ETV Bharat / bharat

ಈ ವಾರ ಯಾವ ರಾಶಿಯವರಿಗಿದೆ ಅದೃಷ್ಟ? ನಿಮ್ಮ ಗ್ರಹಗತಿ ಹೀಗಿದೆ.. - ವಾರದ ಜ್ಯೋತಿಷ್ಯ

ಈ ವಾರ ಯಾವ ರಾಶಿಯವರ ಭವಿಷ್ಯ ಹೇಗಿದೆ ಅಂತಾ ನೋಡಿ..

etv bharat weekly horoscope
ಈ ವಾರ ಯಾವ ರಾಶಿಯವರಿಗಿದೆ ಅದೃಷ್ಟ.. ಇಲ್ಲಿದೆ ನೋಡಿ ನಿಮ್ಮ ರಾಶಿಫಲ
author img

By

Published : Oct 30, 2022, 7:06 AM IST

ಮೇಷ: ಈ ವಾರವು ನಿಮ್ಮ ಪಾಲಿಗೆ ಉತ್ತಮ ಮತ್ತು ಫಲದಾಯಕವಾಗಿದೆ. ಆದರೂ, ಯಾವುದಾದರೂ ವಿಷಯದ ಬಗ್ಗೆ ನೀವು ಅಪಮಾನ ಎದುರಿಸಬೇಕಾದೀತು. ಹೀಗಾಗಿ ಯಾವುದೇ ವಿಷಯದ ಬಗ್ಗೆ ಅಭಿಮಾನ ವ್ಯಕ್ತಪಡಿಸುವುದನ್ನು ಬಿಟ್ಟುಬಿಡಿ. ಅಲ್ಲದೇ, ನೀವು ಮತ್ತು ನಿಮ್ಮ ತಂದೆಯ ನಡುವಿನ ಸಂಬಂಧ ಹದಗೆಡುವ ಸಾಧ್ಯತೆ ಇದೆ. ಹೀಗಾಗಿ, ನಿಮ್ಮ ತಂದೆಯ ಕುರಿತು ಮತ್ತು ಅವರ ಆರೋಗ್ಯದ ಕುರಿತು ಗಮನ ಹರಿಸಿ. ನಿಮ್ಮ ಕುಟುಂಬದಲ್ಲಿ ಕಲಹ ಉಂಟಾಗಬಹುದು. ಇದು ನಿಮ್ಮ ಕಾರ್ಯಸ್ಥಳದಲ್ಲಿ ನಿಮ್ಮ ಕಾರ್ಯದಕ್ಷತೆಯ ಮೇಲೆ ಪರಿಣಾಮ ಬೀರಲಿದೆ. ಮನೆಯಲ್ಲಿ ಮಾನಸಿಕ ಕ್ಷೋಭೆ ಇರುವ ಕಾರಣ ನಿಮಗೆ ಕೆಲಸ ಮಾಡಲು ಆಗದೆ ಇರಬಹುದು. ನೀವು ಕೆಲವೊಂದು ತಪ್ಪುಗಳನ್ನು ಮಾಡಬಹುದು. ವ್ಯಾಪಾರೋದ್ಯಮಿಗಳು ರಫ್ತು-ಆಮದು ವ್ಯವಹಾರದಲ್ಲಿ ಲಾಭಗಳಿಸಲಿದ್ದಾರೆ. ನೀವು ವಿದೇಶಕ್ಕೆ ಭೇಟಿ ನೀಡಬಹುದು ಹಾಗೂ ವ್ಯಾಪಾರದಲ್ಲಿ ಉತ್ತಮ ಲಾಭ ಗಳಿಸಲಿದ್ದೀರಿ. ನೀವು ನಿಮ್ಮ ಪ್ರಣಯ ಬದುಕಿನಲ್ಲಿ ಪ್ರಣಯಭರಿತ ಕ್ಷಣಗಳನ್ನು ಕಳೆಯಲಿದ್ದೀರಿ. ನೀವು ನಿಮ್ಮ ಪ್ರಣಯ ಸಂಗಾತಿಯ ಜೊತೆ ಸುಂದರ ತಾಣವೊಂದಕ್ಕೆ ಭೇಟಿ ನೀಡಲಿದ್ದೀರಿ. ವಿವಾಹಿತ ವ್ಯಕ್ತಿಗಳ ಪಾಲಿಗೂ ಇದು ಸಕಾಲ. ಅಲ್ಲದೆ ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.

