ETV Bharat / bharat

ಸಾಮಾಜಿಕ ನ್ಯಾಯವು ಮಾನವ ಜೀವನದ ಅತ್ಯಂತ ಪ್ರಮುಖ ಅಂಶ: ಡಾ. ಸೂರಜ್ ಎಂಗ್ಡೆ - ಹಾರ್ವರ್ಡ್​ ವಿವಿಯ ಸಂಶೋಧಕ ಸೂರಜ್

ಜಾಗತಿಕ, ಸಾಮಾಜಿಕ ನ್ಯಾಯದಿನದ ಹಿನ್ನೆಲೆ ಹಾರ್ವರ್ಡ್​ ವಿವಿಯ ಸಂಶೋಧಕ ಡಾ. ಸೂರಜ್ ಅವರು ಭಾರತದಲ್ಲಿನ ಜಾತಿ ವ್ಯವಸ್ಥೆ ಬಗ್ಗೆ ತಮ್ಮದೇ ರೀತಿಯಲ್ಲಿ ಉತ್ತರಿಸಿದ್ದಾರೆ.

ಡಾ. ಸೂರಜ್ ಎಂಗ್ಡೆ
ಡಾ. ಸೂರಜ್ ಎಂಗ್ಡೆ
author img

By

Published : Feb 20, 2022, 5:51 PM IST

Updated : Feb 20, 2022, 6:02 PM IST

ಹೈದರಾಬಾದ್ : ಸಾಮಾಜಿಕ ನ್ಯಾಯವು ಮಾನವ ಜೀವನದಲ್ಲಿ ಬಹಳ ಮುಖ್ಯವಾದ ಅಂಶವಾಗಿದೆ. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ಸಮಾನವಾಗಿ ಕಾಣಬೇಕು. ಸಾಮಾಜಿಕ ನ್ಯಾಯ ಹಲವು ದೇಶಗಳ ಮೂಲಭೂತ ಹಕ್ಕು. ಜನರು ಸಮಾನವಾಗಿ ನಡೆದುಕೊಂಡು ನೆಮ್ಮದಿಯಿಂದ ಬಾಳಿದಾಗ ಸಮಾಜ ಹೂದೋಟದಂತೆ ಅರಳುತ್ತದೆ ಎಂದು ಡಾ. ಸೂರಜ್ ಎಂಗ್ಡೆ ಅಭಿಪ್ರಾಯಪಟ್ಟಿದ್ದಾರೆ.

ಇವರು ಹಾರ್ವರ್ಡ್​ ವಿವಿಯ ಸಂಶೋಧಕರಾಗಿದ್ದು, ಸೂರಜ್ ಸಾಮಾಜಿಕ ನ್ಯಾಯದ ಮಹತ್ವವನ್ನು ತಮ್ಮದೇ ಶೈಲಿಯಲ್ಲಿ ವಿವರಿಸಿದ್ದಾರೆ. ಇವರನ್ನು ಅತ್ಯಂತ ಪ್ರಭಾವಿ ಚಿಂತಕರು ಮತ್ತು ಅಂತಾರಾಷ್ಟ್ರೀಯ ಅಂಕಣಕಾರರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಯುನೈಟೆಡ್ ಸ್ಟೇಟ್ಸ್ ಮತ್ತು ಪೋರ್ಚುಗಲ್ ಸೇರಿದಂತೆ 30ಕ್ಕೂ ಹೆಚ್ಚು ದೇಶಗಳಿಗೆ ಇವರು ಪ್ರಯಾಣಿಸಿ ತಮ್ಮ ವಾಕ್​ಚಾತುರ್ಯ ಹಾಗೂ ಬರವಣಿಗೆ ಮೂಲಕ ಎಲ್ಲರನ್ನೂ ಚಕಿತಗೊಳಿಸಿದ್ದಾರೆ.

'ಈಟಿವಿ ಭಾರತ' ಪ್ರತಿನಿಧಿ ಕೇಳಿರುವ ಪ್ರಶ್ನೆಗಳಿಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ ಯುವ ಚಿಂತಕ:

ಪ್ರತಿಯೊಬ್ಬ ವ್ಯಕ್ತಿಯು ಯಾವುದೇ ತಾರತಮ್ಯವಿಲ್ಲದೆ ಸಮಾನವಾಗಿ ಬದುಕಲು ಸಾಧ್ಯವಾಗುತ್ತದೆ. ಸಾಮಾಜಿಕ ನ್ಯಾಯ ಎಂಬ ಪದವನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ?

