ETV Bharat / bharat

18 ಗಂಟೆಗಳ ಕಾರ್ಯಾಚರಣೆ: ಕಾರಿನಲ್ಲಿ ಸಿಕ್ತು 21 ಕೋಟಿ ರೂ. ಮೌಲ್ಯದ ಚಿನ್ನದ ಬಿಸ್ಕೆಟ್ - 43 ಕೆಜಿ ಚಿನ್ನದ ಬಿಸ್ಕೆಟ್​

ಕಾರಿನಲ್ಲಿಟ್ಟು ಅಕ್ರಮವಾಗಿ ಸಾಗಿಸಲಾಗುತ್ತಿದ್ದ 43.12 ಕೆಜಿ ಚಿನ್ನದ ಬಿಸ್ಕೆಟ್​ ವಶಕ್ಕೆ ಪಡೆದುಕೊಳ್ಳುವಲ್ಲಿ ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

43.12 kgs of smuggled gold
43.12 kgs of smuggled gold
author img

By

Published : Jun 17, 2021, 8:56 PM IST

ನವದೆಹಲಿ: ಭರ್ಜರಿ ಕಾರ್ಯಾಚರಣೆ ನಡೆಸಿರುವ ಕಂದಾಯ ಗುಪ್ತಚರ ಅಧಿಕಾರಿಗಳು ದಾಖಲೆಯ 21 ಕೋಟಿ ರೂ. ಮೌಲ್ಯದ ಚಿನ್ನದ ಬಿಸ್ಕೆಟ್​ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಣಿಪುರದ ಇಂಪಾನ್​ನಲ್ಲಿ ಜೂನ್​​ 16ರಂದು ಈ ಕಾರ್ಯಾಚರಣೆ ನಡೆದಿದೆ ಎಂದು ತಿಳಿದು ಬಂದಿದೆ.

ಇದಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಬಂಧಿಸಲಾಗಿದೆ. ಕಾರಿನ ವಿವಿಧ ಜಾಗಗಳಲ್ಲಿ ಬರೋಬ್ಬರಿ 43.12 ಕೆಜಿ ಚಿನ್ನ ಅಕ್ರಮವಾಗಿ ಮುಚ್ಚಿಡಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  • The Directorate of Revenue Intelligence seized 43.12 kgs of smuggled gold valued at Rs 20.95 crores on 16th June at Imphal, Manipur. Two persons have been arrested and one vehicle has been seized. pic.twitter.com/2m81s563x5

    — ANI (@ANI) June 17, 2021 " class="align-text-top noRightClick twitterSection" data=" ">

ಮಹತ್ವದ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳು ಇಬ್ಬರು ಪ್ರಯಾಣ ಮಾಡ್ತಿದ್ದ ಕಾರು ತಡೆಗಟ್ಟೆ ವಿಚಾರಣೆ ನಡೆಸಿದ್ದಾರೆ.

ಆದರೆ ಈ ವೇಳೆ ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ. ಅವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಕೂಲಂಕಷವಾಗಿ ಬರೋಬ್ಬರಿ 18 ಗಂಟೆಗಳ ಕಾಲ ಶೋಧಕಾರ್ಯ ನಡೆಸಿದ್ದಾರೆ. ಈ ವೇಳೆ ಕಾರಿನೊಳಗೆ ವಿಶೇಷವಾಗಿ ತಯಾರಿಸಲಾಗಿದ್ದ ಮೂರು ಜಾಗದಲ್ಲಿ ಚಿನ್ನದ ಬಿಸ್ಕಟ್​​ ಇಟ್ಟಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: WTC ಫೈನಲ್​ಗೆ ಭಾರತ ತಂಡ ಪ್ರಕಟ: ಮೂವರು ವೇಗಿ, ಇಬ್ಬರು ಸ್ಪಿನ್ನರ್​ಗಳಿಗೆ ಅವಕಾಶ

18 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಸುಮಾರು 260 ವಿದೇಶಿ ಚಿನ್ನದ ಬಿಸ್ಕಟ್​ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಇದರ ಮೌಲ್ಯ 21 ಕೋಟಿ ರೂ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಮಣಿಪುರ-ಮ್ಯಾನ್ಮಾರ್​ ಗಡಿಯಲ್ಲಿ ಅಕ್ರಮ ಚಿನ್ನ ಸಾಗಾಣಿಕೆ ನಡೆಯುತ್ತಿದ್ದು, ಅಧಿಕಾರಿಗಳು ಮೇಲಿಂದ ಮೇಲೆ ರಹಸ್ಯ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಳೆದ ಮೂರು ತಿಂಗಳಲ್ಲಿ 33 ಕೋಟಿ ರೂ. ಮೌಲ್ಯದ 67 ಕೆಜಿ ಚಿನ್ನದ ಬಿಸ್ಕೆಟ್​ ವಶಕ್ಕೆ ಪಡೆದುಕೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.