ವೃಷಭ: ಈ ವಾರದಲ್ಲಿ ನೀವು ಒಳ್ಳೆಯ ಫಲವನ್ನು ಪಡೆಯಲಿದ್ದೀರಿ. ವಾರದ ಆರಂಭದಲ್ಲಿ ಯಾವುದಾದರೂ ವಿಷಯದಲ್ಲಿ ನಿಮಗೆ ಆತಂಕ ಕಾಡಲಿದೆ. ನಿಮ್ಮ ಚಿಂತೆಯು ನಿಮ್ಮ ಮಾನಸಿಕ ತೊಳಲಾಟಕ್ಕೆ ಕಾರಣವಾಗಬಹುದು. ಹೀಗಾಗಿ ನೀವು ಇದರಿಂದ ದೂರವಿರುವುದು ಒಳಿತು. ನಿಮ್ಮ ಕುಟುಂಬದಲ್ಲಿ ಉತ್ತಮ ವಾತಾವರಣ ಮನೆ ಮಾಡಲಿದ್ದು, ನೀವು ಹೊಸ ಟಿ.ವಿ ಸೆಟ್‌, ರೆಫ್ರಿಜರೇಟರ್‌ ಖರೀದಿಸಲಿದ್ದೀರಿ. ನಿಮ್ಮ ಕುಟುಂಬದ ಸದಸ್ಯರು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದು, ಪೂರ್ಣ ಪ್ರಮಾಣದಲ್ಲಿ ತಯಾರಿ ನಡೆಯಲಿದೆ. ವಿವಾಹಿತ ವ್ಯಕ್ತಿಗಳು ಸಹ ತಮ್ಮ ಸಂಬಂಧವನ್ನು ಉತ್ತಮವಾಗಿ ಆನಂದಿಸಲಿದ್ದಾರೆ. ಪ್ರಣಯ ಜೋಡಿಗಳು ಸಹ ತಮ್ಮ ಸಂಗಾತಿಯ ಜೊತೆ ಆನಂದದಿಂದ ಕಾಲಕಳೆಯಲಿದ್ದಾರೆ. ನೀವು ಕಾರ್ಯಸ್ಥಳದಲ್ಲಿ ಹೊಸ ಜನರೊಂದಿಗೆ ಕೆಲಸ ಮಾಡಲಿದ್ದೀರಿ. ನೀವು ನಿಮ್ಮ ಪಾಲಿಗೆ ಹೊಸ ಅಸ್ಮಿತೆಯನ್ನು ನಿರ್ಮಿಸಲಿದ್ದೀರಿ. ವ್ಯಾಪಾರೋದ್ಯಮಿಗಳಿಗೆ ಇದು ಉತ್ತಮ ಕಾಲವೆನಿಸಲಿದೆ. ಸರಿಯಾಗಿ ಯೋಜಿತ ಮತ್ತು ಉದ್ದೇಶಿತ ರೀತಿಯಲ್ಲಿ ಚೆನ್ನಾಗಿ ಕೆಲಸ ಮಾಡಲಿದ್ದೀರಿ. ನೀವು ಉತ್ತಮ ಆರೋಗ್ಯವನ್ನು ಆನಂದಿಸಲಿದ್ದೀರಿ. ಇದು ನಿಮಗೆ ಕಾರ್ಯಸ್ಥಳದಲ್ಲಿ ಚೆನ್ನಾಗಿ ಕೆಲಸ ಮಾಡಲು ಸಹಕರಿಸಲಿದೆ.