ಉತ್ತರ : ಭಾರತದಲ್ಲಿ ಸಮಾಜವು ಜಾತಿ ಮತ್ತು ಧರ್ಮದಿಂದ ಕೂಡಿದೆ. ಇನ್ನೂ ಆಳವಾಗಿ ಹೋದರೆ ಅದು ಸಂತರು ಮತ್ತು ಮಹಂತರಿಗೆ ಸೇರಿದ್ದಾಗಿದೆ. ವ್ಯಕ್ತಿ ಬದಲಾದಂತೆ ಸಮಾಜದ ಪ್ರಕ್ರಿಯೆಯೂ ಬದಲಾಗುತ್ತಿದೆ. ಸಮಾಜದಲ್ಲಿ ಏಕೀಕರಣ ಅತ್ಯಗತ್ಯ. ಭಾರತದಂತಹ ದೇಶದಲ್ಲಿ ಪ್ರತಿಯೊಂದು ಜಾತಿಯೂ ಒಂದು ದೇಶ. ಸಾಮಾಜಿಕ ನ್ಯಾಯವು ಮಾನವ ಜೀವನದ ಬಹುಮುಖ್ಯ ಅಂಶವಾಗಿದೆ. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ಸಮಾನವಾಗಿ ಕಾಣಬೇಕು. ಸಾಮಾಜಿಕ ನ್ಯಾಯ ಹಲವು ದೇಶಗಳ ಮೂಲಭೂತ ಹಕ್ಕು. ಮನುಷ್ಯರು ಸಮಾನವಾಗಿ, ನೆಮ್ಮದಿಯಿಂದ ಬಾಳಿದಾಗ ಸಮಾಜ ಹೂದೋಟದಂತೆ ಅರಳುತ್ತದೆ.

ಈ ವರ್ಷದ ಥೀಮ್ ಪ್ರಕಾರ 'ಔಪಚಾರಿಕ ಉದ್ಯೋಗದ ಮೂಲಕ ಸಾಮಾಜಿಕ ನ್ಯಾಯವನ್ನು ಸಾಧಿಸುವುದು'. ನೀವು ಅದರ ಬಗ್ಗೆ ಯೋಚಿಸಿದರೆ, ಭೂತ, ವರ್ತಮಾನ ಮತ್ತು ಭವಿಷ್ಯವನ್ನು ನೀವು ಹೇಗೆ ನೋಡುತ್ತೀರಿ?

ಉತ್ತರ : ಇದು ಬಹಳ ಮುಖ್ಯವಾದ ಅಂಶವಾಗಿದೆ. ಔಪಚಾರಿಕ ಉದ್ಯೋಗ ಬಹಳ ಮುಖ್ಯ. ಕಳೆದ ವರ್ಷ ನಾನು ಒಂದು ಲೇಖನವನ್ನು ಬರೆದಿದ್ದೇನೆ. ಅಲ್ಲಿ 92% ಅನೌಪಚಾರಿಕ ವಲಯದಲ್ಲಿ ಮತ್ತು 8% ಔಪಚಾರಿಕ ವಲಯದಲ್ಲಿ ಉದ್ಯೋಗಿಯಾಗಿದ್ದಾರೆ. ಅನೌಪಚಾರಿಕವಾಗಿ ತರಕಾರಿ ಮಾರಾಟಗಾರರು, ಗುತ್ತಿಗೆ ಕಾರ್ಮಿಕರು, ಸಣ್ಣ ವ್ಯಾಪಾರ ಮಾಲೀಕರು ಸೇರಿದ್ದಾರೆ. ಸರ್ಕಾರದ ಬಳಿ ಅನೌಪಚಾರಿಕ ಉದ್ಯೋಗದ ಅಂಕಿಅಂಶಗಳಿಲ್ಲ. ಅದರಲ್ಲಿ ಬಹುಜನ ಸಮಾಜವೇ ಹೆಚ್ಚು ಎಂದಿದ್ದಾರೆ.

