ರಾಯ್‌ಪುರ (ಛತ್ತೀಸ್ಗಢ): ಬ್ಯಾಂಕ್ಗಳಿಗೆ ವಂಚನೆ ಆರೋಪ ಪ್ರಕರಣ ಹಿನ್ನೆಲೆ, ರಾಯ್‌ಪುರದ ಉದ್ಯಮಿ ಸುಭಾಶ್ ಶರ್ಮಾ ಮನೆ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳು, 31.83 ಕೋಟಿ ರೂಪಾಯಿಯನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಶರ್ಮಾ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಇಡಿ ಅಧಿಕಾರಿಗಳ ಪ್ರಕಾರ, ಸಾಲ ಅಥವಾ ಓವರ್‌ಡ್ರಾಫ್ಟ್ ಸೌಲಭ್ಯದ ಮೂಲಕ ಅಪಾರ ಪ್ರಮಾಣದ ಹಣವನ್ನು ತೆಗೆದುಕೊಂಡು ಶರ್ಮಾ ಬ್ಯಾಂಕುಗಳಿಗೆ ವಂಚಿಸಿದ್ದಾರೆ. ಹೀಗೆ, ನಕಲು ಮಾಡಿ ಪಡೆದ ಸಾಲದ ಹಣವನ್ನು ಶರ್ಮಾ ಹಾಗೂ ಅವರ ಸಹೋದ್ಯೋಗಿಗಳು ವ್ಯಾಪಾರ ಉದ್ದೇಶಗಳಿಗಾಗಿ ಹೊರತುಪಡಿಸಿ, ಬೇರೆ ಉದ್ದೇಶಗಳಿಗಾಗಿ ಬಳಸಿಕೊಂಡಿರುವುದು ವರದಿಯಾಗಿದೆ.
ಶರ್ಮಾ ಅವರು ಅಪಾರ ಪ್ರಮಾಣದ ಸಾಲಗಳನ್ನು ಪಡೆದು ಆ ಹಣವನ್ನು ವಿವಿಧ ಕಂಪನಿಗಳಿಗೆ ವರ್ಗಾಯಿಸಿದ್ದು, ಛತ್ತೀಸ್ಗಢ ಸ್ಟೀಲ್ ಮತ್ತು ಪವರ್ ಲಿಮಿಟೆಡ್ನ ಫೆರೋ ಅಲಾಯ್ಸ್ ಘಟಕ ಸೇರಿದಂತೆ 29.65 ಕೋಟಿ ರೂ.ಗಳ ಸಾಲದ ಮೊತ್ತವನ್ನು ವಿವಿಧ ಕಂಪನಿಗಳ ಮೂಲಕ ಹೂಡಿಕೆ ಮಾಡಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಈ ಮೊತ್ತದ ಸಮಾನ ಷೇರುಗಳನ್ನು ಶರ್ಮಾ ಅವರಿಗೆ ಮೂರು ಶೆಲ್ ಕಂಪನಿಗಳ ಹೆಸರಿನಲ್ಲಿ ನೀಡಲಾಗಿತ್ತು. ಈ ಶೆಲ್ ಕಂಪನಿಗಳ ಸಾಲದ ಮೊತ್ತವನ್ನು ಬ್ಯಾಂಕಿನಿಂದ ಬೇರೆಡೆಗೆ ತಿರುಗಿಸಲು ಬಳಸಿದ್ದಾರೆ. ಹೀಗಾಗಿ, ಛತ್ತೀಸ್ಗಢ ಸ್ಟೀಲ್ ಮತ್ತು ಪವರ್ ಲಿಮಿಟೆಡ್ನ ಫೆರೋ ಅಲಾಯ್ಸ್ ಘಟಕದ 29.65 ಕೋಟಿ ರೂ. ಮೌಲ್ಯದ ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ ರಾಯಪುರದ ಪುರಾಣ ಗ್ರಾಮದಲ್ಲಿ 2 ಕೋಟಿ 18 ಲಕ್ಷ ಮೌಲ್ಯದ ಭೂಮಿಯನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಶರ್ಮಾ ಅವರು, ಹೋಟೆಲ್ ಸಫೀರ್ ಇನ್, ಗುಡ್‌ಲಕ್ ಪೆಟ್ರೋಲಿಯಂ ಕಂಪನಿ ಮತ್ತು ಮೆಸರ್ಸ್ ವಿದಿತ್ ಟ್ರೇಡಿಂಗ್ ಕಂಪನಿಗಳಲ್ಲಿ 38.50 ಕೋಟಿ ರೂ.ಗಳ ಸಾಲವನ್ನು ತೆಗೆದುಕೊಂಡಿದ್ದರು. ಈ ಮೊತ್ತವನ್ನು ರಾಯ್‌ಪುರದ ಆಕ್ಸಿಸ್ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ ತೆಗೆದುಕೊಳ್ಳಲಾಗಿದೆ. ಸಾಲದ ಕಂತುಗಳನ್ನು ಪಾವತಿಸದ ಕಾರಣ, ಬ್ಯಾಂಕುಗಳು ಶರ್ಮಾ ಅವರ ಖಾತೆಗಳನ್ನು ವಂಚನೆ ಎಂದು ಘೋಷಿಸಿವೆ ಎಂದು ಇಡಿ ಅಧಿಕಾರಿ ತಿಳಿಸಿದ್ದಾರೆ.