ಮಿಥುನ: ಇದು ನಿಮ್ಮ ಪಾಲಿಗೆ ಸಾಧಾರಣ ಕಾಲವೆನಿಸಲಿದೆ. ವಾರದ ಆರಂಭವು ನಿಮಗೆ ಅಷ್ಟೊಂದು ಶುಭ ಫಲವನ್ನು ನೀಡದೆ ಇರಬಹುದು. ನಿಮಗೆ ಚಿಂತೆ ಕಾಡಬಹುದು ಹಾಗೂ ನೀವು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು. ಕೆಲಸದ ವಿಚಾರದಲ್ಲಿ ನೀವು ಯಶಸ್ವನ್ನು ಪಡೆಯಲಿದ್ದೀರಿ. ನೀವು ಸರಿಯಾದ ದಾರಿಯನ್ನು ಅನುಸರಿಸಲಿದ್ದು, ಸರಿಯಾದ ಕೆಲಸವನ್ನು ಮಾಡಲಿದ್ದೀರಿ. ಈ ಕಾರಣಕ್ಕಾಗಿ ನೀವು ಒಂದಷ್ಟು ವಿರೋಧವನ್ನು ಎದುರಿಸಬಹುದು. ಆದರೆ ಇದು ಒಂದಲ್ಲ ಒಂದು ದಿನ ಇದಕ್ಕೆ ಪರಿಹಾರ ಸಿಗಲಿದೆ. ನೀವು ಕುಟುಂಬದ ಮಕ್ಕಳಿಂದ ಸಾಕಷ್ಟು ಪ್ರೀತಿ ಮತ್ತು ಅಕ್ಕರೆಯನ್ನು ಪಡೆಯಲಿದ್ದೀರಿ. ಪ್ರಣಯ ಪಕ್ಷಿಗಳಿಗೆ ಇದು ಉತ್ತಮ ಕಾಲವೆನಿಸಲಿದೆ. ವಿವಾಹಿತ ವ್ಯಕ್ತಿಗಳು ಸಹ ಬದುಕನ್ನು ಉತ್ತಮವಾಗಿ ಆನಂದಿಸಲಿದ್ದಾರೆ. ನೀವು ಪ್ರವಾಸಕ್ಕೆ ಹೋಗಲು ಇಚ್ಛಿಸುವುದಾದರೆ, ವಾರದ ಮಧ್ಯದ ದಿನಗಳಲ್ಲಿ ಹೋಗುವುದು ಒಳ್ಳೆಯದು. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದ್ದು, ಖರ್ಚು ವೆಚ್ಚದಲ್ಲಿ ಇಳಿಕೆ ಉಂಟಾಗಲಿದೆ. ಇದು ನಿಮಗೆ ಸಂತೃಪ್ತಿ ತರಲಿದೆ ಮತ್ತು ನಿಮಗೆ ಹೆಚ್ಚು ಆರಾಮವನ್ನು ನೀಡಲಿದೆ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ನೀವು ಆಹಾರವನ್ನು ಸರಿಯಾದ ಸಮಯದಲ್ಲಿ ಮತ್ತು ನಿಯಮಿತವಾಗಿ ಸೇವಿಸಬೇಕು.

ಕರ್ಕಾಟಕ: ವಾರದ ಆರಂಭದಲ್ಲಿ ಕೌಟುಂಬಿಕ ಚಟುವಟಿಕೆಗಳಲ್ಲಿ ನೀವು ಸಾಕಷ್ಟು ಸಮಯ ಮತ್ತು ಶಕ್ತಿಯನ್ನು ವ್ಯಯಿಸಲಿದ್ದೀರಿ. ದಿನಗಳು ಮುಂದುವರಿದಂತೆ ನೀವು ಹೆಚ್ಚಿನ ಸಮಯವನ್ನು ನಿಮ್ಮ ವೃತ್ತಿಪರ ಅಗತ್ಯತೆಗಳಿಗಾಗಿ ಖರ್ಚು ಮಾಡಲಿದ್ದೀರಿ. ಅಲ್ಲದೆ, ಸಂಬಂಧದ ವಿಚಾರದಲ್ಲಿ ಹೆಚ್ಚು ಸೂಕ್ಷ್ಮತೆಯನ್ನು ತೋರಲಿದ್ದೀರಿ. ವಾರಾಂತ್ಯದಲ್ಲಿ ನೀವು ಕೆಲ ಅಮೂಲ್ಯ ಸಮಯವನ್ನು ನಿಮ್ಮ ಜೀವನ ಸಂಗಾತಿ ಮತ್ತು ಪ್ರೀತಿ ಪಾತ್ರರ ಜೊತೆ ಕಳೆಯಲಿದ್ದೀರಿ. ಇನ್ನೊಂದೆಡೆ, ವಾರದ ಮಧ್ಯ ಭಾಗದಲ್ಲಿ ಉದ್ಯೋಗದ ಸ್ಥಳದಲ್ಲಿ ವಿಪರೀತ ಕೆಲಸ ಇರುವುದರಿಂದ ನಿಮಗೆ ಊಟ ಮಾಡಲು ಸಮಯ ಸಿಗದು. ಆದರೂ, ನಿಮ್ಮ ಊಟದ ಅಭ್ಯಾಸದ ಕುರಿತು ನೀವು ಎಚ್ಚರಿಕೆ ವಹಿಸಬೇಕು. ನಿಮ್ಮ ರಕ್ತದೊತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿಯಂತ್ರಿಸಲು ಪ್ರಯತ್ನಿಸಿ. ಆಗ ಮಾತ್ರವೇ ನಿಮ್ಮ ಉತ್ಸಾಹ ಮತ್ತು ಆತ್ಮವಿಶ್ವಾಸವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿದೆ. ವಾರದ ಕೊನೆಯ ದಿನಗಳಲ್ಲಿ ನಿಮ್ಮ ವ್ಯವಹಾರದಲ್ಲಿ ವಿಸ್ತರಣೆ ಉಂಟಾಗಬಹುದು. ವಾರದ ಆರಂಭದಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲಿದ್ದಾರೆ. ಆದರೆ ವಾರದ ನಂತರದ ದಿನಗಳಲ್ಲಿ ಅವರ ಗಮನದಲ್ಲಿ ಕುಂದು ಉಂಟಾಗಲಿದೆ.

