣಿಸಲಿದೆ: ಸುಪ್ರೀಂ ಕೋರ್ಟ್ನಲ್ಲಿ ಕೇಂದ್ರದ ವಾದ
ಈ ಹಿಂದೆ, ಒಂದೇ ಪೀಠ ನೀಡಿದ ಎರಡು ವಿಭಿನ್ನ ಆದೇಶಗಳನ್ನು ಅರ್ಜಿಯೊಂದಿಗೆ ಸಲ್ಲಿಸಿರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್ ಆಂತರಿಕ ತನಿಖೆಗೆ ಆದೇಶಿಸಿತ್ತು. "ಮೊದಲ ಆದೇಶ ವಜಾಗೊಳಿಸುವುದು ಮತ್ತು ಎರಡನೇ ಆದೇಶವು ಎಸ್ಎಲ್ಪಿ(special leave to appeal) ಗೆ ಅವಕಾಶ ನೀಡುವುದು ಸೇರಿತ್ತು.
ಈ ಅಂಶಗಳ ಬಗ್ಗೆ ತನಿಖೆ ನಡೆಸಿ, ಸೆಪ್ಟೆಂಬರ್ 20, 2023 ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ನಾವು ರಿಜಿಸ್ಟ್ರಾರ್ (ನ್ಯಾಯಾಂಗ) ಅವರಿಗೆ ನಿರ್ದೇಶಿಸುತ್ತೇವೆ. ರಿಜಿಸ್ಟ್ರಾರ್ ಇದು ಈ ನ್ಯಾಯಾಲಯದ ಆದೇಶ ಕಪೋಲಕಲ್ಪಿತ ಎಂದಾದರೆ ಕ್ರಿಮಿನಲ್ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಪೀಠ ತನ್ನ ಆಗಸ್ಟ್ 22ರ ಆದೇಶದಲ್ಲಿ ಹೇಳಿತ್ತು. ಈ ಸಂಬಂಧ ಸಂಬಂಧಪಟ್ಟ ವಕೀಲರಾದ ಮಿಶ್ರಾ ಮತ್ತು ಅಫ್ತಾಬ್ ಅಲಿ ಖಾನ್ ಮತ್ತು ದೂರುದಾರ ಲೋಕೇಶ್ ಮದನ್ಮೋಹನ್ ಅಗರ್ವಾಲ್ ಅವರಿಗೆ ನೊಟೀಸ್ ಜಾರಿ ಮಾಡಿತ್ತು.
ಇದನ್ನೂ ಓದಿ: ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿಸಿದ ಪ್ರಕರಣ: ಉತ್ತರ ಪ್ರದೇಶ ಸರ್ಕಾರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್