ನವದೆಹಲಿ: ಫೈಜರ್ ಕಂಪನಿ ಕೋವಿಡ್ ಲಸಿಕೆ ದೇಶದಲ್ಲಿ ರೋಗನಿರೋಧಕ ಕಾರ್ಯಕ್ರಮದಲ್ಲಿ ಬಳಸಲು ಲಭ್ಯವಾಗುವಂತೆ ಮಾಡುವಲ್ಲಿ, ತನ್ನ ಲಸಿಕೆ ಅನುಮೋದನೆಗಾಗಿ ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ.
ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಲಸಿಕೆಗಳ ನಿರ್ದಿಷ್ಟ ಪ್ರಯೋಗಗಳಿಗೆ ವಿನಾಯಿತಿ ನೀಡಿದ ನಂತರ ಕಂಪನಿಯಿಂದ ಈ ಹೇಳಿಕೆ ಬಂದಿದೆ, ಇದನ್ನು ಇತರ ಕೆಲವು ಅಂತಾರಾಷ್ಟ್ರೀಯ ನಿಯಂತ್ರಕ ಸಂಸ್ಥೆಗಳು ಅನುಮೋದಿಸಿವೆ.
ಕೋವಿಡ್ ಲಸಿಕೆ ಪೂರೈಕೆಗಾಗಿ ಭಾರತ ಸರ್ಕಾರದೊಂದಿಗೆ ಫೈಜರ್ ಮಾತುಕತೆಯಲ್ಲಿ ತೊಡಗಿರುವುದಾಗಿ ಹೇಳಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಲಸಿಕೆಗಳ ನಿರ್ದಿಷ್ಟ ಪ್ರಯೋಗಗಳಿಗೆ ವಿನಾಯಿತಿ ನೀಡಿದ ನಂತರ ಕಂಪನಿಯಿಂದ ಈ ಹೇಳಿಕೆ ಬಂದಿದೆ. ಇದನ್ನು ಇತರ ಕೆಲವು ಅಂತಾರಾಷ್ಟ್ರೀಯ ನಿಯಂತ್ರಕ ಸಂಸ್ಥೆಗಳು ಅನುಮೋದಿಸಿವೆ. ಈ ಚರ್ಚೆಗಳು ನಡೆಯುತ್ತಿರುವುದರಿಂದ, ಈ ಸಮಯದಲ್ಲಿ ಯಾವುದೇ ಹೆಚ್ಚುವರಿ ವಿವರಗಳನ್ನು ಹಂಚಿಕೊಳ್ಳಲು ನಮಗೆ ಸಾಧ್ಯವಿಲ್ಲ ಎಂದು ಫೈಜರ್ ವಕ್ತಾರರು ತಿಳಿಸಿದ್ದಾರೆ.
ಇತರ ಅಂತಾರಾಷ್ಟ್ರೀಯ ನಿಯಂತ್ರಕ ಸಂಸ್ಥೆಗಳಿಂದ ಅಂಗೀಕರಿಸಲ್ಪಟ್ಟ ಲಸಿಕೆಗಳ ನಿರ್ದಿಷ್ಟ ಪ್ರಯೋಗಗಳಿಗೆ ಡಿಸಿಜಿಐ ವಿನಾಯ್ತಿ ನೀಡಿದೆ. ದೇಶದ ತುರ್ತು ಅವಶ್ಯಕತೆಗಾಗಿ ಫೈಜರ್ ಮತ್ತು ಮೊಡೆರ್ನಾದಂತಹ ವಿದೇಶಿ ಲಸಿಕೆಗಳ ಪೂರೈಕೆಗೆ ಡಿಸಿಜಿಐ ಹಾದಿ ಸುಗಮಗೊಳಿಸಿದೆ.
ಯುಎಸ್ ಎಫ್‌ಡಿಎ, ಇಎಂಎ, ಯುಕೆ ಎಂಹೆಚ್‌ಆರ್‌ಎ, ಪಿಎಮ್‌ಡಿಎ ಜಪಾನ್ ನಿರ್ಬಂಧಿತ ಬಳಕೆಗೆ ಈಗಾಗಲೇ ಅನುಮೋದನೆ ಪಡೆದಿರುವ ಅಥವಾ ವಿಶ್ವ ಆರೋಗ್ಯ ಸಂಸ್ಥೆಯಿಂದ ತುರ್ತು ಬಳಕೆಗಾಗಿ ಪಟ್ಟಿ ಮಾಡಲಾದ ಲಸಿಕೆಗಳಿಗೆ ಇದು ಅನ್ವಯವಾಗಲಿದೆ ಎಂದು ಡಿಸಿಜಿಐ ಮುಖ್ಯಸ್ಥ ವಿ.ಜಿ.ಸೋಮಾನಿ ಪತ್ರವೊಂದರಲ್ಲಿ ತಿಳಿಸಿದ್ದಾರೆ.