ಇದನ್ನೂ ಓದಿ: ವರದಕ್ಷಿಣೆಗಾಗಿ ಹೆಂಡತಿಯನ್ನು ಸುಟ್ಟು ಕೊಂದ ಪತಿ

ಭಾರತದ ಆರ್ಥಿಕತೆಯು ಔಪಚಾರಿಕ ಉದ್ಯೋಗಕ್ಕಾಗಿ ಬದಲಾಗಬಹುದು. ಔಪಚಾರಿಕ ಉದ್ಯೋಗ ನೀಡದೆ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಅವರನ್ನು ರಕ್ಷಿಸಬೇಕು, ದೊಡ್ಡವರ ಮಕ್ಕಳು ಉತ್ತಮ ಶಾಲೆಗಳಿಗೆ ಹೋಗುತ್ತಾರೆ. ಆದ್ದರಿಂದ ಆರ್ಥಿಕತೆಯು ವಿಶೇಷವಾಗಿ ಜನಾಂಗೀಯವಾಗಿ ಉಳಿದಿದೆ. ನಾನು ದಕ್ಷಿಣ ಆಫ್ರಿಕಾದಲ್ಲಿ ಸಂಶೋಧನೆ ನಡೆಸುತ್ತಿದ್ದಾಗ, ದೇಶವು ಅನೌಪಚಾರಿಕ ಉದ್ಯೋಗದಿಂದ ಆದಾಯವನ್ನು ಗಳಿಸುತ್ತಿರುವುದನ್ನು ಗಮನಿಸಿದ್ದೇನೆ. ಔಪಚಾರಿಕ ಉದ್ಯೋಗವು ದೇಶದಲ್ಲಿ ಸುವ್ಯವಸ್ಥೆಯನ್ನು ಸೃಷ್ಟಿಸುತ್ತದೆ ಎಂಬುದು ನನ್ನ ಅಭಿಮತ.

ಭಾರತದ ರಾಜಕೀಯವು ಭಾರತ-ಜಾತಿ-ಮೀಸಲಾತಿ ಸಮೀಕರಣವನ್ನು ಆಧರಿಸಿದೆ. ಜಾತಿ ಆಧಾರದ ಮೇಲೆ ಟಿಕೆಟ್ ನೀಡಲಾಗುತ್ತದೆ. ಜಾತಿಯ ಆಧಾರದ ಮೇಲೆ ಮತಗಳನ್ನು ಹಾಕಲಾಗುತ್ತದೆ. ಹಾಗಾದರೆ ಮೀಸಲಾತಿ ಮುಕ್ತ ಭಾರತವಾಗಬೇಕೆ?

ಉತ್ತರ : ಇದು ಬಹಳ ವಿಶಾಲವಾದ ವಿಷಯವಾಗಿದೆ. ಜಾತಿ ರಾಜಕಾರಣಕ್ಕೆ ಬಹುಜನ ಸಮಾಜ ಪ್ರಮುಖ ಜವಬ್ದಾರಿಯುತ ಕಾರಣವಾಗಿದ್ದಾರೆ. ಆದಾಗ್ಯೂ, ಈ ಜನರಿಗೆ ಯಾವುದೇ ಶಕ್ತಿ ಇಲ್ಲ, ಸಂಪನ್ಮೂಲಗಳಿಲ್ಲ. ಇದಕ್ಕೆ ಸವರ್ಣ ಪ್ರಾಬಲ್ಯ ಸಮಾಜವೇ ಕಾರಣ. ಕೆಲವೇ ಜನರು ಅವರ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಅದರಲ್ಲಿ ಫುಲೆ-ಶಾಹು-ಅಂಬೇಡ್ಕರ್, ಸಂತ ತುಕಾರಾಂ ಮಹಾರಾಜರಂತಹ ಹೋರಾಟಗಾರರು ಈ ಜಾತಿ ವಿರುದ್ಧ ನಿಂತಿದ್ದವರು. ಫಲಾನುಭವಿಗಳು ಎಂದಿಗೂ ಜಾತಿ ವ್ಯವಸ್ಥೆಯಿಂದ ಹೊರಬರುವುದಿಲ್ಲ ಎಂದು ಕಾನ್ಶಿರಾಂ ಸಾಹೇಬರು ಹೇಳಿದ್ದರು. ಜಾತಿ ನಿರ್ಮೂಲನೆ ಮಾಡಿದರೆ ಯಾರಿಗೂ ಏನೂ ಸಿಗುವುದಿಲ್ಲ. ಜಾತಿ ಮತ್ತು ರಾಜಕೀಯದ ದೃಷ್ಟಿಯಿಂದ ನೆಹರು ಬ್ರಾಹ್ಮಣ ಸಮುದಾಯಕ್ಕೆ ಹೆಚ್ಚು ಟಿಕೇಟ್ ನೀಡಿದರು. ಇದನ್ನು ಬಹುಜನ ಸಮಾಜದವರು ಮಾಡಿದ್ದಕ್ಕೆ ಅವರಿಗೆ ಜಾತಿವಾದಿಗಳೆಂಬ ಹಣೆಪಟ್ಟಿ ಕಟ್ಟಲಾಯಿತು. ಅವಕಾಶ ಇಲ್ಲದವರಿಗೆ ಮಾತ್ರ ಮೀಸಲಾತಿ ನೀಡುವುದರಲ್ಲಿ ತಪ್ಪೇನಿಲ್ಲ. ಪ್ರತಿಯೊಂದು ವರ್ಗಕ್ಕೂ ಈ ಮೂಲಕ ಪ್ರಾತಿನಿಧ್ಯ ನೀಡಬೇಕು ಎಂದು ಎಂಗ್ಡೆ ಹೇಳಿದ್ರು.

