ETV Bharat / bharat

ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಗೆ ರೋಬೋಗಳ ಬಳಕೆ, ಪೈಪ್​ನಿಂದ ಆಹಾರ ಪೂರೈಕೆ - ಸುರಂಗದೊಳಗೆ ರೋಬೋಟ್​

Uttarkashi Silkyara Tunnel: ಕುಸಿದಿರುವ 2 ಕಿ.ಮೀ ಉದ್ದದ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ರೊಬೊಟಿಕ್​ ತಂತ್ರಜ್ಞಾನದ ನೆರವು ಪಡೆದುಕೊಳ್ಳಲಾಗುತ್ತಿದೆ. ಎರಡು ರೋಬೋಗಳನ್ನು ಅದರೊಳಗೆ ಬಿಡಲಾಗಿದೆ.

ಕಾರ್ಮಿಕರ ರಕ್ಷಣೆಗೆ ರೋಬೋಗಳ ಬಳಕೆ
ಕಾರ್ಮಿಕರ ರಕ್ಷಣೆಗೆ ರೋಬೋಗಳ ಬಳಕೆ
author img

By ETV Bharat Karnataka Team

Published : Nov 20, 2023, 6:22 PM IST

ಡೆಹ್ರಾಡೂನ್ (ಉತ್ತರಾಖಂಡ): ಇಲ್ಲಿನ ಉತ್ತರಕಾಶಿಯ ಸಿಲ್ಕ್ಯಾರ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಒಂಬತ್ತನೇ ದಿನವೂ ಮುಂದುವರಿದಿದೆ. ಸುರಂಗದ ಮೇಲಿನಿಂದ ರಂಧ್ರ ಕೊರೆದು ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಚಿಂತನೆ ನಡೆದಿರುವ ನಡುವೆ, ರೋಬೋಟಿಕ್ ತಂತ್ರಜ್ಞಾನದ ಮೊರೆ ಹೋಗಲಾಗಿದೆ. 2 ರೋಬೋಗಳನ್ನು ಸುರಂಗದೊಳಗೆ ಕಳುಹಿಸಲಾಗಿದೆ. ಅವುಗಳ ನೆರವಿನಿಂದ ಸಿಲುಕಿದವರನ್ನು ಹೊರತರುವ ಪ್ರಯತ್ನ ಮಾಡಲಾಗುವುದು ಎಂದು ರೊಬೊಟಿಕ್ಸ್​ ತಂಡ ಹೇಳಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಎನ್​ಎಚ್​ಐಡಿಸಿಎಲ್​ ನಿರ್ದೇಶಕ ಅಂಶು ಮನೀಶ್ ಅವರು, ಡಿಆರ್​ಡಿಒದ ರೊಬೊಟಿಕ್ಸ್ ತಂಡವು ಕೆಲಸ ಮಾಡಲು ಪ್ರಾರಂಭಿಸಿದೆ. ತಂಡವು 20 ಮತ್ತು 50 ಕೆಜಿ ತೂಕದ ಎರಡು ರೋಬೋಟ್‌ಗಳನ್ನು ಸುರಂಗದೊಳಗೆ ಕಳುಹಿಸಿದೆ. ರೋಬೋಟ್‌ಗಳು ನೆಲ ಮತ್ತು ಮರಳಿನಲ್ಲಿ ನಡೆಯುತ್ತವೆ. ಇವುಗಳು ಕುಸಿದ ಮಣ್ಣಿನಲ್ಲಿ ಹೇಗೆ ಕೆಲಸ ಮಾಡುತ್ತವೆ ಎಂಬ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.

  • #WATCH | Uttarkashi Tunnel Rescue | NHIDCL director Anshu Manish Khalkho says, "DRDO has sent 2 robots weighing 20 kg and 50 kg respectively. The robots move on the ground and the land is working like sand, we are apprehending whether or not would the robots be able to move… pic.twitter.com/6HPltjB9Fe

    — ANI (@ANI) November 20, 2023 " class="align-text-top noRightClick twitterSection" data=" ">