ಸಿಂಹ: ಈ ವಾರವು ನಿಮ್ಮ ಪಾಲಿಗೆ ಭಿನ್ನ ರೀತಿಯ ವಾರವಾಗಿ ಪರಿಣಮಿಸಲಿದೆ. ನೀವು ನಿಮ್ಮ ಸಂಬಂಧದಲ್ಲಿ ಸಾಕಷ್ಟು ಉತ್ಸಾಹದಿಂದ ಮುಂದೆ ಸಾಗಲಿದ್ದೀರಿ. ವೈವಾಹಿಕ ಜೋಡಿಗಳ ಮನಸ್ಸಿನಲ್ಲಿ ಪ್ರೀತಿ ಮತ್ತು ಪ್ರಣಯವು ಬಲವಾಗಿ ನೆಲೆಯೂರಲಿದೆ. ಪ್ರಣಯ ಹಕ್ಕಿಗಳು ತಮ್ಮ ಸಂಬಂಧದಲ್ಲಿ ಸುಂದರ ಸಮಯವನ್ನು ಕಾಣಲಿದ್ದಾರೆ. ನೀವು ಅನೇಕ ಗಂಟೆಗಳ ಕಾಲ ಫೋನ್‌ ಕರೆಗಳಲ್ಲಿ ಸಮಯ ಕಳೆಯಲಿದ್ದೀರಿ. ಇದೇ ವೇಳೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ನಿಮ್ಮ ಹೃದಯದ ಮಾತನ್ನು ವ್ಯಕ್ತಪಡಿಸಲು ಸಮಯ ಮೀಸಲಿಡಲಿದ್ದೀರಿ. ನಿಮಗೆ ಸಾಮಾನ್ಯ ವೆಚ್ಚಗಳು ಉಂಟಾಗಲಿವೆ. ಅಲ್ಲದೆ, ಸರ್ಕಾರಿ ನೀತಿಯೊಂದಿಗೆ ಹೊಂದಾಣಿಕೆ ಇಲ್ಲದ ಯಾವುದಾದರೂ ಕೆಲಸವನ್ನು ಮಾಡಿದ್ದಲ್ಲಿ, ನೀವು ಇದರ ಪರಿಣಾಮವನ್ನು ಎದುರಿಸಬೇಕಾದೀತು. ವ್ಯಾಪಾರೋದ್ಯಮಿಗಳಿಗೂ ಇದು ಸಕಾಲ. ನಿಮ್ಮ ವ್ಯಾಪಾರವು ನಿಜಕ್ಕೂ ಉತ್ತಮ ಸಾಧನೆ ತೋರಲಿದೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ಕನ್ಯಾ: ಈ ವಾರ ನಿಮಗೆ ಮಿಶ್ರಫಲ ದೊರೆಯಲಿದೆ. ವಾರದ ಆರಂಭದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರಯತ್ನದ ಬಗ್ಗೆ ಚಿಂತೆ ವ್ಯಕ್ತಪಡಿಸಲಿದ್ದಾರೆ. ಉತ್ತಮ ಸಾಧನೆ ತೋರಬೇಕಾದರೆ ನೀವು ಎಚ್ಚರಿಕೆಯಿಂದ ಕಲಿಯಬೇಕು. ಪ್ರಣಯ ಹಕ್ಕಿಗಳ ವಿಚಾರದಲ್ಲಿ ಹೇಳುವುದಾದರೆ, ನೀವು ಸಾಕಷ್ಟು ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಬೇಕಾದೀತು ಮತ್ತು ಶಾಂತಿಯುತವಾಗಿ ಮುಂದುವರಿಯಬೇಕಾದೀತು. ಆಗ ಮಾತ್ರ ಮೆಲ್ಲನೆ ಯಶಸ್ಸು ದೊರೆಯಲಿದೆ. ವಿವಾಹಿತ ವ್ಯಕ್ತಿಗಳು ಬದುಕನ್ನು ಆನಂದಿಸಲಿದ್ದಾರೆ. ಆದರೂ, ಕೆಲವರು ವಿವಾಹೇತರ ಸಂಬಂಧದತ್ತ ಸಾಗಬಹುದು. ಇದು ನಿಮ್ಮ ಬದುಕಿನಲ್ಲಿ ಸಮಸ್ಯೆಯನ್ನು ಹೆಚ್ಚಿಸಲಿದೆ. ಉದ್ಯೋಗದಲ್ಲಿರುವವರು ಉತ್ತಮ ಪ್ರಗತಿ ಕಾಣಲಿದ್ದಾರೆ. ನೀವು ಉತ್ತಮ ಆರೋಗ್ಯ ಮತ್ತು ಬದುಕನ್ನು ಆನಂದಿಸಲಿದ್ದೀರಿ.

