ETV Bharat / bharat

ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವುದನ್ನು ನಿಷೇಧಿಸಿದ ಹಲವು ರಾಜ್ಯಗಳು!

ಇಂದು ಭಾರತದಾದ್ಯಂತ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ದೀಪ ಹಚ್ಚುವುದರ ಜೊತೆಗೆ ಪಟಾಕಿ ಹೊಡೆಯುವುದೂ ಸಹ ಹಬ್ಬದ ಒಂದು ಭಾಗವಾಗಿಬಿಟ್ಟಿದೆ. ಆದರೆ ದೀಪಾವಳಿ ಹಬ್ಬಕ್ಕೆ ಮುಂಚಿತವಾಗಿ ಹಲವು ರಾಜ್ಯಗಳು ಪಟಾಕಿಯನ್ನು ನಿಷೇಧಿಸಿವೆ.

This state bans firecrackers bursting, This state bans firecrackers bursting news, Diwali 2021, Diwali 2021 news, Diwali 2021 celebration, ರಾಜ್ಯಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧ, ಕರ್ನಾಟಕ ಸೇರಿ ರಾಜ್ಯಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧ, ರಾಜ್ಯಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧ ಸುದ್ದಿ, ದೀಪಾವಳಿ ಹಬ್ಬ, ದೀಪಾವಳಿ ಹಬ್ಬ 2021, ದೀಪಾವಳಿ ಹಬ್ಬ 2021 ಸುದ್ದಿ,
ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವುದನ್ನು ನಿಷೇಧಿಸಿದ ಹಲವು ರಾಜ್ಯಗಳು
author img

By

Published : Nov 4, 2021, 5:59 AM IST

ನವದೆಹಲಿ: ಪಟಾಕಿ ಹೊಡೆಯುವುದರಿಂದ ವಾಯುಮಾಲಿನ್ಯದ ಜೊತೆಗೆ ಶಬ್ಧ ಮಾಲಿನ್ಯವೂ ಉಂಟಾಗುತ್ತದೆ. ಹೀಗಾಗಿ ದೇಶಾದ್ಯಂತ ಹಲವು ರಾಜ್ಯಗಳು ಪಟಾಕಿ ಮಾರಾಟ ಹಾಗೂ ಹೊಡೆಯುವುದನ್ನು ನಿಷೇಧಮಾಡಿವೆ. ಕೆಲವು ರಾಜ್ಯಗಳು ಹಸಿರು ಪಟಾಕಿ ಮಾರಾಟ ಮಾಡುವಂತೆ, ಹೊಡೆಯವಂತೆ ಗ್ರಾಹಕರಿಗೆ ಆದೇಶ ನೀಡಿವೆ.

ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವ ಬಗ್ಗೆ ನಿರ್ಬಂಧ ಹೇರಿರುವ ಹಾಗೂ ಕೆಲವು ಷರತ್ತುಗಳನ್ನು ವಿಧಿಸಿರುವ ಕರ್ನಾಟಕ ರಾಜ್ಯ ಸೇರಿ ಇತರ ರಾಜ್ಯಗಳ ಪಟ್ಟಿ ಹೀಗಿದೆ:

ಕರ್ನಾಟಕ: ಕರ್ನಾಟಕ ಸರ್ಕಾರವು ದೀಪಾವಳಿ ಸಮಯದಲ್ಲಿ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸಲು ಅವಕಾಶ ನೀಡಿದೆ. ಜೊತೆಗೆ ಕೋವಿಡ್​-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸಿದೆ.

ದೆಹಲಿ: ದೆಹಲಿ ವಾಯುಮಾಲಿನ್ಯ ನಿಯಂತ್ರಣ ಸಮಿತಿಯು ಜನವರಿ 1, 2022 ರವರೆಗೆ ಪಟಾಕಿ ಮಾರಾಟ ಹಾಗೂ ಪಟಾಕಿ ಸಿಡಿಸುವುದನ್ನು ಸಂಪೂರ್ಣ ನಿಷೇಧಿಸಿದೆ.

ಹರಿಯಾಣ : ಹರಿಯಾಣ ಸರ್ಕಾರವು ಸಹ ಪಟಾಕಿ ನಿಷೇಧಿಸಿದೆ. ರಾಜ್ಯದ 14 ಜಿಲ್ಲೆಗಳಲ್ಲಿ ಪಟಾಕಿ ಮಾರಾಟ ಹಾಗೂ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ. ಬೇರೆ ಭಾಗಗಳಲ್ಲಿ ಕೆಲವು ನಿರ್ಬಂಧಗಳನ್ನು ಹೇರಿದೆ.

ಛತ್ತೀಸ್​ಗಢ: ಛತ್ತೀಸ್​ಗಢ ಸರ್ಕಾರವು ದೀಪಾವಳಿ ಮತ್ತು ಗುರುಪರ್ವದ ಸಮಯದಲ್ಲಿ ರಾತ್ರಿ 8-10 ಗಂಟೆಯವರೆಗೆ ಪಟಾಕಿಗಳನ್ನು ಸಿಡಿಸಬಹುದು ಎಂದು ಹೇಳಿದೆ. ಮಾರ್ಗಸೂಚಿ ಅನ್ವಯ, ಛತ್ ಪೂಜೆಯಂದು ಬೆಳಗ್ಗೆ 6-8, ಹೊಸ ವರ್ಷ ಮತ್ತು ಕ್ರಿಸ್​ಮಸ್​ ದಿನ ರಾತ್ರಿ 11.55ರಿಂದ ಮಧ್ಯರಾತ್ರಿ 12.30 ರವರೆಗೆ ಪಟಾಕಿ ಸಿಡಿಸುಬಹುದೆಂದು ಹೇಳಿದೆ.

