ETV Bharat / bharat

ಹೈಫೈ ಕೆಲಸ ಬಿಟ್ಟು ಸ್ವಂತ ಕಂಪನಿ ಕಟ್ಟಿದ ಯುವಕರು: 100 ಮಂದಿಗೆ ಉದ್ಯೋಗ ಕೊಟ್ಟ 'ಡಿಸೈನ್ ವಾಲ್ಸ್' - Design Walls company achievement

ಏಳು ವರ್ಷಗಳ ಹಿಂದೆ ಡಿಸೈನ್ ವಾಲ್ಸ್ ಹೆಸರಿನಲ್ಲಿ ಆರಂಭವಾದ ಸ್ಟಾರ್ಟಪ್ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದು, 100 ಮಂದಿಗೆ ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆದು ನಿಂತಿದೆ.

Design Walls achievement
'ಡಿಸೈನ್ ವಾಲ್ಸ್' ಸಾಧನೆ
author img

By

Published : Nov 22, 2022, 2:20 PM IST

Updated : Nov 22, 2022, 3:06 PM IST

ಆಂಧ್ರಪ್ರದೇಶ: ಆ ಇಬ್ಬರು ಯುವಕರು ಉನ್ನತ ವ್ಯಾಸಂಗ ಮಾಡಿ ಕೈತುಂಬಾ ಆದಾಯ ತಂದುಕೊಡುವ ಉದ್ಯೋಗದಲ್ಲಿದ್ದರು. ಆದರೆ ಅದರಿಂದ ತೃಪ್ತರಾಗಗೆ ಸಣ್ಣ ವ್ಯಾಪಾರವೇ ಉತ್ತಮ ಎಂದುಕೊಂಡರು. ತಮ್ಮ ಆಲೋಚನೆಗಳನ್ನು ಪರಸ್ಪರ ಹಂಚಿಕೊಂಡು ಕೆಲಸ ಮಾಡಲು ಆರಂಭಿಸಿದರು. ಏಳು ವರ್ಷಗಳ ಹಿಂದೆ ಡಿಸೈನ್ ವಾಲ್ಸ್ ಹೆಸರಿನಲ್ಲಿ ಆರಂಭವಾದ ಸ್ಟಾರ್ಟಪ್ ಕಂಪನಿ ದಿನದಿಂದ ದಿನಕ್ಕೆ ಉನ್ನತ ಮಟ್ಟಕ್ಕೆ ಬೆಳೆಯುತ್ತಿದ್ದು ಇದೀಗ 100 ಮಂದಿಗೆ ಉದ್ಯೋಗ ನೀಡುವ ಮಟ್ಟಕ್ಕೆ ಬಂದಿದೆ.

''ನಾವು ನಿಮ್ಮ ಜಾಗವನ್ನು ಅಲಂಕೃತಗೊಳಿಸುತ್ತೇವೆ'' ಎಂಬ ಘೋಷಣೆಯೊಂದಿಗೆ ಈ ಸ್ಟಾರ್ಟ್​ಅಪ್​ ಕಂಪನಿ ಮುಂದೆ ಸಾಗುತ್ತಿದೆ. ಕೆಲಸ ಬಿಟ್ಟು ಸ್ವಂತ ಉದ್ಯಮ ಆರಂಭಿಸಿರುವ ಈ ಯುವ ಗೆಳೆಯರ ಯಶಸ್ಸನ್ನು ತಿಳಿಯೋಣ ಬನ್ನಿ.

