ETV Bharat / bharat

ಜನರೇಟರ್​ನಿಂದ ವಿದ್ಯುತ್​ ಪ್ರವಹಿಸಿ ವಾಹನದಲ್ಲೇ 10 ಭಕ್ತರ ಸಾವು - devotees died due to electric shock

ಪಶ್ಚಿಮ ಬಂಗಾಳದಲ್ಲಿ 10 ಭಕ್ತರ ಸಾವು - ಪಿಕಪ್​ ವಾಹನದ ಜನರೇಟರ್​ನಿಂದಲೇ ವಿದ್ಯುತ್​ ಪ್ರವಹಿಸಿ ಭಕ್ತರ ದುರ್ಮರಣ.

devotees-died-due-to-electric-shock-in-west-bengal
ಜನರೇಟರ್​ನಿಂದ ವಿದ್ಯುತ್​ ಪ್ರವಹಿಸಿ ವಾಹನದಲ್ಲೇ 10 ಭಕ್ತರ ಸಾವು
author img

By

Published : Aug 1, 2022, 8:04 AM IST

Updated : Aug 1, 2022, 10:25 AM IST

ಕೂಚ್ ಬೆಹಾರ್: ಕಾರಿನ ಜನರೇಟರ್​ನಿಂದ ಉಂಟಾದ ಶಾರ್ಟ್​ಸರ್ಕ್ಯೂಟ್​ನಿಂದಾಗಿ 10 ಭಕ್ತರು ಮೃತಪಟ್ಟ ದಾರುಣ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಭಾನುವಾರ ತಡರಾತ್ರಿ 20 ಯಾತ್ರಿಕರು ಜಲಪೇಶ್​ ಶಿವಮಂದಿರ ಕ್ಷೇತ್ರಕ್ಕೆ ಪಿಕಪ್​ ವಾಹನದಲ್ಲಿ ತೆರಳುತ್ತಿದ್ದರು. ವಾಹನ ಚಂಗ್ರಬಂಧ ಸೇತುವೆಯನ್ನು ದಾಟುತ್ತಿದ್ದಾಗ ಪಿಕಪ್​ ವಾಹನದಲ್ಲಿ ಶಾರ್ಟ್​ ಸರ್ಕ್ಯೂಟ್​ ಉಂಟಾಗಿದೆ.

ಜನರೇಟರ್​ನಿಂದ ವಿದ್ಯುತ್​ ಪ್ರವಹಿಸಿ ವಾಹನದಲ್ಲೇ 10 ಭಕ್ತರ ಸಾವು

ವಾಹನದಲ್ಲಿ 10 ಯುವಕರು ವಿದ್ಯುತ್​ ಅವಘಡಕ್ಕೆ ಸಾವನ್ನಪ್ಪಿದ್ದಾರೆ. ಉಳಿದವರು ಗಾಯಗೊಂಡು ಅಸ್ವಸ್ಥರಾಗಿದ್ದರು. ತಕ್ಷಣವೇ ಚಾಲಕ ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಾಹನದ ಜನರೇಟರ್​ನಿಂದಲೇ ವಾಹನಕ್ಕೆ ವಿದ್ಯುತ್​ ಪ್ರವಹಿಸಿದೆ. ಇದರಿಂದ ದುರ್ಘಟನೆ ಸಂಭವಿಸಿದೆ. ಈ ಬಗ್ಗೆ ಮೇಖ್ಲಿಗೊಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ: ತಮಿಳುನಾಡಿನಲ್ಲಿ ಚಲಿಸುತ್ತಿದ್ದ ರಥ ಉರುಳಿ 10 ಭಕ್ತರಿಗೆ ಗಾಯ: ವಿಡಿಯೋ

Last Updated : Aug 1, 2022, 10:25 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.