ETV Bharat / bharat

ತಮಿಳುನಾಡಿನಲ್ಲಿ 4.8 ಕೋಟಿ ರೂ. ಮೌಲ್ಯದ ಅಮಾನ್ಯ ನೋಟುಗಳು ಪತ್ತೆ

ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕಲ್ಯಾರ್‌ಕೋಯಿಲ್ ಪ್ರದೇಶದಲ್ಲಿ 4.8 ಕೋಟಿ ರೂ. ಮಾಲ್ಯದ 1000 ರೂಪಾಯಿ ಮುಖಬೆಲೆಯ ಅಮಾನ್ಯಗೊಂಡ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

author img

By

Published : Apr 13, 2021, 11:04 AM IST

Updated : Apr 13, 2021, 12:16 PM IST

Demonetised currency notes worth Rs 4.8 cr seized in Tamil Nadu's Sivaganga
ತಮಿಳುನಾಡಿನಲ್ಲಿ 4.8 ಕೋಟಿ ರೂ. ಮಾಲ್ಯದ ಅಮಾನ್ಯ ನೋಟುಗಳು ಪತ್ತೆ

ಶಿವಗಂಗ (ತಮಿಳುನಾಡು): ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕಲ್ಯಾರ್‌ಕೋಯಿಲ್ ಪ್ರದೇಶದಲ್ಲಿ ಅಮಾನ್ಯೀಕರಣಗೊಂಡ ನೋಟುಗಳನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.

ಪೊಲೀಸರ ಪ್ರಕಾರ, ಭೌತಚಿಕಿತ್ಸಕ ಅರುಲ್ ಚಿನ್ನಪ್ಪನ್ ಅವರ ಮನೆಯಿಂದ ಈ ನೋಟುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 4.8 ಕೋಟಿ ರೂ. ಮೌಲ್ಯದ 1000 ರೂಪಾಯಿ ಮುಖಬೆಲೆಯ ಅಮಾನ್ಯಗೊಂಡ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ನಡೆದುಕೊಂಡು ಹೋಗ್ತಿದ್ದ ವೈದ್ಯ ದಂಪತಿ ಮೇಲೆ ಹರಿದ ಕಾರು.. ಸಿಸಿಟಿವಿಯಲ್ಲಿ ದೃಶ್ಯ ಸೆರೆ!

2016 ನವೆಂಬರ್​ 8ರಂದು ಪ್ರಧಾನಿ ಮೋದಿ ಅವರು 1000 ಮತ್ತು 500 ರೂ. ಮುಖಬೆಲೆಯ ಹಳೆಯ ನೋಟುಗಳನ್ನು ಅಮಾನ್ಯೀಕರಣಗೊಳಿಸಿದ್ದರು. ಇದು ಎನ್​ಡಿಎ ಸರ್ಕಾರದ ಮಹತ್ವದ ನಿರ್ಧಾರಗಳಲ್ಲಿ ಒಂದಾಗಿತ್ತು. ಹಳೆ ನೋಟುಗಳು ರದ್ದಾದ ಬಳಿಕ ಕೆಲ ದಿನಗಳವರೆಗೆ ವ್ಯಾಪಾರಿಗಳು, ಜನಸಾಮಾನ್ಯರು ಕೆಲ ತೊಂದರೆಗಳನ್ನು ಅನುಭವಿಸಿದರು.

Last Updated : Apr 13, 2021, 12:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.