100 ಮಂದಿಗೆ ಉದ್ಯೋಗ ಕೊಟ್ಟ 'ಡಿಸೈನ್ ವಾಲ್ಸ್'

ಡಿಸೈನ್​ ವಾಲ್ಸ್​​: ಕಾಲ ಬದಲಾದಂತೆ ಯುವಜನತೆಯ ಚಿಂತನೆಯೂ ಬದಲಾಗುತ್ತಿದೆ. ಇಂದಿನ ಪೀಳಿಗೆಯವರು ದೊಡ್ಡ ಉದ್ಯೋಗಗಳಿಗಿಂತ ಸಣ್ಣ ವ್ಯಾಪಾರವೇ ಮೇಲು ಎಂದು ಭಾವಿಸುತ್ತಾರೆ. ಅದಕ್ಕೆ ಈ ಯುವಕರೇ ಸಾಕ್ಷಿ. ಇಬ್ಬರೂ ಕಾಲೇಜು ದಿನಗಳಲ್ಲಿ ಗೆಳೆಯರಾಗಿದ್ದರು. ವಿದ್ಯಾಭ್ಯಾಸ ಮುಗಿಸಿ ಕೆಲವು ವರ್ಷಗಳ ಕಾಲ ಕಾರ್ಪೊರೇಟ್ ಉದ್ಯೋಗಗಳಲ್ಲಿ ದುಡಿದು ಹಣ ಸಂಪಾದಿಸಿದರು. ಆದರೆ ಮೊದಲಿನಿಂದಲೂ ಉದ್ಯಮಿಯಾಗುವ ಯೋಚನೆ ಅವರ ಮನಸ್ಸಿನಲ್ಲಿತ್ತು. 2015ರಲ್ಲಿ, "ಡಿಸೈನ್ ವಾಲ್ಸ್" ಹೆಸರಿನ ಸ್ಟಾರ್ಟ್ಅಪ್ ಅನ್ನು ಸ್ಥಾಪಿಸಲಾಯಿತು. ಆ ಸಂಸ್ಥೆ ಉತ್ತಮ ಯಶಸ್ಸು ಸಾಧಿಸಿತು.

ವಿಚಾರಗಳ ವಿನಿಮಯ-ಸ್ವಂತ ಉದ್ಯಮ: ಆಂಧ್ರಪ್ರದೇಶದ ವಿಮಲ್ ಶ್ರೀಕಾಂತ್ ಮತ್ತು ಅಭಿನವ್ ರೆಡ್ಡಿ ಅವರೇ ಈ ಸಾಧಕರು. ವಾರಂಗಲ್‌ನಲ್ಲಿರುವ ಇಂಟರ್‌ನ್ಯಾಶನಲ್ ಜರ್ನಲ್ ಆಫ್ ಇನ್ನೋವೇಟಿವ್ ಟೆಕ್ನಾಲಜಿ, ರಿಸರ್ಚ್- IJITS ನಲ್ಲಿ ತಮ್ಮ ಅಧ್ಯಯನದ ದಿನಗಳಲ್ಲಿ ಸ್ನೇಹಿತರಾದರು. ವರ್ಷಾನುಗಟ್ಟಲೆ ಪ್ರತ್ಯೇಕವಾಗಿ ಕೆಲಸ ಮಾಡಿದ ಯುವಕರು ಸಮಾರಂಭವೊಂದರಲ್ಲಿ ಭೇಟಿಯಾಗಿ ತಮ್ಮ ವಿಚಾರಗಳನ್ನು ಹಂಚಿಕೊಂಡರು. ಬಳಿಕ ತಮ್ಮ ಸ್ವಂತ ಉದ್ಯಮ ಸ್ಥಾಪಿಸುವ ದೃಢ ನಿರ್ಧಾರ ತೆಗೆದುಕೊಂಡು ಮುಂದಡಿ ಇಟ್ಟರು.

