ಮುಂಬೈ(ಮಹಾರಾಷ್ಟ್ರ): ಶಿವಸೇನೆ ಸಂಸದ ಸಂಜಯ್ ರಾವತ್ ಅವರ ಮನೆಯ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು(ಇಡಿ) ದಾಳಿ ನಡೆಸಿದ್ದು, 1,034 ಕೋಟಿ ಮೌಲ್ಯದ ಪತ್ರ ಚಾವಲ್ ಭೂಹಗರಣದಲ್ಲಿ ಅವರನ್ನು ಬಂಧಿಸುವ ಸಾಧ್ಯತೆ ಇದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ನಾಯಕರು ಬಂಡೆದ್ದಾಗ ಇವರಿಗೆ ಇಡಿ ಸಮನ್ಸ್ ನೀಡಿ ವಿಚಾರಣೆ ನಡೆಸಿತ್ತು. ಇದೀಗ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆದಿದೆ.
ಪ್ರಕರಣವೇನು?: 1,034 ಕೋಟಿ ರೂಪಾಯಿ ವೆಚ್ಚದ ಪತ್ರಾ ಬಡಾವಣೆ ಅಭಿವೃದ್ಧಿಯಲ್ಲಿ ಅಕ್ರಮ ಹಣ ವರ್ಗಾವಣೆ ನಡೆಸಿದ ಗಂಭೀರ ಆರೋಪ ಸಂಜಯ್ ರಾವತ್ ಮೇಲಿದೆ. ಇದಕ್ಕೆ ಸಂಬಂಧಿಸಿದಂತೆ ಅವರ ಬಹುಕೋಟಿ ಮೌಲ್ಯದ ಆಸ್ತಿಯನ್ನು ಇಡಿ ಜಪ್ತಿ ಮಾಡಿದೆ. ರಾವತ್ ಅವರಿಗೆ ಸೇರಿದ ಆಲಿಭಾಗ್ನಲ್ಲಿರುವ ಜಮೀನು, ದಾದರ್ನಲ್ಲಿರುವ ಫ್ಲ್ಯಾಟ್ ಸೇರಿದ ಹಲವು ಸ್ವತ್ತುಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ.
ಇದನ್ನೂ ಓದಿ: "ಕೋಮುಗಲಭೆ ಸೃಷ್ಟಿಸುವ ಪಿಎಫ್ಐ" ನಿಷೇಧಕ್ಕೆ ಸರ್ವಧರ್ಮ ಸಮ್ಮೇಳನ ಅಂಗೀಕಾರ