ETV Bharat / bharat

ನಡೆದುಕೊಂಡು ಹೋಗ್ತಿದ್ದ ವೈದ್ಯ ದಂಪತಿ ಮೇಲೆ ಹರಿದ ಕಾರು.. ಸಿಸಿಟಿವಿಯಲ್ಲಿ ದೃಶ್ಯ ಸೆರೆ!

author img

By

Published : Apr 12, 2021, 7:33 PM IST

Updated : Apr 12, 2021, 7:46 PM IST

ಸಂಜೆ ವೇಳೆ ವಾಕಿಂಗ್​ ಮಾಡ್ತಿದ್ದ ವೈದ್ಯ ದಂಪತಿ ಮೇಲೆ ಕಾರು ಹರಿದ ಪರಿಣಾಮ ಅವರು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.

road accident in delhi
road accident in delhi

ನವದೆಹಲಿ: ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೈದ್ಯ ದಂಪತಿ ಮೇಲೆ ಕಾರು ಹರಿದ ಪರಿಣಾಮ, ಇಬ್ಬರು ಸಾವನ್ನಪ್ಪಿರುವ ಘಟನೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದಿದೆ.

ನಡೆದುಕೊಂಡು ಹೋಗ್ತಿದ್ದ ವೈದ್ಯ ದಂಪತಿ ಮೇಲೆ ಹರಿದ ಕಾರು

ನವದೆಹಲಿಯ ದ್ವಾರಕಾ ಸೆಕ್ಟರ್​​ 11ರಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ. ನಡೆದುಕೊಂಡು ಹೋಗುತ್ತಿದ್ದ ದಂಪತಿ ಮೇಲೆ ಹಿಂಬಂದಿಯಿಂದ ಬಂದ ಕಾರು ಡಿಕ್ಕಿ ಹೊಡೆದು, ಅವರ ಮೇಲೆ ಹರಿದಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ರಸ್ತೆ ಅಪಘಾತ: ಆರು ಮಂದಿ ದುರ್ಮರಣ, ಮೂವರಿಗೆ ಗಾಯ!

ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಆರೋಪಿ ಬಂಧನ ಮಾಡಲಾಗಿದೆ ಎಂದು ಡಿಸಿಪಿ ಸಂತೋಷ್​ ಕುಮಾರ್​​ ತಿಳಿಸಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿದವರನ್ನ ಡಾ. ಶಾಂತಿ ಸ್ವರೂಪ್​ ಅರೋಡ್​ ಹಾಗೂ ಅವರ ಪತ್ನಿ ಅಂಜನಾ ಎಂದು ಗುರುತಿಸಲಾಗಿದೆ. ಇಬ್ಬರು ದ್ವಾರಕಾದಲ್ಲಿ ವಾಸವಾಗಿದ್ದು, ಸಂಜೆ ವೇಳೆ ವಾಕಿಂಗ್​ ಎಂದು ಹೊರಗಡೆ ಹೋಗಿದ್ದರು. ಈ ವೇಳೆ ದುರ್ಘಟನೆ ನಡೆದಿದೆ.

Last Updated : Apr 12, 2021, 7:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.