ತುಲಾ: ಈ ವಾರದಲ್ಲಿ ನೀವು ಒಳ್ಳೆಯ ಫಲವನ್ನು ಪಡೆಯಲಿದ್ದೀರಿ. ನಿಮ್ಮ ಪಾಲಿಗೆ ಯಾವ ಅವಕಾಶ ಬಂದರೂ, ಅವುಗಳು ಕೈತಪ್ಪಿ ಹೋಗದಂತೆ ನೋಡಿಕೊಳ್ಳಿ. ಏಕೆಂದರೆ ಇಂತಹ ಅವಕಾಶಗಳು ಇನ್ನೊಮ್ಮೆ ಬರುವುದಿಲ್ಲ. ನೀವು ವ್ಯಾಪಾರೋದ್ಯಮದಲ್ಲಿ ತೊಡಗಿದ್ದರೆ ಹೊಸ ಟೆಂಡರ್‌ ಪಡೆಯಲಿದ್ದು, ಇದರಿಂದ ಸಾಕಷ್ಟು ಲಾಭ ಗಳಿಸಲಿದ್ದೀರಿ. ನೀವು ಚೆನ್ನಾಗಿ ಕೆಲಸ ಮಾಡಿದರೆ, ನಿಮ್ಮ ಪಾಲಿಗೆ ಉತ್ತಮ ಭವಿಷ್ಯವಿದೆ. ನೀವು ನಿಮ್ಮ ಕೆಲಸದಲ್ಲಿ ಸಾಕಷ್ಟು ಲಾಭ ಪಡೆಯಲಿದ್ದೀರಿ. ಆದರೆ ನಿಮ್ಮ ಕಾರ್ಯಭಾರವು ಹೆಚ್ಚಲಿದೆ. ನಿಮಗೆ ಸಂಬಳದಲ್ಲಿ ಒಂದಷ್ಟು ಏರಿಕೆ ಉಂಟಾಗಬಹುದು. ನಿಮ್ಮ ಕುಟುಂಬದ ವಾತಾವರಣವು ಚೆನ್ನಾಗಿರಲಿದೆ. ಆದರೂ ಕುಟುಂಬದಲ್ಲಿ ಯಾರಾದರೂ ಹಿರಿಯರ ಆರೋಗ್ಯದಲ್ಲಿ ಕುಸಿತ ಉಂಟಾಗಲಿದ್ದು, ಇದು ನಿಮ್ಮಲ್ಲಿ ಆತಂಕಕ್ಕೆ ಕಾರಣವಾಗಲಿದೆ. ನೀವು ನಿಮ್ಮ ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ಯಾವುದಾದರೂ ಮದುವೆ ಕಾರ್ಯಕ್ರಮಕ್ಕೆ ಹೋಗಬಹುದು. ವಿವಾಹಿತರು ತಮ್ಮ ವೃತ್ತಿಪರ ಬದುಕಿನಲ್ಲಿ ಸಾಕಷ್ಟು ಹೊರೆಯನ್ನು ಅನುಭವಿಸಲಿದ್ದು, ಇದು ಅವರ ಸಂಬಂಧಕ್ಕೆ ತೊಂದರೆ ಉಂಟು ಮಾಡಲಿದೆ. ನೀವು ನಿಮ್ಮ ಕಚೇರಿಯ ವಿಚಾರಗಳನ್ನು ಕಚೇರಿಯಲ್ಲೇ ಬಿಡಬೇಕು ಮತ್ತು ನಿಮ್ಮ ಜೀವನ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯಬೇಕು. ಒಟ್ಟಾರೆ ನೀವು ಉತ್ತಮ ಆರೋಗ್ಯ ಮತ್ತು ಬದುಕನ್ನು ಆನಂದಿಸಲಿದ್ದೀರಿ.

