ನವದೆಹಲಿ: ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸೋಂ ಹಾಗೂ ಪುದುಚೇರಿ ವಿಧಾನಸಭೆ ಚುನಾವಣೆಗೆ ಇದೀಗ ಕೇಂದ್ರ ಚುನಾವಣಾ ಆಯೋಗದಿಂದ ದಿನಾಂಕ ಘೋಷಣೆಯಾಗಿದೆ.
ಐದು ರಾಜ್ಯಗಳಲ್ಲಿ ಒಟ್ಟು 18.68 ಕೋಟಿ ಮತದಾರರು ವೋಟ್ ಮಾಡಲಿದ್ದು, 2.7 ಲಕ್ಷ ವೋಟಿಂಗ್ ಕೇಂದ್ರ ಇರಲಿವೆ. ಕೋವಿಡ್ ಕಾರಣ ಒಂದು ಗಂಟೆ ಹೆಚ್ಚು ಮತದಾನಕ್ಕೆ ಅವಕಾಶ ನೀಡಲಾಗಿದೆ.
ಚುನಾವಣಾ ದಿನಾಂಕ ಇಂತಿದೆ
ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಚುನಾವಣೆ
- ಮೊದಲ ಹಂತ: ಮಾರ್ಚ್ 27
- ಎರಡನೇ ಹಂತ ಏಪ್ರಿಲ್ 1
- ಮೂರನೇ ಹಂತ ಏಪ್ರಿಲ್ 6
- ನಾಲ್ಕನೇ ಹಂತ ಏಪ್ರಿಲ್ 10
- ಐದನೇ ಹಂತ ಏಪ್ರಿಲ್ 17
- ಆರನೇ ಹಂತ ಏಪ್ರಿಲ್ 22
- ಏಳನೇ ಹಂತ ಏಪ್ರಿಲ್ 26
- ಎಂಟನೇ ಹಂತ ಏಪ್ರಿಲ್ 29
- ಮೇ 2ರಂದು ಚುನಾವಣೆ ಫಲಿತಾಂಶ
ಕೇರಳ ಜತೆಗೆ ತಮಿಳುನಾಡಿನ ಚುನಾವಣೆ ಎಪ್ರಿಲ್ 6ರಂದು
- ತಮಿಳುನಾಡಿನ 234 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ವೋಟಿಂಗ್
- ಪುದುಚೇರಿಯಲ್ಲಿ ಏಪ್ರಿಲ್ 6ರಂದು ಮತದಾನ
- ಅಸ್ಸೋಂನಲ್ಲಿ ಮೂರು ಹಂತದಲ್ಲಿ ವೋಟಿಂಗ್
- ಮಾರ್ಚ್ 27ರಂದು ಮೊದಲ ಹಂತ, ಏಪ್ರಿಲ್ 1ರಂದು ಎರಡನೇ ಹಂತ ಹಾಗೂ ಏಪ್ರಿಲ್ 6ರಂದು ಮೂರನೇ ಹಂತ
ಕೇರಳ: 140 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ವೊಟಿಂಗ್
- 12 ಮಾರ್ಚ್ ನಾಮಪತ್ರ ಸಲ್ಲಿಕೆ
- 20 ಮಾರ್ಚ್ ನಾಮಪತ್ರ ಪರಿಶೀಲನೆ
- 22 ಮಾರ್ಚ್ ನಾಮಪತ್ರ ಹಿಂಪಡೆತ
- 6 ಏಪ್ರಿಲ್ ರಂದು ಮತದಾನ
- ಮೇ. 2ರಂದು ಮತ ಎಣಿಕೆ
ಅಸ್ಸೋಂದಲ್ಲಿ ಮೂರು ಹಂತದಲ್ಲಿ ಮತದಾನ
- ಅಸ್ಸಾಂ: ಒಟ್ಟು 3 ಹಂತಗಳಲ್ಲಿ ಮತದಾನ
- ಮೊದಲ ಹಂತ – 2ನೇ ಮಾರ್ಚ್ ಅಧಿಸೂಚನೆ, 77 ವಿಧಾನಸಭೆ ಕ್ಷೇತ್ರ
- 9 ಮಾರ್ಚ್ ನಾಮಪತ್ರ ಸಲ್ಲಿಕೆಗೆ ಕೊನೆ ದಿನ
