ಚಮೋಲಿ, ಉತ್ತರಾಖಂಡ: ಚಮೋಲಿಯಲ್ಲಿ ಭೂಕಂಪದ ಅನುಭವವಾಗಿದೆ. ಭೂಕಂಪನ ಹಿನ್ನೆಲೆ ಜನರು ಭಯಭೀತರಾಗಿ ಮನೆಯಿಂದ ಹೊರಬಂದಿದ್ದಾರೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪದ ತೀವ್ರತೆಯು 2.8 ರಷ್ಟಿದೆ ಎಂದು ತಿಳಿದು ಬಂದಿದೆ. ಭೂಕಂಪವು ಭೂಮಿಯ ಮೇಲ್ಮೈಯಿಂದ ಸುಮಾರು 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ. ಆದರೆ, ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಗಡಿನಾಡಿನ ಜಿಲ್ಲಾ ಕೇಂದ್ರವಾದ ಪಿಥೋರಗಢದಲ್ಲಿ ಹಿಂದಿನ ದಿನವೂ ಭೂಕಂಪನದ ಅನುಭವವಾಗಿತ್ತು. ಪಿಥೋರಗಢ್‌ನಲ್ಲಿರುವ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಭೂಕಂಪದ ತೀವ್ರತೆ 2.7 ರಷ್ಟಿದೆ. ಆದ್ರೆ ಜಿಲ್ಲೆಯಲ್ಲಿ ಎಲ್ಲಿಯೂ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ, ಕಂಪನದ ಅನುಭವವಾದ ಕೂಡಲೇ ಜನರು ಮನೆಯಿಂದ ಹೊರಬಂದಿದ್ದಾರೆ ಎಂದು ತಿಳಿದುಬಂದಿದೆ.
ಮತ್ತೊಂದೆಡೆ ಇಂದು ಮತ್ತೆ ಬೆಳಗ್ಗೆ 10.37ಕ್ಕೆ ಉತ್ತರಾಖಂಡದ ಚಮೋಲಿಯಲ್ಲಿ ಭೂಕಂಪದ ಅನುಭವವಾಗಿದೆ. ಕಂಪನದ ಅನುಭವವಾದ ಕೂಡಲೇ ಜನರು ಮನೆಯಿಂದ ಹೊರಬಂದಿದ್ದಾರೆ. ಇನ್ನು ಭೂಕಂಪದ ತೀವ್ರತೆಯು 2.8 ರಷ್ಟು ದಾಖಲಾಗಿದ್ದು, ಯಾವುದೇ ಹಾನಿಯ ಬಗ್ಗೆ ವರದಿ ಆಗಿಲ್ಲ.
ಉತ್ತರಾಖಂಡ ಅತ್ಯಂತ ಸೂಕ್ಷ್ಮ ವಲಯ: ಭೂವಿಜ್ಞಾನಿಗಳ ಪ್ರಕಾರ ಉತ್ತರಾಖಂಡವನ್ನು ಭೂಕಂಪದ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮ ವಲಯವೆಂದು ಪರಿಗಣಿಸಲಾಗಿದೆ. ಈ ಹಿಂದೆ ಉತ್ತರಕಾಶಿ ಮತ್ತು ಚಮೋಲಿಯಲ್ಲಿ ಸಂಭವಿಸಿದ ಭೂಕಂಪದಿಂದ ಆಗಿರುವ ಹಾನಿಯನ್ನು ಇಂದಿಗೂ ಜನ ಮರೆತಿಲ್ಲ. ಇಂದಿಗೂ ಆ ದೃಶ್ಯವನ್ನು ನೆನೆದು ಜನ ಕಣ್ಣೀರಿಡುತ್ತಾರೆ.
ಪಿಥೋರಗಢ್ದ ಮಲ್ಪಾ ಭೂಕುಸಿತ: ಆಗಸ್ಟ್ 18, 1998 ರಂದು ಪಿಥೋರಗಢ್‌ನ ಧಾರ್ಚುಲಾ ತಾಲೂಕಿನ ಮಲ್ಪಾ ಗ್ರಾಮದಲ್ಲಿ ಬಂಡೆ ಬಿರುಕು ಬಿಟ್ಟಿದ್ದರಿಂದ 225 ಜನರು ಅವಶೇಷಗಳಡಿಯಲ್ಲಿ ಹೂತುಹೋಗಿದ್ದರು.
ಚಮೋಲಿಯಲ್ಲಿ ಭೂಕಂಪನ: 1999ರಲ್ಲಿ ಗಡಿ ಜಿಲ್ಲೆ ಚಮೋಲಿಯಲ್ಲಿ 6.8 ರಿಕ್ಟರ್ ಮಾಪಕದಲ್ಲಿ ಭೂಕಂಪ ಸಂಭವಿಸಿತ್ತು. ಈ ಅಪಘಾತದಲ್ಲಿ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ, ಜನರ ಮನೆಗಳು ಧ್ವಂಸಗೊಂಡಿದ್ದು, ದೊಡ್ಡ ಪ್ರಮಾಣದ ಜೀವ ಹಾನಿಯಾಗಿತ್ತು. ಭೂಕಂಪನದಲ್ಲಿ 100 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಉತ್ತರಕಾಶಿಯಲ್ಲಿ ಭೂಕಂಪ: 1991 ರಲ್ಲಿ ಉತ್ತರಕಾಶಿಯಲ್ಲಿ 6.6 ರಿಕ್ಟರ್ ಮಾಪಕದಲ್ಲಿ ಸಂಭವಿಸಿದ ಭೂಕಂಪವು ದೊಡ್ಡ ವಿನಾಶವನ್ನು ಉಂಟುಮಾಡಿತು. ಭೂಕಂಪ ದುರಂತದಲ್ಲಿ 768 ಮಂದಿ ಸಾವನ್ನಪ್ಪಿದ್ದಾರೆ. 5 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈಗ ಮತ್ತೆ ಭೂಕಂಪನ ಸಂಭವಿಸಿದ್ದು, ಜನರು ಭಯಭೀತಗೊಂಡಿದ್ದಾರೆ.
ಓದಿ: ಮಹಾರಾಷ್ಟ್ರದ ಕೊಲ್ಲಾಪುರ ಸೇರಿ ಮೂರು ಜಿಲ್ಲೆಯಲ್ಲಿ 3.4 ತೀವ್ರತೆ ಭೂಕಂಪ: ಯಾವುದೇ ಪ್ರಾಣ ಹಾನಿ ಇಲ್ಲ