ಬೆಂಗಳೂರು : ಭಾರತದ ಬಹುನಿರೀಕ್ಷಿತ ಗಗನಯಾನ್ ಮಿಷನ್ಗಾಗಿ ಲಿಕ್ವಿಡ್ ಪ್ರೊಪೆಲ್ಲೆಂಟ್ ಹೊಂದಿರುವ ವಿಕಾಸ್ ಎಂಜಿನ್ನ ಮೂರನೇ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದಕ್ಕೆ ಸ್ಪೇಸ್ ಎಕ್ಸ್ ಸಿಇಒ ಎಲಾನ್ ಮಸ್ಕ್ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು (ಇಸ್ರೋ) ಅಭಿನಂದಿಸಿದ್ದಾರೆ.
ಇಸ್ರೋ ವಿಕಾಸ್ ಎಂಜಿನ್ ಅನ್ನು ಯಶಸ್ವಿಯಾಗಿ ಪರೀಕ್ಷೆ ಮಾಡಿದ ಕಾರಣದಿಂದ ಟ್ವೀಟ್ ಮಾಡಿದ್ದು, ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಎಲಾನ್ ಮಸ್ಕ್ ಭಾರತೀಯ ಧ್ವಜದೊಂದಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.
-
Congratulations! 🇮🇳
— Elon Musk (@elonmusk) July 14, 2021 " class="align-text-top noRightClick twitterSection" data="
">Congratulations! 🇮🇳
— Elon Musk (@elonmusk) July 14, 2021Congratulations! 🇮🇳
— Elon Musk (@elonmusk) July 14, 2021
ಗಗನಯಾನ್ ಮಿಷನ್ಗಾಗಿ ಜಿಎಸ್ಎಲ್ವಿ ಎಂಕೆ-3(GSLV MK-III) ಉಡಾವಣಾ ವಾಹನದ ವಿಕಾಸ್ ಎಂಜಿನ್ನ ಕೋರ್ L110ನ ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡಲಾಗಿತ್ತು ಎಂದು ಇಸ್ರೋ ಟ್ವೀಟ್ನಲ್ಲಿ ಹೇಳಿತ್ತು.
ಪರೀಕ್ಷೆ ವೇಳೆ ಇಂಜಿನ್ ಅನ್ನು 240 ಸೆಕೆಂಡ್ಗಳ ಕಾಲ ಹಾರಿಸಲಾಗಿದೆ ಎಂದು ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್ (ಐಪಿಆರ್ಸಿ) ಸ್ಪಷ್ಟನೆ ನೀಡಿದೆ. ಜೊತೆಗೆ ಎಂಜಿನ್ ಕಾರ್ಯಕ್ಷಮತೆ ಹೊಂದಿದ್ದು, ಪರೀಕ್ಷಾ ಉದ್ದೇಶಗಳನ್ನು ಪೂರೈಸಿದೆ ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ: ಇಸ್ರೋದಲ್ಲಿ ಅಪ್ರೆಂಟಿಷಿಪ್ ಹುದ್ದೆ: ಅರ್ಜಿ ಸಲ್ಲಿಕೆಗೂ ಮುನ್ನ ಈ ವಿಚಾರಗಳು ನಿಮಗೆ ತಿಳಿದಿರಲಿ..
ಭಾರತೀಯ ಉಡಾವಣಾ ವಾಹನದಲ್ಲಿ ಬಾಹ್ಯಾಕಾಶಯಾನಿಗಳು ಭೂಮಿಯ ಕಕ್ಷೆಗೆ ಅಥವಾ ಬಾಹ್ಯಾಕಾಶಕ್ಕೆ ಕಳುಹಿಸುವುದು ಗಗನಯಾನ್ ಮಿಷನ್ ಉದ್ದೇಶವಾಗಿದೆ.