ETV Bharat / bharat

60 ಅಡಿ ಆಳದ ಬೋರ್‌ವೆಲ್​ಗೆ ಬಿದ್ದ 8 ವರ್ಷದ ಬಾಲಕ: ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ

ಪುಟ್ಟ ಬಾಲಕ ಬೋರ್​ವೆಲ್​ಗೆ ಬಿದ್ದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

author img

By

Published : Mar 15, 2023, 9:23 AM IST

Updated : Mar 15, 2023, 9:51 AM IST

ಬೋರ್‌ವೆಲ್​ಗೆ ಬಿದ್ದ 8 ವರ್ಷದ ಬಾಲಕ
ಬೋರ್‌ವೆಲ್​ಗೆ ಬಿದ್ದ 8 ವರ್ಷದ ಬಾಲಕ
ಬಾಲಕನ ರಕ್ಷಣಾ ಕಾರ್ಯಾಚರಣೆ

ವಿದಿಶಾ (ಮಧ್ಯಪ್ರದೇಶ): ಬಾಲಕನೋರ್ವ ಸುಮಾರು 60 ಅಡಿ ಆಳದ ಬೋರ್​ವೆಲ್​ಗೆ ಬಿದ್ದಿದ್ದು 43 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದಾನೆ. ಇಲ್ಲಿನ ವಿದಿಶಾ ಜಿಲ್ಲೆಯಲ್ಲಿ ಮಂಗಳವಾರ ಘಟನೆ ನಡೆದಿದೆ. 8 ವರ್ಷದ ಬಾಲಕ ಬೆಳಗ್ಗೆ 11 ಗಂಟೆ ಸುಮಾರಿಗೆ ಬೋರ್​ವೆಲ್​ಗೆ ಕಾಲು ಜಾರಿ ಬಿದ್ದಿದ್ದಾನೆ. ಸ್ಥಳದಲ್ಲಿ ಎಸ್​ಡಿಆರ್​ಎಫ್​ ಮತ್ತು ಎನ್​ಡಿಆರ್​ಎಫ್​ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿವೆ.

ಜಿಲ್ಲಾ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸಮೀರ್​ ಯಾದವ್​ ಮಾತನಾಡಿ, "ಬಾಲಕ 60 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದು 43 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದಾನೆ. ಎಸ್‌ಡಿಆರ್‌ಎಫ್‌ನ ಮೂರು ತಂಡಗಳು ಮತ್ತು ಎನ್‌ಡಿಆರ್‌ಎಫ್‌ನ ಒಂದು ತಂಡ ಸ್ಥಳದಲ್ಲಿದ್ದು ರಕ್ಷಣೆ ಕಾರ್ಯ ಮುಂದುವರೆಸಿವೆ. ಬಾಲಕ ಬಿದ್ದಿರುವ ಬೋರ್‌ವೆಲ್​ ಒಳಗೆ ನಿರಂತರ ಆಮ್ಲಜನಕವನ್ನು ಸರಬರಾಜು ಮಾಡಲಾಗುತ್ತಿದೆ. ಆದರೆ ಈವರೆಗೂ ಆತನೊಂದಿಗೆ ಮಾತನಾಡಲು ಮತ್ತು ಆಹಾರ ಸರಬರಾಜು ಮಾಡಲು ಸಾಧ್ಯವಾಗಿಲ್ಲ. ಚಲನವಲನ ಗೊತ್ತಾಗಿದ್ದು ಬಾಲಕ ಜೀವಂತವಾಗಿರುವುದು ಗೋಚರವಾಗುತ್ತಿದೆ. ತ್ವರಿತ ಕಾರ್ಯಾಚರಣೆ ಸಾಗಿದೆ. ಸಾಧ್ಯವಾದಷ್ಟು ಬೇಗ ಹೊರತೆಗೆಯಲು ಪ್ರಯತ್ನಿಸುತ್ತಿದ್ದೇವೆ" ಎಂದರು.

