ETV Bharat / bharat

ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್​ ನಾಯಕನ ಭೇಟಿ: ತೆಲಂಗಾಣ ಡಿಜಿಪಿ ಅಮಾನತು - ಡಿಜಿಪಿ ಅಂಜನಿ ಕುಮಾರ್

Telangana Assembly polls 2023: ತೆಲಂಗಾಣ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಂಜನಿ ಕುಮಾರ್ ಅವರನ್ನು ಚುನಾವಣಾ ಆಯೋಗವು ಅಮಾನತುಗೊಳಿಸಿದೆ ಎಂದು ವರದಿಯಾಗಿದೆ.

Election Commission orders suspension of Telangana DGP for model code violation: Sources
ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್​ನ ನಾಯಕನ ಭೇಟಿ: ತೆಲಂಗಾಣ ಡಿಜಿಪಿ ಅಮಾನತು
author img

By PTI

Published : Dec 3, 2023, 5:55 PM IST

ಹೈದರಾಬಾದ್​ (ತೆಲಂಗಾಣ): ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ತೆಲಂಗಾಣ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಂಜನಿ ಕುಮಾರ್ ಅವರನ್ನು ಚುನಾವಣಾ ಆಯೋಗವು ಅಮಾನತು ಮಾಡಿ ಆದೇಶಿಸಿದೆ. ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲೇ ಕಾಂಗ್ರೆಸ್​ ರಾಜ್ಯ ಘಟಕದ ಅಧ್ಯಕ್ಷ ರೇವಂತ್​ ರೆಡ್ಡಿ ಅವರನ್ನು ಡಿಜಿಪಿ ಸೇರಿದಂತೆ ಇತರ ಪೊಲೀಸ್​ ಅಧಿಕಾರಿಗಳು ಭೇಟಿ ಮಾಡಿದ್ದರು.

ತೆಲಂಗಾಣದ 119 ಸದಸ್ಯ ಬಲದ ವಿಧಾನಸಭೆಯ ಚುನಾವಣಾ ಫಲಿತಾಂಶ ಬಹುತೇಕ ಹೊರಬಂದಿದೆ. ಆಡಳಿತಾರೂಢ ಬಿಆರ್​ಎಸ್​ ವಿರುದ್ಧ ಕಾಂಗ್ರೆಸ್​ ಗೆಲುವು ಸಾಧಿಸಿದೆ. ಕೈ ಪಡೆ 63 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಆರ್​ಎಸ್​ 40 ಸ್ಥಾನಗಳಿಗೆ ಕುಸಿದಿದೆ. ಬಿಜೆಪಿ 9 ಕ್ಷೇತ್ರ ಮತ್ತು ಎಐಎಂಐಎಂ 6 ಕ್ಷೇತ್ರ ಹಾಗೂ ಒಂದು ಕಡೆ ಸಿಪಿಐ ಮುನ್ನಡೆಯಲ್ಲಿದೆ.

  • #UPDATE | The Election Commission of India has suspended Anjani Kumar, Director General of Police Telangana for violation of the Model Code of Conduct and relevant conduct rules: Sources

    The Director General of Police Telangana along with Sanjay Jain, State Police Nodal Officer,… https://t.co/FGltWV2Bxe pic.twitter.com/2m7XpbjBqj

    — ANI (@ANI) December 3, 2023 " class="align-text-top noRightClick twitterSection" data=" ">

ಚುನಾವಣೆಯ ಫಲಿತಾಂಶ ಪೂರ್ಣವಾಗಿ ಪ್ರಕಟವಾಗುವ ಮೊದಲೇ ಕಾಂಗ್ರೆಸ್​ ಸಿಎಂ ಅಭ್ಯರ್ಥಿ ಎಂದೇ ಗುರುತಿಸಿಕೊಂಡಿರುವ ರೇವಂತ್​ ರೆಡ್ಡಿ ಅವರನ್ನು ಪೊಲೀಸ್​ ಅಧಿಕಾರಿಗಳು ಭೇಟಿಯಾಗಿ ಶುಭಾಶಯ ಕೋರಿದ್ದರು. ಹೈದರಾಬಾದ್​ನಲ್ಲಿ ರೇವಂತ್ ರೆಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿರುವ ಡಿಜಿಪಿ ಅಂಜನಿ ಕುಮಾರ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ಹೂಗುಚ್ಛ ನೀಡಿ ಅಭಿನಂದಿಸಿದ್ದರು. ತೆಲಂಗಾಣದ ರಾಜ್ಯ ಪೊಲೀಸ್ ನೋಡಲ್ ಅಧಿಕಾರಿ ಸಂಜಯ್ ಜೈನ್ ಮತ್ತು ನೋಡಲ್ (ವೆಚ್ಚ) ಅಧಿಕಾರಿ ಮಹೇಶ್ ಭಾಗವತ್ ಸಹ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿದ್ದರು.

ಇದನ್ನೂ ಓದಿ: ತೆಲಂಗಾಣ ಅಚ್ಚರಿ ಫಲಿತಾಂಶ: ಹಾಲಿ ಸಿಎಂ ಕೆಸಿಆರ್​, ಸಿಎಂ ಆಕಾಂಕ್ಷಿ ರೇವಂತ್ ವಿರುದ್ಧ ಬಿಜೆಪಿಗೆ ಗೆಲುವು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.