- ನಾಮಪತ್ರ ಪರಿಶೀಲನೆ 10 ಮಾರ್ಚ್
- ನಾಮಪತ್ರ ಹಿಂಪಡೆತಕ್ಕೆ ಕೊನೆ ದಿನ: 12ನೇ ಮಾರ್ಚ್
- ಮತದಾನ: 27ನೇ ಮಾರ್ಚ್
- ಮತದಾನ, 2 ಮೇ ಮತ ಎಣಿಕೆ
- ಅಸ್ಸಾಂ 2ನೇ ಹಂತ 39 ಕ್ಷೇತ್ರ
- ಮಾರ್ಚ್ 5ಕ್ಕೆ ಅಧಿಸೂಚನೆ
- ಮಾ.12 ನಾಮಪತ್ರ ಸಲ್ಲಿಕೆ
- ಮಾ.17ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನ
- ಮೂರನೇ ಹಂತ 1 ಏಪ್ರಿಲ್ ಮತದಾನ
31 ಮೇ ಅಸ್ಸೋಂ ವಿಧಾನಸಭೆ ಅವಧಿ ಮುಕ್ತಾಯ ದಿನಾಂಕ
- ತಮಿಳುನಾಡು 24 ಮೇ
- ಪಶ್ಚಿಮ ಬಂಗಾಳ 30 ಮೇ
- ಕೇರಳ 1 ಜೂನ್
- ಪುದುಚೇರಿ 8 ಜೂನ್
824 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಆನ್ಲೈನ್ ಮೂಲಕ ನಾಮಪತ್ರ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ.
ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರ, ತಮಿಳುನಾಡು 234, ಕೇರಳದಲ್ಲಿ 140 ಸ್ಥಾನ, ಅಸ್ಸೋಂದಲ್ಲಿ 126 ಕ್ಷೇತ್ರ ಹಾಗೂ ಪುದುಚೇರಿ 30 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ
ಚುನಾವಣಾ ಆಯೋಗದ ಹಲವು ಸೇವೆಗಳನ್ನು ಆನ್ಲೈನ್ ಮೂಲಕ ಒದಗಿಸಲಾಗುತ್ತಿದೆ. ಕೋವಿಡ್ ಆತಂಕವಿರುವುದರಿಂದ ಜನರು ಅವುಗಳ ಉಪಯೋಗ ಪಡೆದುಕೊಳ್ಳಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ
ಪ್ರಚಾರಕ್ಕೆ ಹೊಸ ನಿಯಮಗಳು ಇಂತಿವೆ
1) ಮನೆಮನೆ ಪ್ರಚಾರಕ್ಕೆ ಅಭ್ಯರ್ಥಿ ಸೇರಿ ಕೇವಲ ಐವರು ತೆರಳಬಹುದು.
2) ಬಹಿರಂಗ ಸಭೆಗಳಿಗೆ ಅವಕಾಶವಿದೆ. ಸ್ಥಳೀಯ ಮಟ್ಟದಲ್ಲಿ ಅಧಿಕಾರಿಗಳು ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ
3) ಬಹಿರಂಗ ಸಭೆಗಳಿಗೆ ಮೈದಾನಗಳನ್ನು ಮೊದಲೇ ಗುರುತಿಸಿ ಅಧಿಕಾರಿಗಳು ಪ್ರಕಟಿಸುತ್ತಾರೆ.
4) ಐದು ರಾಜ್ಯಗಳಲ್ಲಿ ಇಂದಿನಿಂದಲೇ ಚುನಾವಣೆ ನೀತಿ ಸಂಹಿತೆ ಜಾರಿ