ಕಿನ್ನೌರ್ (ಹಿಮಾಚಲ ಪ್ರದೇಶ): ಹಿಮಾಚಲದ ಕಿನ್ನೌರ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ 11.27ಕ್ಕೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 4.1ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ-ಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಕಿನ್ನೌರ್ ಜಿಲ್ಲೆಯಲ್ಲಿ 10 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ. ಭೂವಿಜ್ಞಾನಿಗಳ ಪ್ರಕಾರ, ಹಿಮಾಚಲ ಪ್ರದೇಶದ ಕೆಲ ಭಾಗಗಳು ಭೂಕಂಪ ಸೂಕ್ಷ್ಮ ವಲಯಗಳಾಗಿರುವುದರಿಂದ ಲಘು ಮತ್ತು ಪ್ರಬಲ ಭೂಕಂಪನಗಳು ಆಗಾಗ ಸಂಭವಿಸುತ್ತಿರುತ್ತದೆ.
ಇದನ್ನೂ ಓದಿ: ಇಂದು ಸಂಜೆ 6.30ಕ್ಕೆ ಗಾನಕೋಗಿಲೆ ಅಂತ್ಯಕ್ರಿಯೆ: ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಅಂತಿಮ ವಿಧಿವಿಧಾನಕ್ಕೆ ಸಿದ್ಧತೆ
ಏಪ್ರಿಲ್ 4, 1905ರಂದು ಹಿಮಾಚಲ ಪ್ರದೇಶದ ಕಂಗ್ರಾದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಈ ರಾಜ್ಯದಲ್ಲಿ ಉಂಟಾದ ಅತಿದೊಡ್ಡ ಭೂಕಂಪ ಇದಾಗಿದ್ದು, 20,000 ಜನರು ಪ್ರಾಣ ಕಳೆದುಕೊಂಡಿದ್ದರು.