ಶಿಮ್ಲಾ: ಕಳೆದ ಹದಿನೈದು ದಿನಗಳಿಂದ ಹಿಮಾಲಯ ಪರ್ವತ ಪ್ರದೇಶವು ಸರಣಿ ಭೂಕಂಪನಗಳಿಗೆ ಸಾಕ್ಷಿಯಾಗಿದೆ. ನಿನ್ನೆ ರಾತ್ರಿ 9:32 ರ ಸುಮಾರಿಗೆ ರಾಜ್ಯದ ಕೆಲವು ಭಾಗಗಳಲ್ಲಿ ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ತಿಳಿಸಿದೆ.
ಗುಡ್ಡಗಾಡು ರಾಜ್ಯ ಮಂಡಿಯಿಂದ ವಾಯುವ್ಯಕ್ಕೆ 27 ಕಿ.ಮೀ ದೂರದಲ್ಲಿ ಕಂಪನದ ಕೇಂದ್ರಬಿಂದು ಪತ್ತೆಯಾಗಿದೆ. ಮಂಡಿ, ಕಂಗ್ರಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭುವಿಯೊಡಲು ನಡುಗಿದ ಅನುಭವವಾಗಿದೆ. ಯಾವುದೇ ಪ್ರಾಣ ಹಾಗೂ ಆಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿಯ ಬಳಿಕ ಅಮೃತಸರದಲ್ಲೂ ಭೂಕಂಪನ; 4.1 ತೀವ್ರತೆ ದಾಖಲು
ಹಿಮಾಲಯ ಪ್ರದೇಶದ ಉತ್ತರಾಖಂಡ-ನೇಪಾಳ ಗಡಿಯುದ್ದಕ್ಕೂ ನವೆಂಬರ್ 8 ರಿಂದ 16 ರ ನಡುವೆ ಕನಿಷ್ಠ 10 ಭೂಕಂಪನಗಳು ವಿಭಿನ್ನ ಪ್ರಮಾಣದಲ್ಲಿ ಸಂಭವಿಸಿವೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಅಂಕಿಅಂಶಗಳು ತಿಳಿಸಿವೆ.
ಇದಕ್ಕೂ ಮುನ್ನ ಇತ್ತೀಚೆಗೆ, ದೆಹಲಿ ಮತ್ತು ಪಂಜಾಬ್‌ನ ಅಮೃತಸರದಲ್ಲೂ ಭೂಕಂಪನ ಸಂಭವಿಸಿದ್ದು, ಜನರು ಆತಂಕಗೊಂಡಿದ್ದರು.