ವಾಲ್ ಡಿಸೈನ್ ಕ್ಷೇತ್ರ: ಮೊಟ್ಟಮೊದಲ ಬಾರಿಗೆ ವಾಲ್ ಡಿಸೈನ್ ಕ್ಷೇತ್ರಕ್ಕೆ ಕಾಲಿಟ್ಟ ಅಭಿನವ್, ತಮ್ಮ ಕ್ಷೇತ್ರದಲ್ಲಿನ ಅಸಹಕಾರ, ಮಾರ್ಕೆಟಿಂಗ್​ನಲ್ಲಿ ಎದುರಿಸುತ್ತಿರುವ ಸವಾಲುಗಳು, ಸೇವೆಗಳ ಗುಣಮಟ್ಟದ ಬಗ್ಗೆ ಗೆಳೆಯ ವಿಮಲ್ ಜತೆ ಹಂಚಿಕೊಂಡರು. ಮಾರ್ಕೆಟಿಂಗ್​ನಲ್ಲಿ ಅನುಭವ ಹೊಂದಿದ್ದ ವಿಮಲ್, ಬಿಸ್ನೆಸ್ ಪಾರ್ಟ್​ನರ್ ಆಗುವ ಬಗ್ಗೆ ಅಭಿನವ್ ಸಲಹೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ಇಬ್ಬರೂ ಜೊತೆಯಾದರು. ಅಂದಿನಿಂದ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಾಲ್‌ಪೇಪರ್‌ಗಳನ್ನು (ಗೋಡೆಯ ಅಲಂಕಾರ) ನೀಡುತ್ತಾ ವ್ಯಾಪಾರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದೇವೆ ಎನ್ನುತ್ತಾರೆ ಅಭಿನವ್ ರೆಡ್ಡಿ.

1 ಲಕ್ಷ ರೂ. ಬಂಡವಾಳದಿಂದ ಆರಂಭ: ಇಬ್ಬರು ಸ್ನೇಹಿತರ ಜೊತೆ ಸೇರಿ ಮಿಯಾಪುರದಲ್ಲಿ ಒಂದು ಲಕ್ಷ ರೂಪಾಯಿ ಬಂಡವಾಳ ಹೂಡಿ ಡಿಸೈನ್ ವಾಲ್ಸ್ ಎಂಬ ಉದ್ಯಮ ಆರಂಭಿಸಿದರು. ಮನೆಯ ಸೌಂದರ್ಯವನ್ನು ಇಮ್ಮಡಿಗೊಳಿಸುವ ವಾಲ್‌ಪೇಪರ್‌ಗಳು, ಕರ್ಟನ್‌ಗಳು ಮತ್ತು ಒಳಾಂಗಣ ಅಲಂಕಾರ ಸೇವೆಗಳನ್ನು ಗ್ರಾಹಕರನ್ನು ಮೆಚ್ಚಿಸುವ ರೀತಿಯಲ್ಲಿ ಒದಗಿಸಲಾಗಿದೆ. ಪ್ರಾರಂಭದಲ್ಲಿ ಸವಾಲುಗಳನ್ನು ಎದುರಿಸಿ, ಹಲವು ಪಾಠಗಳನ್ನು ಕಲಿತು ಅದನ್ನು ಮೆಟ್ಟಿ ನಿಲ್ಲಲು ಮುಂದಾಗುತ್ತಿದ್ದೇವೆ ಎನ್ನುತ್ತಾರೆ ಈ ಯುವ ಉದ್ಯಮಿಗಳು.

