ETV Bharat / bharat

ಆಹಾರ ಅರಸಿ ನಾಡಿಗೆ ಲಗ್ಗೆ ಇಟ್ಟ ಆನೆಗಳ ಹಿಂಡು: ರೈಸ್​ ಮಿಲ್​ ಮೇಲೆ ದಾಳಿ - ಗ್ರಾಮಕ್ಕೆ ನುಗ್ಗಿದ ಆನೆಗಳ ಹಿಂಡು

ಆಂಧ್ರ ಪ್ರದೇಶದ ಪಾರ್ವತಿಪುರಂ ಮಾನ್ಯಂ ಜಿಲ್ಲೆಯ ಖಡ್ಗವಲಸ ಗ್ರಾಮಕ್ಕೆ ಏಕಾಏಕಿ ನುಗ್ಗಿದ ಆನೆಗಳ ಹಿಂಡು ರೈಸ್ ಮಿಲ್​ ಮೇಲೆ ದಾಳಿ ಮಾಡಿವೆ.

elephants-raiding-villages-for-food in Andhra-pradesh
ಆಹಾರ ಅರಸಿ ನಾಡಿಗೆ ಲಗ್ಗೆ ಇಟ್ಟ ಆನೆಗಳ ಹಿಂಡು: ರೈಸ್​ ಮಿಲ್​ ಮೇಲೆ ದಾಳಿ
author img

By

Published : Nov 11, 2022, 3:33 PM IST

Updated : Nov 11, 2022, 4:12 PM IST

ಪಾರ್ವತಿಪುರಂ ಮಾನ್ಯಂ (ಆಂಧ್ರ ಪ್ರದೇಶ): ಆಂಧ್ರ ಪ್ರದೇಶದ ಪಾರ್ವತಿಪುರಂ ಮಾನ್ಯಂ ಜಿಲ್ಲೆಯಲ್ಲಿ ಆನೆಗಳು ಆಹಾರ ಅರಸಿ ಕಾಡಿನಿಂದ ನಾಡಿಗೆ ಲಗ್ಗೆ ಇಟ್ಟಿವೆ. ಏಕಾಏಕಿ ಅನೇಕ ಆನೆಗಳು ಗ್ರಾಮಕ್ಕೆ ನುಗ್ಗಿದ್ದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಆಹಾರ ಅರಸಿ ನಾಡಿಗೆ ಲಗ್ಗೆ ಇಟ್ಟ ಆನೆಗಳ ಹಿಂಡು: ರೈಸ್​ ಮಿಲ್​ ಮೇಲೆ ದಾಳಿ

ಕಳೆದ ಕೆಲವು ದಿನಗಳಿಂದ ಸ್ಥಳೀಯ ಅರಣ್ಯ ಪ್ರದೇಶದಿಂದ ಆನೆಗಳು ಬರುತ್ತಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಇದೀಗ ಕುರುಪಾಂ ಕ್ಷೇತ್ರದಲ್ಲಿ ಆನೆಗಳು ಅವಾಂತರ ಸೃಷ್ಟಿಸಿವೆ. ಗರುಗಬಿಲ್ಲಿ ಮಂಡಲದ ಖಡ್ಗವಲಸ ಗ್ರಾಮಕ್ಕೆ ನುಗ್ಗಿದ ಆನೆಗಳ ಹಿಂಡು ರೈಸ್ ಮಿಲ್​ ಮೇಲೆ ದಾಳಿ ಮಾಡಿವೆ. ಇಡೀ ಆವರಣವನ್ನು ಆನೆಗಳು ಧ್ವಂಸಗೊಳಿಸಿವೆ.

ಗೋದಾಮಿನ ಬಾಗಿಲು ಮುಚ್ಚಿದ್ದರಿಂದ ಹೊರಗೆ ಯಾವುದೇ ಧಾನ್ಯ ಸಿಕ್ಕಿಲ್ಲ. ಜೊತೆಗೆ ಆನೆಗಳು ಸಹ ಹೆಚ್ಚಿನ ಹಾನಿಯನ್ನು ಮಾಡಿಲ್ಲ. ಒಂದು ವಾರದ ಹಿಂದೆ ಕೂಡ ಮತ್ತೊಂದು ರೈಸ್ ಮಿಲ್​ಗೆ​ ನುಗ್ಗಿದ್ದ ಆನೆಗಳು ಅಕ್ಕಿ ಸೇವಿಸಿದ್ದವು. ಹೀಗಾಗಿ ಆನೆಗಳಿಂದ ರಕ್ಷಣೆ ನೀಡುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯ ಮೊರೆ ಹೋಗುತ್ತಿದ್ದಾರೆ.

ಇದನ್ನೂ ಓದಿ: ಎರಡು ಕಾಡಾನೆಗಳ ಕಳೇಬರ ಪತ್ತೆ.. ವಿಷಪ್ರಾಶನ ಶಂಕೆ

Last Updated : Nov 11, 2022, 4:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.