ಹೈದರಾಬಾದ್: ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಎಷ್ಟು ಅಪಾಯಕಾರಿ ಅನ್ನೋದು ತಿಳಿದಿದ್ದರೂ, ಕೆಲವರು ಎಣ್ಣೆ ಮತ್ತಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗ್ತಾರೆ. ರಸ್ತೆಯಲ್ಲಿ ವಾಹನಗಳನ್ನು ಗಮನಿಸದೆ ತಮಗಿಷ್ಟ ಬಂದಂತೆ ವರ್ತಿಸುತ್ತಾರೆ. ಇದು ಕೆಲವೊಮ್ಮೆ ಘೋರ ಅಪಘಾತಕ್ಕೂ ಕಾರಣವಾಗುತ್ತದೆ. ಇದಕ್ಕೊಂದು ನಿದರ್ಶನ ಇಲ್ಲಿದೆ ನೋಡಿ..
ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ವಲಯದ ಇಬ್ರಾಹಿಂಪಲ್ಲಿ ಗೇಟ್‌ನಲ್ಲಿ ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ಬೈಕ್ ಚಲಾಯಿಸಿ ಅಪಘಾತಕ್ಕೊಳಗಾಗಿದ್ದಾನೆ. ರಸ್ತೆಯಲ್ಲಿ ಹೋಗ್ತಿದ್ದ ಮತ್ತೊಂದು ಬೈಕ್ ತಮ್ಮತ್ತ ಬರುತ್ತಿದೆ ಎಂದು ಅಡ್ಡಾದಿಡ್ಡಿಯಾಗಿ ಬೈಕ್ ಚಲಾಯಿಸಿ ಕೊನೆಗೆ ನಿಯಂತ್ರಿಸಲಾಗದೆ ಕೆಳಗೆ ಬಿದ್ದಿದ್ದಾನೆ.
-
కృష్ణ గారి వీర డ్రైవింగ్ గాథ… మద్యం మత్తులో
— CYBERABAD TRAFFIC POLICE సైబరాబాద్ ట్రాఫిక్ పోలీస్ (@CYBTRAFFIC) July 9, 2021 " class="align-text-top noRightClick twitterSection" data="
ఇబ్రహీంపల్లి గేట్, చేవెళ్ల. 04.07.2021#RoadSafety #RoadSafetyCyberabad pic.twitter.com/ZDJvlTjOV2
">కృష్ణ గారి వీర డ్రైవింగ్ గాథ… మద్యం మత్తులో
— CYBERABAD TRAFFIC POLICE సైబరాబాద్ ట్రాఫిక్ పోలీస్ (@CYBTRAFFIC) July 9, 2021
ఇబ్రహీంపల్లి గేట్, చేవెళ్ల. 04.07.2021#RoadSafety #RoadSafetyCyberabad pic.twitter.com/ZDJvlTjOV2కృష్ణ గారి వీర డ్రైవింగ్ గాథ… మద్యం మత్తులో
— CYBERABAD TRAFFIC POLICE సైబరాబాద్ ట్రాఫిక్ పోలీస్ (@CYBTRAFFIC) July 9, 2021
ఇబ్రహీంపల్లి గేట్, చేవెళ్ల. 04.07.2021#RoadSafety #RoadSafetyCyberabad pic.twitter.com/ZDJvlTjOV2
ಈ ಬಗ್ಗೆ ಟ್ವೀಟ್ ಮಾಡಿರುವ ಸೈಬರಾಬಾದ್ ಟ್ರಾಫಿಕ್ ಪೊಲೀಸರು, ಸಂಚಾರಿ ನಿಯಮ ಉಲ್ಲಂಘಿಸಿದ್ರೆ ಏನಾಗುತ್ತೆ ಎಂಬುದನ್ನು ವಿವರಿಸಿದ್ದಾರೆ. ವಿಡಿಯೋವನ್ನು ಹಂಚಿಕೊಂಡಿರುವ ಪೊಲೀಸರು, "ಕೃಷ್ಣಗಾರಿ ವೀರ ಡ್ರೈವಿಂಗ್ ಕಥ' ಮದ್ಯದ ಮತ್ತಿನಲ್ಲಿ ಎಂದು ಟ್ವೀಟ್ ಮಾಡಿದ್ದಾರೆ.