ಹೆಚ್ಚಿದ ಮನೆಯ ಅಂದಚೆಂದ: ಮನೆಯ ಹಾಲ್, ಬೆಡ್ ರೂಂ, ಬಾಲ್ಕನಿಗೆ ಹೊಸ ಸೊಬಗನ್ನು ತಂದು ಗ್ರಾಹಕರ ಮೆಚ್ಚುಗೆ ಪಡೆಯುತ್ತಿದ್ದಾರೆ. ತಮ್ಮ ತಂಡದ ಸೃಜನಶೀಲತೆಯನ್ನು ಒಟ್ಟು ಸೇರಿಸಿ ಬಣ್ಣಗಳ ಮಾಯಾಲೋಕ ಸೃಷ್ಟಿಸುತ್ತಿದ್ದಾರೆ. ಅತ್ಯಾಧುನಿಕ ಯಂತ್ರಗಳಲ್ಲಿ ರಚಿಸಲಾದ ಸುಂದರವಾದ ಗೋಡೆ ವಿನ್ಯಾಸಗಳು ಮತ್ತು 3D ವಾಲ್‌ಪೇಪರ್‌ಗಳು ಬಳಕೆದಾರರನ್ನು ಸಂತೋಷಪಡಿಸುತ್ತಿವೆ. ಮಾರ್ಕೆಟಿಂಗ್‌ನಲ್ಲಿ ಕಾಲಕಾಲಕ್ಕೆ ಆಗುತ್ತಿರುವ ಬದಲಾವಣೆ, ತಪ್ಪುಗಳನ್ನು ವಿಶ್ಲೇಷಿಸುತ್ತಾ ಮುನ್ನಡೆಯುತ್ತಿರುವ ಅಭಿನವ್ ಮತ್ತು ವಿಮಲ್ ತಮ್ಮ ಏಳು ವರ್ಷಗಳ ಅವಧಿಯಲ್ಲಿ ಹಿಂದೆಮುಂದೆ ನೋಡದೇ ಯಾವುದಕ್ಕೂ ಎದುರದೇ ಪಯಣ ಮುಂದುವರಿಸುತ್ತಿದ್ದಾರೆ.

ಡಿಸೈನ್​ ವಾಲ್ಸ್​ ಸಂಸ್ಥೆ ಇದುವರೆಗೆ 200ಕ್ಕೂ ಹೆಚ್ಚು ಕಂಪನಿಗಳೊಂದಿಗೆ 5000ಕ್ಕೂ ಹೆಚ್ಚು ಯೋಜನೆಗಳನ್ನು ಪೂರ್ಣಗೊಳಿಸಿದೆ. 30 ಲಕ್ಷ ಚದರ ಮೀಟರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಗೋಡೆ ವಿನ್ಯಾಸಗಳನ್ನು ಮಾಡಿದೆ. ಇಂತಹ ಮಹತ್ತರ ಸಾಧನೆ ಮಾಡುತ್ತಿರುವ ಈ ಯುವ ಗೆಳೆಯರಿಗೆ ಟೈಮ್ಸ್ ಆಫ್‌ ಇಂಡಿಯಾ ಸೇರಿದಂತೆ ನಾಲ್ಕು ರಾಷ್ಟ್ರ ಪ್ರಶಸ್ತಿಗಳು ಲಭಿಸಿರುವುದು ಸಂಸ್ಥೆಯ ನೌಕರರಿಗೆ ಸಂತಸ ತಂದಿದೆ.

ಇದನ್ನೂ ಓದಿ: ಯುವಜನತೆಗೆ ನಿರಂತರ ರೋಜಗಾರ್ ಮೇಳ: 71 ಸಾವಿರ ನೇಮಕಾತಿ ಪತ್ರ ಹಸ್ತಾಂತರಿಸಿದ ಮೋದಿ

ಮಣಿಕೊಂಡ, ಹೈಟೆಕ್ ಸಿಟಿ, ಮಿಯಾಪುರ, ಕೊಂಪಲ್ಲಿ, ತುಮಕುಂಟಾ, ಮತ್ತು ಎಲ್‌ಬಿನಗರದಲ್ಲಿ ವಿತರಕರು ಮತ್ತು ಡೀಲರ್ ಮಳಿಗೆಗಳನ್ನು ಸ್ಥಾಪಿಸಲಾಗಿದೆ. 2019ರಿಂದ, ವಾರ್ಷಿಕವಾಗಿ 10 ಕೋಟಿ ರೂಪಾಯಿಗಳ ವಹಿವಾಟುಗಳನ್ನು ನಡೆಸುತ್ತಿದೆ.

Last Updated : Nov 22, 2022, 3:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.