ETV Bharat / bharat

ರಾಷ್ಟ್ರಪತಿ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಿದ ಚುನಾವಣಾ ಆಯೋಗ

ದೇಶದ ನೂತನ ರಾಷ್ಟ್ರಪತಿಗಳ ಆಯ್ಕೆಗೆ ಚುನಾವಣಾ ಆಯೋಗ ಇಂದು ಮುಹೂರ್ತ ಫಿಕ್ಸ್ ಮಾಡಿದೆ.

presidential elections date
presidential elections date
author img

By

Published : Jun 9, 2022, 3:34 PM IST

Updated : Jun 9, 2022, 3:42 PM IST

ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಅವರ ಅಧಿಕಾರವಧಿ ಜುಲೈ 24ರಂದು ಅಂತ್ಯಗೊಳ್ಳಲಿದ್ದು ಹೊಸ ರಾಷ್ಟ್ರಪತಿ ಆಯ್ಕೆಗೆ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಜುಲೈ 18ರಂದು ರಾಷ್ಟ್ರಪತಿ ಚುನಾವಣೆಗೆ ದಿನಾಂಕ ನಿಗದಿ ಮಾಡಲಾಗಿದೆ. ಜುಲೈ 21ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಒಟ್ಟು 4,809 ಮತದಾರರು ಭಾಗಿಯಾಗಲಿದ್ದು, ಯಾವುದೇ ಪಕ್ಷ ತನ್ನ ಸಂಸದರು, ಶಾಸಕರಿಗೆ ವಿಪ್ ಜಾರಿ ಮಾಡುವಂತಿಲ್ಲ ಎಂದು ಆಯೋಗ ತಿಳಿಸಿದೆ.

ಸಂವಿಧಾನದ 62ನೇ ವಿಧಿ ಪ್ರಕಾರ, ಮುಂದಿನ ರಾಷ್ಟ್ರಪತಿ ಜುಲೈ 25ರೊಳಗೆ ಪ್ರಮಾಣವಚನ ಸ್ವೀಕಾರ ಮಾಡಬೇಕಾಗಿದೆ. 2017ರಲ್ಲಿ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ರಾಮನಾಥ್ ಕೋವಿಂದ್​ ಶೇ. 65.35ರಷ್ಟು ಮತ​ಗಳಿಸಿ ಭಾರತದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು.

ರಾಷ್ಟ್ರಪತಿಗಳ ಆಯ್ಕೆ ವಿಧಾನ ಹೀಗೆ..: ಲೋಕಸಭೆ ಮತ್ತು ರಾಜ್ಯಸಭೆಯ ಒಟ್ಟು 776 ಸಂಸದರು ಮತ್ತು ಎಲ್ಲ ರಾಜ್ಯಗಳ 4,120 ಶಾಸಕರು ಮತದಾರರಾಗಿರುತ್ತಾರೆ. ಒಟ್ಟು ಮತದಾರರ​​​ ಸಂಖ್ಯೆ 4,896. ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರೊಬ್ಬರ ಮತದ ಮೌಲ್ಯ 708. ರಾಜ್ಯದ ಜನಸಂಖ್ಯೆಯನ್ನು ಒಟ್ಟು ಶಾಸಕರ ಸಂಖ್ಯೆಯೊಂದಿಗೆ ಭಾಗಿಸಬೇಕು. ಬಳಿಕ ಬರುವ ಶೇಷವನ್ನು ಒಂದು ಸಾವಿರದೊಂದಿಗೆ ಗುಣಿಸಿದಾಗ ಶಾಸಕರ ಮತದ ಮೌಲ್ಯ ಸಿಗುತ್ತದೆ.

ಆದರೆ, ವಿಧಾನಪರಿಷತ್ ಸದಸ್ಯರು, ನಾಮನಿರ್ದೇಶಿತ ಸಂಸದ ಮತ್ತು ಶಾಸಕರಿಗೆ ಮತದಾನದ ಹಕ್ಕು ಇರುವುದಿಲ್ಲ. ರಾಷ್ಟ್ರಪತಿ ಚುನಾವಣೆ ಸಂವಿಧಾನದ ವಿಧಿ 62ರ ಪ್ರಕಾರ ಚುನಾವಣೆ ನಡೆಯುತ್ತದೆ.

Last Updated : Jun 9, 2022, 3:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.