ವೃಶ್ಚಿಕ: ಈ ವಾರದಲ್ಲಿ ನೀವು ಒಳ್ಳೆಯ ಫಲವನ್ನು ಪಡೆಯಲಿದ್ದೀರಿ. ನೀವು ನಿಮ್ಮ ಚಿಂತೆಯಿಂದ ದೂರವಿರಿ ಮತ್ತು ಒಂಟಿತನ ಮತ್ತು ಏಕಾಂಗಿತನವನ್ನು ಭಾವಿಸಬೇಡಿ. ಇಡೀ ಜಗತ್ತೇ ನಿಮ್ಮ ಜೊತೆ ಇದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ನೀವು ಉತ್ಸಾಹದಿಂದ ಕೆಲಸ ಮಾಡಿದರೆ ಯಶಸ್ಸನ್ನು ಪಡೆಯಲಿದ್ದೀರಿ. ವಾರದ ಆರಂಭದಲ್ಲಿ ನಿಮಗೆ ಸಾಕಷ್ಟು ಖರ್ಚುವೆಚ್ಚ ಉಂಟಾಗಲಿದೆ. ಆದರೆ ಕಾಲ ಕಳೆದಂತೆ ಇದು ಕಡಿಮೆಯಾಗಲಿದೆ. ನಿಮ್ಮ ಕುಟುಂಬದ ಸದಸ್ಯರು ತಮ್ಮ ನಡುವೆ ಉತ್ತಮ ಬಾಂಧವ್ಯವನ್ನು ವ್ಯಕ್ತಪಡಿಸಲಿದ್ದಾರೆ. ಉದ್ಯೋಗದಲ್ಲಿರುವವರು ತಮ್ಮ ವೃತ್ತಿಯಲ್ಲಿ ಉತ್ತಮ ಬೆಳವಣಿಗೆಗಳನ್ನು ಕಾಣಲಿದ್ದಾರೆ. ನಿಮಗೆ ಬೇರೆ ಯಾವುದಾದರೂ ಸ್ಥಳಕ್ಕೆ ವರ್ಗಾವಣೆಯಾಗುವ ಸಾಧ್ಯತೆ ಇದೆ. ವ್ಯಾಪಾರೋದ್ಯಮಿಗಳ ವಿಚಾರದಲ್ಲಿ ಹೇಳುವುದಾದರೆ ದೂರದ ಪ್ರದೇಶಗಳಲ್ಲಿ ನಿಮ್ಮ ವ್ಯಾಪಾರದಲ್ಲಿ ನೀವು ಲಾಭ ಗಳಿಸಲಿದ್ದೀರಿ. ಜನರೊಂದಿಗಿನ ನಿಮ್ಮ ಜಾಲವು ವೃದ್ಧಿಸಲಿದ್ದು, ಇದು ನಿಮಗೆ ವ್ಯವಹಾರದಲ್ಲಿ ಲಾಭ ಗಳಿಸಲಿದೆ. ವಿವಾಹಿತ ಜನರು ಹೆಚ್ಚು ಸಂತೃಪ್ತಿ ಸಾಧಿಸಲಿದ್ದಾರೆ. ಪ್ರಣಯ ಪಕ್ಷಿಗಳಿಗೂ ಇದು ಸಕಾಲ.