ನಿಮ್ಮ ಪುಸ್ತಕ, ಕ್ಯಾಸ್ಟ್ ಮ್ಯಾಟರ್ಸ್ ಪ್ರಪಂಚದಾದ್ಯಂತ ಹಿಟ್ ಆಗಿದೆ. ಬೆಸ್ಟ್ ಸೆಲ್ಲರ್ ಗಳ ಪಟ್ಟಿಗೆ ಬಂದಿದೆ. ಮರಾಠಿಯಲ್ಲೂ ಪುಸ್ತಕ ಬಂದಿತ್ತು. ಈ ಪುಸ್ತಕಕ್ಕೆ ನಿಮ್ಮ ಪ್ರೇರಣೆ ಏನು?

ಉತ್ತರ - ನಾನು ಆಕ್ಸ್‌ಫರ್ಡ್‌ನಲ್ಲಿದ್ದಾಗ ನನ್ನ ಪಿಹೆಚ್‌ಡಿ ಮುಗಿಸಿದೆ. ನನ್ನ ಪಿಹೆಚ್.ಡಿ. ಪ್ರಾಥಮಿಕ ಸಂಶೋಧನೆ ಜಾತಿಯ ಮೇಲೆ ಇರಲಿಲ್ಲ. ದಕ್ಷಿಣ ಆಫ್ರಿಕಾದ ಕಾರ್ಮಿಕ ವರ್ಗದ ಬಗ್ಗೆ ಇತ್ತು. ನಾನು ದೇಶದ ಕೆಲವು ರಾಜ್ಯಗಳಿಗೆ ಹೋದಾದ ನನಗೆ ಈ ಜಾತಿ ವ್ಯವಸ್ಥೆಯ ಬಗ್ಗೆ ಅರಿವಾಯಿತು. ಆಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾತಿಯ ವಿಚಾರವನ್ನು ಎತ್ತುವುದು ಮುಖ್ಯ ಎಂದು ನನಗನ್ನಿಸಿತ್ತು. ಆ ವೇಳೆ ನನಗೆ ಫೆಲೋಶಿಪ್ ಕೂಡ ಇತ್ತು. ನಾನು ಪ್ರಸ್ತಾವನೆಯನ್ನು ಬರೆಯಲು ಬಯಸಿದ್ದೆ, ನಂತರ ನನ್ನ ನೆಚ್ಚಿನ ವಿಷಯವನ್ನು ಅಧ್ಯಯನ ಮಾಡಲು ನಿರ್ಧರಿಸಿದೆ. ಆ ವಿಷಯವೇ ನನಗೆ ಪುಸ್ತಕ ಬರೆಯಲು ಪ್ರೇರಣೆಯಾಯಿತು.

ವಿದೇಶಕ್ಕೆ ಹೋಗಿ ಜಾತಿವಾದವನ್ನು ಅಧ್ಯಯನ ಮಾಡಲು ನೀವು ಯಾವಾಗ ಯೋಚಿಸಿದಿರಿ?