ಪುಣೆ: ಪುಣೆಯಲ್ಲಿ ಸುತ್ಲಿ ಅಥವಾ ಆಟಂ ಬಾಂಬ್​ ಎಂದು ಕರೆಯಲ್ಪಡುವ ಪಟಾಕಿ ಉತ್ಪಾದನೆ, ಮಾರಾಟ ಮತ್ತು ಸಿಡಿಸುವುದನ್ನು ನಿಷೇಧಿಸಲಾಗಿದೆ. ಅಕ್ಟೋಬರ್ 27ರಿಂದ ನವೆಂಬರ್ 7ರವರೆಗೆ ನಗರದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ 125 ಡೆಸಿಬಲ್​ಗಿಂತ ಹೆಚ್ಚಿನ ಶಬ್ದವನ್ನು ಉಂಟುಮಾಡುವ ಪಟಾಕಿಗಳನ್ನು ಸಿಡಿಸದಂತೆ ಸರ್ಕಾರ ಜನರಿಗೆ ಆದೇಶ ನೀಡಿದೆ. ಶಬ್ಧ ಮಾಲಿನ್ಯ ಉಂಟು ಮಾಡುವ ಪಟಾಕಿಗಳನ್ನು ರಾತ್ರಿ 10ರಿಂದ ಬೆಳಗ್ಗೆ 6ವರೆಗೆ ಸಿಡಿಸುವಂತಿಲ್ಲ.

ಪಾಂಡಿಚೇರಿ: ಕೇಂದ್ರಾಡಳಿತ ಪ್ರದೇಶವು ದೀಪಾವಳಿಗೂ ಮುನ್ನ ಕಡಿಮೆ ದರದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಿದೆ. ಸರ್ಕಾರಿ ಸಂಸ್ಥೆಯಾದ ಪ್ಯಾಪ್ಸ್ಕೋ ಪಾಂಡಿಚೇರಿಯಾದ್ಯಂತ ಪಟಾಕಿಗಳನ್ನು ಸಬ್ಸಿಡಿ ದರದಲ್ಲಿ ಮಾರಾಟ ಮಾಡಲು ಮಳಿಗೆಗಳನ್ನು ಸ್ಥಾಪಿಸಿದೆ. ಸಂಸ್ಥೆಯು ಸಾರ್ವಜನಕರಿಗೆ ಶೇ.75ರಷ್ಟು ಸಬ್ಸಿಡಿಯಲ್ಲಿ ಪಟಾಕಿಗಳನ್ನು ನೀಡುತ್ತಿದೆ.

ರಾಜಸ್ಥಾನ: ರಾಜಸ್ಥಾನ ಸರ್ಕಾರವು ಈ ದೀಪಾವಳಿಯಲ್ಲಿ ಹಸಿರು ಪಟಾಕಿಗಳ ಮಾರಾಟ ಮತ್ತು ಬಳಕೆಗೆ ಮಾತ್ರ ಅನುಮತಿ ನೀಡಿದೆ. ಮುಂಬರುವ ಹಬ್ಬ-ಹರಿದಿನಗಳಲ್ಲಿ ಪಟಾಕಿ ಸಿಡಿಸುವ ನಿರ್ಬಂಧಿತ ಸಮಯವನ್ನು ಸರ್ಕಾರ ಹೊರಡಿಸಿದೆ.

ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳ ಮಾಲಿನ್ಯ ನಿಯಂತ್ರಣ ಮಂಡಳಿಯು ದೀಪಾವಳಿ ಹಬ್ಬಕ್ಕೆ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸುವಂತೆ ಆದೇಶ ನೀಡಿದೆ. ದೀಪಾವಳಿ ಮತ್ತು ಕಾಳಿ ಪೂಜೆಯ ದಿನ 2 ಗಂಟೆ ಮಾತ್ರ ಅಂದರೆ ರಾತ್ರಿ 8-10 ಗಂಟೆವರೆಗೆ ಪಟಾಕಿ ಸಿಡಿಸಬಹುದು. ಛತ್ ಪೂಜೆಯ ದಿನ ಬೆಳಗ್ಗೆ 6-8 ಗಂಟೆವರೆಗೆ ಹಸಿರು ಪಟಾಕಿ ಹೊಡೆಯಬಹುದು. ಕ್ರಿಸ್​ಮಸ್​​ ಮತ್ತು ನ್ಯೂ ಈಯರ್ ಈವ್​ಗೆ ಕೇವಲ 35 ನಿಮಿಷ ಮಾತ್ರ ಪಟಾಕಿ ಸಿಡಿಸಬಹುದು ಎಂದು ಮಂಡಳಿ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.