ಧನು: ನಿಮ್ಮ ಪಾಲಿಗೆ ಉತ್ತಮ ವಾರವಿದು. ವಾರದ ಆರಂಭದಲ್ಲಿ ನಿಮ್ಮ ಗಳಿಕೆಯಲ್ಲಿ ಹೆಚ್ಚಳ ಉಂಟಾಗಲಿದೆ. ನೀವು ಆನಂದ ಮತ್ತು ಸಂತೃಪ್ತಿ ಗಳಿಸಲಿದ್ದೀರಿ. ವಿವಾಹಿತ ಜನರು ಧನಾತ್ಮಕ ಪ್ರಗತಿಯನ್ನು ಕಾಣಲಿದ್ದೀರಿ. ಅಲ್ಲದೆ ನಿಮ್ಮ ಜೀವನ ಸಂಗಾತಿಯ ಜೊತೆಗೆ ನೀವು ಉತ್ತಮ ಸಂವಹನವನ್ನು ಸಾಧಿಸಲಿದ್ದೀರಿ. ನೀವು ನಿಮ್ಮ ಸಂಗಾತಿಯ ಮನ ಗೆಲ್ಲಲಿದ್ದು, ಇದು ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ. ಪ್ರಣಯ ಹಕ್ಕಿಗಳ ವಿಚಾರದಲ್ಲಿ ಹೇಳುವುದಾದರೆ, ಇದು ಸೂಕ್ಷ್ಮ ಸಮಯವಾಗಿರುವುದರಿಂದ ಇದು ಸಾಕಷ್ಟು ಜಾಗರೂಕರಾಗಿರುವುದು ಒಳ್ಳೆಯದು. ನಿಮ್ಮ ಕೆಲಸದಲ್ಲಿ ನಿಮಗೆ ಬಡ್ತಿ ದೊರೆಯುವ ಬಲವಾದ ಸಾಧ್ಯತೆ ಇದೆ. ವ್ಯಾಪಾರೋದ್ಯಮಿಗಳಿಗೂ ಇದು ಸಕಾಲ. ನಿಮ್ಮ ಚತುರ ಬುದ್ದಿಯು ಮಾರುಕಟ್ಟೆಯನ್ನು ಆಕ್ರಮಿಸಲಿದೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಮಕರ: ಇದು ನಿಮ್ಮ ಪಾಲಿಗೆ ಅತ್ಯಂತ ಫಲದಾಯಕ ವಾರ ಎನಿಸಲಿದೆ. ನೀವು ನಿಮ್ಮ ಕೆಲಸದ ಮೇಲೆ ಗಮನ ಹರಿಸಲಿದ್ದು, ನಿಮ್ಮ ಕೆಲಸದಲ್ಲಿ ಸಂಪೂರ್ಣ ಸಮರ್ಪಣಾ ಭಾವದಿಂದ ತೊಡಗಿಸಿಕೊಳ್ಳಲಿದ್ದೀರಿ. ಈ ಗಮನ ಮತ್ತು ಸಮರ್ಪಣಾ ಭಾವವು ನಿಮ್ಮ ಕೆಲಸದ ಗುಣಮಟ್ಟವನ್ನು ಸುಧಾರಿಸಲಿದೆ. ವ್ಯಾಪಾರೋದ್ಯಮಿಗಳು ಕೆಲವೊಂದು ಸರ್ಕಾರಿ ನೀತಿಗಳು ಅಥವಾ ಮಾರ್ಗಸೂಚಿಗಳ ಕಾರಣ ಲಾಭ ಪಡೆಲಿದ್ದಾರೆ. ನೀವು ಸರ್ಕಾರಿ ಮಾರ್ಗಸೂಚಿಗಳನ್ನು ಅನುಸರಿಸಿದರೆ, ಇನ್ನೂ ಚೆನ್ನಾಗಿ ನೀವು ಕೆಲಸವನ್ನು ಮುಂದುವರಿಸಲಿದ್ದೀರಿ. ನೀವು ಕೌಟುಂಬಿಕ ಬದುಕಿನಲ್ಲಿ ಉತ್ತಮವಾಗಿ ಕಾಲ ಕಳೆಯಲಿದ್ದು, ಸಾಂದರ್ಭಿಕ ಅಡಚಣೆಗಳು ಮತ್ತು ಶಾಂತಿಭಂಗ ಉಂಟಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ಪ್ರಣಯ ಹಕ್ಕಿಗಳಿಗೆ ಇದು ಸಕಾಲ ಹಾಗೂ ಅವರು ಸಾಂಗತ್ಯವನ್ನು ಸಂಪೂರ್ಣವಾಗಿ ಆನಂದಿಸಲಿದ್ದಾರೆ. ನೀವು ಏನಾದರೂ ಹೊಸತನ್ನು ಹಾಗೂ ಸಂಪೂರ್ಣವಾಗಿ ಭಿನ್ನವಾದುದನ್ನು ಮಾಡಲು ಪ್ರಯತ್ನಿಸಲಿದ್ದೀರಿ. ಇದು ನಿಮ್ಮ ಸೃಜನಶೀಲತೆಯನ್ನು ಹೆಚ್ಚಿಸಲಿದೆ. ನೀವು ಪ್ರವಾಸಕ್ಕೆ ಹೋಗಲು ಇಚ್ಛಿಸುವುದಾದರೆ, ವಾರದ ಮಧ್ಯ ಭಾಗದಲ್ಲಿ ಹೋಗುವುದು ಒಳ್ಳೆಯದು.