ರೋಬೋಟ್​ಗಳ ಕೆಲಸವೇನು?: ಸುರಂಗದೊಳಗೆ ಭೂಕುಸಿತ ಉಂಟಾಗಿರುವ ಜಾಗಕ್ಕೆ ಅವುಗಳನ್ನು ಕಳುಹಿಸಲಾಗುತ್ತದೆ. ಅಲ್ಲಿ ಶೇಖರಣೆಯಾಗಿರುವ ಮಣ್ಣಿನ ಅವಶೇಷಗಳ ಮೇಲ್ಭಾಗದಲ್ಲಿ ಸ್ವಲ್ಪ ಜಾಗವಿದ್ದು, ಅದರೊಳಗಿನಿಂದ ರೋಬೋಟ್​ ಅನ್ನು ಕಳುಹಿಸಲಾಗುತ್ತದೆ. ಅಲ್ಲಿರುವ ಮಣ್ಣನ್ನು ರೋಬೋಟ್ ಮೂಲಕ ತೆಗೆದು ಹಾಕುವ ಕೆಲಸ ಮಾಡಲಾಗುತ್ತದೆ. ಇದರ ಜೊತೆಗೆ ದೊಡ್ಡ ಪೈಪ್ ಅನ್ನು ಸುರಂಗದೊಳಗೆ ಅಳವಡಿಸಲಾಗಿದೆ. ಇದರಿಂದ ಆಹಾರ, ನೀರು, ಔಷಧಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

  • #WATCH | NDRF IG NS Bundela on the ongoing operation to rescue 41 workers trapped inside Uttarkashi's Silkyara tunnel

    "The safety of 41 trapped workers has been ensured. Efforts are underway to rescue them. Two teams of NDRF are deployed at the tunnel site. Once the axis tunnel… pic.twitter.com/mwnj9plRr7

ಕಾರ್ಮಿಕರು ಸುರಕ್ಷಿತ: ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರು ಸುರಕ್ಷಿತವಾಗಿದ್ದಾರೆ. ಎಲ್ಲರನ್ನೂ ಅಲ್ಲಿಂದ ಹೊರತರುವ ಪ್ರಯತ್ನಗಳು ಸಾಗಿವೆ. ಸ್ಥಳದಲ್ಲಿ ಎರಡು ಎನ್​ಡಿಆರ್​ಎಫ್​ ತಂಡಗಳನ್ನು ನಿಯೋಜಿಸಲಾಗಿದೆ. ಕಾರ್ಯಾಚರಣೆಯ ನಡುವೆ ಮತ್ತಷ್ಟು ಮಣ್ಣು ಕುಸಿತ ಉಂಟಾಗುತ್ತಿರುವುದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಎನ್‌ಡಿಆರ್‌ಎಫ್ ಐಜಿ ಬುಂದೇಲಾ ಅವರು ಹೇಳಿದ್ದಾರೆ. ಸುರಂಗ ಸ್ಥಳಕ್ಕೆ ಇನ್ನಷ್ಟು ಯಂತ್ರೋಪಕರಣಗಳು ಬರುತ್ತಿವೆ. ಒಂದೆರಡು ದಿನಗಳಲ್ಲಿ ಇಲ್ಲಿಗೆ ತಲುಪಲಿವೆ. ಬಂದ ಬಳಿಕ ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸಲಾಗುವುದು ಎಂದರು.

  • आज उत्तरकाशी टनल में फंसे श्रमिकों को सकुशल बाहर निकालने हेतु, भारत सरकार द्वारा DRDO के रोबोट भेजे गए हैं। सरकार द्वारा लगातार उत्तरकाशी में हर संभव सहायता भेजी जा रही है।

    — CM Office Uttarakhand (@ukcmo) November 20, 2023 " class="align-text-top noRightClick twitterSection" data=" ">

2 ಕಿ.ಮೀ ಉದ್ದದ ಸುರಂಗದಲ್ಲಿ ಮೇಲಿನಿಂದ ರಂಧ್ರ ಕೊರೆದು ಅದರೊಳಗೆ ಸಿಲುಕಿರುವ ಕಾರ್ಮಿಕರನ್ನು ರಕ್ಷಣೆ ಮಾಡುವ ಬಗ್ಗೆ ರಕ್ಷಣಾ ತಂಡಗಳು ಚಿಂತನೆ ನಡೆಸಿವೆ. ಆದರೆ, ಮೇಲಿನ ಭಾಗದಲ್ಲಿ ಮಣ್ಣು ಹೆಚ್ಚಿರುವ ಕಾರಣ ಕಾರ್ಯಾಚರಣೆ ವಿಳಂಬವಾಗುವ ಸಾಧ್ಯತೆ ಇದೆ. ಹೀಗಾಗಿ ಬೇರೆ ತಂತ್ರ ಬಳಸುವ ಬಗ್ಗೆಯೂ ಯೋಚನೆ ನಡೆದಿದೆ.

ಇದನ್ನೂ ಓದಿ: ಉತ್ತರ ಕಾಶಿ ಸುರಂಗ ಕುಸಿತ: 41 ಕಾರ್ಮಿಕರ ಬದುಕು ಅತಂತ್ರ, ವಾಯುಪಡೆ ವಿಮಾನ ಮೂಲಕ ಸ್ಥಳಕ್ಕೆ ಬೃಹತ್ ಡ್ರಿಲ್ಲಿಂಗ್ ಮಷಿನ್ ರವಾನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.