"ಈಗಾಗಲೇ ಬೋರ್‌ವೆಲ್​ ಪಕ್ಕದಲ್ಲಿ ಜೆಸಿಬಿ ಸಹಾಯದಿಂದ 34 ಅಡಿ ಆಳ ಕೊರೆಯಲಾಗಿದೆ. ಬಾಲಕನನ್ನು ತಲುಪಲು 49 ಅಡಿ ಮಾತ್ರ ಅಗೆಯಬೇಕಿದೆ. ಈಗಾಗಲೇ 34 ಅಡಿ ಅಗೆಯಲಾಗಿದೆ. ಇನ್ನುಳಿದಂತೆ 15 ಅಡಿ ಅಗೆದು, ಶೀಘ್ರದಲ್ಲೇ ಮಗುವನ್ನು ರಕ್ಷಿಸಲಾಗುವುದು. ಬೋರ್‌ವೆಲ್​ನೊಳಗೆ ನಿರಂತರ ಆಮ್ಲಜನಕ ಪೂರೈಸುತ್ತಿದ್ದೇವೆ. ವೆಬ್‌ಕ್ಯಾಮ್‌ಗಳನ್ನು ಅಳವಡಿಸಲಾಗಿದೆ" ಎಂದು ಎಸಿಪಿ ಮಾಹಿತಿ ನೀಡಿದರು.

ಕೊಳವೆ ಬಾವಿಗೆ ಬಿದ್ದ 5 ವರ್ಷದ ಮಗು: ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ಕರ್ಜತ್ ತಾಲೂಕಿನ ಕೋಪರ್ಡಿ ಗ್ರಾಮದಲ್ಲಿ ಸೋಮವಾರ ನಡೆದ ಘಟನೆಯಲ್ಲಿ ಬಾಲಕ ಬೋರ್​ವೆಲ್‌ಗೆ​ ಬಿದ್ದು ಮೃತಪಟ್ಟಿದ್ದ. ಸಾಗರ್ ಬುಧ ಬರೇಲಾ (5) ಎಂಬ ಮಗು ಸಾವನ್ನಪ್ಪಿತ್ತು. ಜಮೀನಿನಲ್ಲಿದ್ದ ಬೋರ್‌ವೆಲ್‌ಗೆ ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಅಚಾನಕ್ಕಾಗಿ ಬಿದ್ದಿದ್ದಾನೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ರಕ್ಷಣಾ ತಂಡ ಜೆಸಿಬಿ ಸಹಾಯದಿಂದ ಬೋರ್‌ವೆಲ್ ಬಳಿ ಗುಂಡಿ ಅಗೆದು ರಕ್ಷಣಾ ಕಾರ್ಯ ನಡೆಸಿತ್ತು. ಆಮ್ಲಜನಕ ನೀಡಿ, ಉಸಿರಾಟಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗಿತ್ತು. ಸತತ 8 ಗಂಟೆಗಳ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಯಾವುದೇ ಪ್ರಯೋಜನವಾಗದೇ ಬಾಲಕ ಕೊನೆಯುಸಿರೆಳೆದಿದ್ದ.

ಎನ್‌ಡಿಆರ್‌ಎಫ್‌ನ 5 ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು. ತಡರಾತ್ರಿ 2 ಗಂಟೆವರೆಗೂ ಶೋಧ ನಡೆಸಿದ್ದು, ಬಳಿಕ ಬಾಲಕನನ್ನು ಹೊರತೆಗೆಯಲಾಗಿತ್ತು. ಆದರೆ ಉಸಿರಾಟ ತೊಂದರೆಯಿಂದ ಬಾಲಕ ಅಸುನೀಗಿದ್ದಾನೆ. ಕೊಳವೆಬಾವಿ ಕೊರೆಸಿದ ನಂತರ ನೀರು ಬರಲಿಲ್ಲ ಎಂಬ ಕಾರಣಕ್ಕಾಗಿ ಪಾಳು ಬಿಡಲಾಗುತ್ತಿದೆ. ಈ ರೀತಿ ಮುಚ್ಚದ ಬಾವಿಗಳಲ್ಲಿ ಮಕ್ಕಳು ಬೀಳುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಅಲ್ಲದೇ ಬಳಕೆಯಲ್ಲಿರದ ಬೋರ್​ವೆಲ್​ಗಳನ್ನು ಮುಚ್ಚಬೇಕು ಎಂದು ಎಷ್ಟೋ ಬಾರಿ ಆಯಾ ರಾಜ್ಯ ಸರ್ಕಾರಗಳು ಸೂಚಿಸಿದ್ದರೂ ಇಂತಹ ಪ್ರಕರಣಗಳು ಮಾತ್ರ ಕಡಿಮೆಯಾಗುತ್ತಿಲ್ಲ.

ಇದನ್ನೂ ಓದಿ: ಕೊಳವೆ ಬಾವಿಗೆ ಬಿದ್ದ 5 ವರ್ಷದ ಮಗು; ಫಲ ನೀಡದ 8 ಗಂಟೆಗಳ ಕಾರ್ಯಾಚರಣೆ

Last Updated : Mar 15, 2023, 9:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.