ಉತ್ತರ : ಇದು ಕುತೂಹಲದ ಪ್ರಶ್ನೆ. ಸ್ಫೂರ್ತಿದಾಯಕ ಪ್ರಶ್ನೆ. ಭಾರತದಲ್ಲಿನ ಶಿಕ್ಷಣ ವ್ಯವಸ್ಥೆಯು ನನಗೆ ತೃಪ್ತಿಕರವಾಗಿ ಕಾಣಲಿಲ್ಲ. ಭಾರತೀಯ ಶಿಕ್ಷಣ ವ್ಯವಸ್ಥೆಯು ನನ್ನ ಜ್ಞಾನದ ದಾಹವನ್ನು ಪೂರೈಸಲು ಆಗಲಿಲ್ಲ. ವಿದೇಶಕ್ಕೆ ಹೋದ ನಂತರವೂ ನಾನು ಎಲ್ಲಿಂದ ಬಂದೆ ಎಂದು ಹೇಳಲಿಲ್ಲ. ಹಾಗಾಗಿ ಒಂದೇ ಸ್ಟ್ರೋಕ್‌ನಲ್ಲಿ ನನ್ನ ಗುರುತನ್ನು ಜಗತ್ತಿಗೆ ತರುತ್ತೇನೆ ಎಂದು ಅಂದುಕೊಂಡಿದ್ದೆ. ನಿಮ್ಮನ್ನು, ನಿಮ್ಮ ಕುಟುಂಬ, ನಿಮ್ಮ ಸಮುದಾಯ, ನಿಮ್ಮ ಪೂರ್ವಜರನ್ನು ನೀವು ಒಪ್ಪಿಕೊಂಡಾಗ ಮಾತ್ರ ಈ ರೀತಿಯ ಮನೋಭಾವನೆ ಬೆಳೆಯುತ್ತದೆ ಎಂದು ಅವರು ಹೇಳಿದರು.

ನೀವು ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ ಪುಸ್ತಕ ಬರೆಯುತ್ತಿದ್ದೀರಿ. ಈ ಪುಸ್ತಕ ಎಷ್ಟು ದಿನದಲ್ಲಿ ಓದುಗರಿಗೆ ಲಭ್ಯವಾಗುತ್ತದೆ?

ಉತ್ತರ : ನಾನು ಪ್ರಸ್ತುತ ಐದು ಪುಸ್ತಕಗಳನ್ನು ಬರೆಯಲು ಮುಂದಾಗಿದ್ದೇನೆ. ಈ ಐದು ಪುಸ್ತಕಗಳು ಬೇರೆ ಬೇರೆ ವಿಷಯಕ್ಕೆ ಸಂಬಂಧಿಸಿವೆ. ಬಾಬಾಸಾಹೇಬರ ಅಧಿಕೃತ ಜೀವನ ಚರಿತ್ರೆಯನ್ನು ಯಾವುದೇ ದಲಿತ ಲೇಖಕರು ಇಂಗ್ಲಿಷ್‌ನಲ್ಲಿ ಬರೆದಿಲ್ಲ ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಿಸಿಲ್ಲ ಎಂದು ಪ್ರಕಾಶಕರು ಹೇಳಿದ್ದಾರೆ. ಬಾಬಾಸಾಹೇಬರು ಯಾವ ಜಾತಿಯಿಂದ ಬಂದರು, ಹಾಗೆಯೇ ಬಾಬಾಸಾಹೇಬರ ತಾಯಿ ಮತ್ತು ಅವರ ಕುಟುಂಬದ ಇತಿಹಾಸ ಏನು ಎಂದು ಅದರಲ್ಲಿ ಬರೆಯಲಾಗುವುದು. ಅದರಲ್ಲಿ ಆರು ಅದ್ಯಾಯಗಳಿರಲಿವೆ. ಕಾರಣ ನಿರಂತರವಾಗಿ ಬರವಣಿಗೆಯಲ್ಲಿ ತೊಡಗಿದ್ದೇನೆ ಎಂದು ಸಂಶೋಧಕ ಡಾ. ಸೂರಜ್​ ಎಂಗ್ಡೆ ವಿವರಿಸಿದರು.

Last Updated : Feb 20, 2022, 6:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.