ಪಾಟ್ನಾ: ಬಿಹಾರದ 243 ಕ್ಷೇತ್ರಗಳ ವಿಧಾನಸಭೆ ಚುನಾವಣೆಗೆ ನಡೆದ ಮತದಾನ ಮುಕ್ತಾಯಗೊಂಡಿದ್ದು, ನವೆಂಬರ್ 10ರಂದು ಫಲಿತಾಂಶ ಬಹಿರಂಗಗೊಳ್ಳಲಿದೆ. ಅದಕ್ಕೂ ಮುನ್ನ ವಿವಿಧ ಸಮೀಕ್ಷೆಗಳ ಚುನಾವಣೋತ್ತರ ಫಲಿತಾಂಶ ಬಹಿರಂಗಗೊಳ್ಳುತ್ತಿದೆ. ಕೆಲ ಸಮೀಕ್ಷೆಗಳ ಪ್ರಕಾರ ಜೆಡಿಯು ನೇತೃತ್ವದ ಮಹಾಘಟಬಂಧನ್ಗೆ ಜನ ಜೈಕಾರ ಹಾಕಿದ್ರೆ, ಮತ್ತೆ ಕೆಲವು ಸಮೀಕ್ಷೆಗಳು ಅತಂತ್ರ ಸ್ಥಿತಿ ನಿರ್ಮಾಣಗೊಳ್ಳಲಿದೆ ಎಂದು ಹೇಳಿವೆ.
ಟೈಮ್ಸ್ ನೌ- ಸಿವೋಟರ್
- ಸೀಟು 243: ಟಾರ್ಗೆಟ್ 122
- ಜೆಡಿಯು+ 116
- ಆರ್ಜೆಡಿ+ 120
- ಎಲ್ಜೆಪಿ 1
- ಇತರೆ 6
ರಿಪಬ್ಲಿಕ್ ಟಿವಿ-ಜನ್ ಕೀ ಬಾತ್
- ಎನ್ಡಿಎ: 91-117
- ಮಹಾಘಟಬಂಧನ್: 118-138
- ಎಲ್ಜೆಪಿ 5-8
- ಇತರೆ 3-6
ಪೂಲ್ ಆಫ್ ಪೂಲ್
- ಮಹಾಘಟಬಂಧನ್ 123 ಸ್ಥಾನ
- ಎನ್ಡಿಎ 110 ಸ್ಥಾನದಲ್ಲಿ ಗೆಲುವು
ಸಿಎನ್ಎನ್ ನ್ಯೂಸ್ 18
- ಮಹಾಘಟಬಂಧನ್ 125 ಸ್ಥಾನ
- ಎನ್ಡಿಎ 110 ಸ್ಥಾನದಲ್ಲಿ ಗೆಲುವು
ನ್ಯೂಸ್ X-ಡಿವಿ ರಿಸರ್ಚರ್ - ಜೆಡಿಯು+ 110-117
- ಆರ್ಜೆಡಿ+108-123
- ಎಲ್ಜೆಪಿ 04-10
- ಇತರೆ 08-23
ನ್ಯೂಸ್ 18 ಟುಡೇ- ಚಾಣಕ್ಯ
- ಜೆಡಿಯು+ 55
- ಆರ್ಜೆಡಿ+ 180
- ಎಲ್ಜೆಪಿ -
- ಇತರೆ 8
2015ರಲ್ಲಿ ಆರ್ಜೆಡಿ-ಜೆಡಿಯು ಮೈತ್ರಿ ಸರ್ಕಾರ ರಚನೆ ಮಾಡಿದ್ದವು. ಇದಾದ ಬಳಿಕ ಹೊರ ಬಂದಿದ್ದ ನಿತೀಶ್ ಕುಮಾರ್ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದು, ಸದ್ಯ ಎನ್ಡಿಎ ಮೈತ್ರಿಕೂಟದ ಸಿಎಂ ಅಭ್ಯರ್ಥಿಯಾಗಿದ್ದಾರೆ.
ಬಿಹಾರ ಚುನಾವಣೆ ಮತದಾನ ಮುಕ್ತಾಯ: ಕೊನೆ ಹಂತದಲ್ಲಿ ಶೇ. 55.22ರಷ್ಟು ವೋಟಿಂಗ್
ಆಡಳಿತರೂಢ ಎನ್ಡಿಎ, ವಿರೋಧ ಪಕ್ಷದಲ್ಲಿರುವ ಮಹಾಘಟಬಂಧನ್ ನಡುವೆ ತೀವ್ರ ಪೈಪೋಟಿ ಇದ್ದು, ಯುಪಿಎಗೆ ಸರ್ಕಾರ ರಚನೆ ಮಾಡುವ ಅವಕಾಶ ಇದೆ ಎನ್ನಲಾಗುತ್ತಿದೆ. ದೇಶದಲ್ಲಿ ಕೊರೊನಾ ವೈರಸ್ ಬಳಿಕ ನಡೆದ ಮೊದಲ ಚುನಾವಣೆ ಇದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೂ ಈ ಚುನಾವಣೆ ಪರಿಣಾಮ ಬೀರಲಿದೆ.