ಕುಂಭ: ಇದು ನಿಮ್ಮ ಪಾಲಿಗೆ ಉತ್ತಮ ವಾರ ಎನಿಸಲಿದೆ. ನಿಮ್ಮ ಕೆಲವೊಂದು ವೃತ್ತಿಪರ ಯೋಜನೆಗಳು ನಿಜಕ್ಕೂ ಉತ್ತಮ ಫಲ ನೀಡಲಿದ್ದು, ಸಾಕಷ್ಟು ಗಳಿಕೆ ಉಂಟಾಗಲಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಇದೇ ವೇಳೆ ನಿಮ್ಮ ಖರ್ಚುವೆಚ್ಚದಲ್ಲಿ ಇಳಿಕೆ ಉಂಟಾಗಲಿದೆ. ಈ ಎಲ್ಲಾ ಬೆಳವಣಿಗೆಗಳು ನಿಮ್ಮಲ್ಲಿ ಸಂತಸ ಮತ್ತು ಸಂತೃಪ್ತಿ ತರಲಿವೆ. ಆದರೂ, ಹಣಕಾಸಿನ ವಿಚಾರದಲ್ಲಿ ನೀವು ಜಾಗರೂಕತೆಯಿಂದ ಇರುವುದು ಒಳ್ಳೆಯದು. ಏಕೆಂದರೆ ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗುವ ಸಾಧ್ಯತೆ ಇದೆ. ವಿವಾಹಿತ ಜೋಡಿಗಳು ಮಧುರ ಮತ್ತು ಪ್ರಣಯಭರಿತ ಕ್ಷಣಗಳನ್ನು ಆನಂದಿಸಲಿದ್ದಾರೆ. ಪ್ರೇಮ ಸಂಬಂಧದಲ್ಲಿರುವ ಅವಿವಾಹಿತರು ತಮ್ಮ ಪ್ರಣಯ ಸಂಗಾತಿಗಳಿಗೆ ತನ್ನ ಪ್ರೇಮವನ್ನು ನಿವೇದಿಸಿಕೊಳ್ಳಲು ಇದು ಸಕಾಲ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಲಿದ್ದು, ಇದು ಉತ್ತಮ ಫಲಿತಾಂಶವನ್ನು ತರಲಿದೆ. ವಾರದ ಆರಂಭವು ಪ್ರವಾಸಕ್ಕೆ ಹೋಗಲು ನಿಮಗೆ ಸಕಾಲ. ನೀವು ಉತ್ತಮ ಆರೋಗ್ಯವನ್ನು ಆನಂದಿಸಲಿದ್ದೀರಿ.

ಮೀನ: ಇದು ನಿಮ್ಮ ಪಾಲಿಗೆ ಅತ್ಯಂತ ಫಲಪ್ರದ ವಾರ ಎನಿಸಲಿದೆ. ವಾರದ ಪ್ರಾರಂಭದಲ್ಲಿ ನೀವು ನಿಮ್ಮ ಖರ್ಚು ವೆಚ್ಚದ ಮೇಲೆ ಗಮನ ಹರಿಸಲಿದ್ದೀರಿ. ಅನಗತ್ಯವಾಗಿ ಪ್ರಯಾಣಿಸಬೇಡಿ ಹಾಗೂ ಚಿಂತೆ, ಒತ್ತಡಗಳಿಗೆ ಆಸ್ಪದ ನೀಡಬೇಡಿ. ನೀವು ಯಾರೊಂದಿಗೂ ಮಾತನಾಡಿದರೆ ಮಾತ್ರವೇ ವಾಗ್ವಾದ ಉಂಟಾಗುತ್ತದೆ ಎಂಬುದನ್ನು ಗಮನದಲ್ಲಿಡಿ. ಅಲ್ಲದೆ ನಿಮ್ಮ ಅತ್ತೆ ಮಾವಂದಿರ ಜೊತೆಗೆ ನೀವು ಉತ್ತಮ ಸಂಬಂಧವನ್ನು ಆನಂದಿಸಲಿದ್ದೀರಿ. ಕೌಟುಂಬಿಕ ಬದುಕು ಸಾಂಗವಾಗಿ ಮುಂದುವರಿಯಲಿದೆ. ಪ್ರೇಮಿಗಳ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಸಂಗಾತಿಯು ಸಾಕಷ್ಟು ಅಸಭ್ಯ ಮತ್ತು ಒರಟು ಸ್ವಭಾವದವರಂತೆ ನಿಮಗೆ ಭಾಸವಾಗಬಹುದು. ಇದು ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ತಾಳ್ಮೆಯಿಂದ ಇರಿ ಹಾಗೂ ಶಾಂತಚಿತ್ತದಿಂದ ಕೆಲಸ ಮಾಡಿ. ಉದ್ಯೋಗದಲ್ಲಿರುವವರು ತಮ್ಮ ಗುರಿ ಮತ್ತು ಉದ್ದೇಶವನ್ನು ಸಾಧಿಸಲು ಕಠಿಣ ಪ್ರಯತ್ನ ಮಾಡಲಿದ್ದಾರೆ. ವ್ಯಾಪಾರೋದ್ಯಮಿಗಳು ತಮ್ಮ ಗುರಿಯನ್ನು ಸಾಧಿಸಲಿದ್ದಾರೆ. ಇವರು ಈ ಗುರಿಯನ್ನು ದಾಟಿಯೂ ಸಾಗಬಹುದು. ನಿಮ್ಮ ವಿರೋಧಿಗಳ ಕುರಿತು ಜಾಗರೂಕರಾಗಿರಿ. ವಾರದ ಮಧ್ಯ ಭಾಗವು ಪ್ರಯಾಣಕ್ಕೆ ಅನುಕೂಲಕರ. ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.