ನವದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನಿವಾಸದ ಮೇಲೆ ಇಡಿ ದಾಳಿ ನಡೆಸಿತ್ತು. ಇದೀಗ ತಮ್ಮ ಆಪ್ತ ಸಹಾಯಕನನ್ನು ಜಾರಿ ನಿರ್ದೇಶನಾಲಯವು ಬಂಧಿಸಿದೆ ಎಂದು ಸಿಸೋಡಿಯಾ ಆರೋಪಿಸಿದ್ದಾರೆ.
ಟ್ವಿಟರ್ನಲ್ಲಿ ಆಕ್ರೋಶ ಹೊರಹಾಕಿದ ಸಿಸೋಡಿಯಾ, ಗುಜರಾತ್ನ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಸೋಲುವ ಭಯವಿದೆ. ಸುಳ್ಳು ಎಫ್ಐಆರ್ ದಾಖಲಿಸುವ ಮೂಲಕ ನನ್ನ ಮೇಲೆ ದಾಳಿ ಮಾಡಿದ್ದಾರೆ. ನನ್ನ ಬ್ಯಾಂಕ್ ಲಾಕರ್ ಪರಿಶೀಲಿಸುವುರ ಜೊತೆಗೆ ನನ್ನ ಹಳ್ಳಿಯನ್ನು ತನಿಖೆ ಮಾಡಿದ್ದಾರೆ. ಆದರೆ ನನ್ನ ವಿರುದ್ಧ ಏನೂ ಕಂಡುಬಂದಿಲ್ಲ. ಹಾಗಾಗಿ ಇಂದು ನನ್ನ ಪಿಎ ಮನೆ ಮೇಲೆ ಇಡಿ ದಾಳಿ ನಡೆಸಿದೆ. ಅಲ್ಲೂ ಏನೂ ಸಿಗಲಿಲ್ಲ. ಹಾಗಾಗಿ ಅವರನ್ನು ಬಂಧಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಬಿಜೆಪಿಯವರೇ! ನಿಮಗೆ ಚುನಾವಣೆಯಲ್ಲಿ ಸೋಲುವ ಭಯವಿದೆ ಎಂದು ಎಎಪಿ ನಾಯಕ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಇಡಿ ತನಿಖೆ ಮುಂದುವರಿಸಿದೆ. ಅಬಕಾರಿ ನೀತಿಗೆ ಸಂಬಂಧಿಸಿದಂತೆ ಆಗಸ್ಟ್ನಲ್ಲಿ ಕೇಂದ್ರೀಯ ತನಿಖಾ ದಳ ಮನೀಶ್ ಸಿಸೋಡಿಯಾ ನಿವಾಸದ ಮೇಲೆ ದಾಳಿ ನಡೆಸಿತ್ತು.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮನೀಶ್ ಸಿಸೋಡಿಯಾಗೆ ಸೇರಿದ ಲಾಕರ್ ಪತ್ತೆ.. ಸಿಬಿಐಯಿಂದ ಶೋಧ ಕಾರ್ಯ