ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಒಟ್ಟಾರೆ ಗಾಳಿಯ ಗುಣಮಟ್ಟ ಸ್ವಲ್ಪಮಟ್ಟಿಗೆ ಸುಧಾರಿಸಿತ್ತು. ಆದರೆ ಇಂದು ಬೆಳಗ್ಗೆ ಕಳಪೆ ವಿಭಾಗದಲ್ಲಿ ದಾಖಲಾಗಿದೆ. ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 235 ದಾಖಲಾಗಿದೆ ಎಂದು ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ (ಸಫಾರ್) ತಿಳಿಸಿದೆ.
ದೆಹಲಿಯ ಒಟ್ಟಾರೆ ಗಾಳಿಯ ಗುಣಮಟ್ಟದಲ್ಲಿ ಸ್ವಲ್ಪ ಸುಧಾರಣೆಯಾಗಿದೆ ಎಂದು ಈ ಹಿಂದೆ ಸಫಾರ್ ಮುನ್ಸೂಚನೆ ನೀಡಿದೆ. "ಎಕ್ಯೂಐ ಮಧ್ಯಮ ವರ್ಗದಲ್ಲಿ ನಾಳೆಯ ವೇಳೆಗೆ ಸ್ವಲ್ಪಮಟ್ಟಿಗೆ ಸುಧಾರಿಸುವ ಸಾಧ್ಯತೆಯಿದೆ. ಮಾರ್ಚ್ 23 ಮತ್ತು 24 ರವರೆಗೆ ಮಧ್ಯಮದಿಂದ ಕಳಪೆ ಎಕ್ಯೂಐ ಮುನ್ಸೂಚನೆ ಇದೆ" ಎಂದು ಸಫಾರ್ ತಿಳಿಸಿದೆ.
ಇದನ್ನು ಓದಿ: 'ಬಾಂಬೆ ತಂಡ'ದ ಸದಸ್ಯರ ಕ್ಷೇತ್ರಗಳು ಅಭಿವೃದ್ಧಿಯಾದವೇ?; ಎಚ್ಡಿಕೆ ವಾಗ್ದಾಳಿ
ಸರ್ಕಾರಿ ಸಂಸ್ಥೆಗಳ ಪ್ರಕಾರ, 0-5 ರ ವ್ಯಾಪ್ತಿಯಲ್ಲಿರುವ ಎಕ್ಯೂಐ ಅನ್ನು 'ಒಳ್ಳೆಯದು', 51-100 'ತೃಪ್ತಿದಾಯಕ', 101-200 'ಮಧ್ಯಮ', 201-300 'ಕಳಪೆ' ಮತ್ತು 301-400 ' ತುಂಬಾ ಕಳಪೆ' ಮತ್ತು 401-500 ಅನ್ನು'ತೀವ್ರ ಕಳಪೆ' ಎಂದು ಪರಿಗಣಿಸಲಾಗುತ್ತದೆ.
ಪ್ರಾದೇಶಿಕ ಹವಾಮಾನ ಮುನ್ಸೂಚನೆ ಕೇಂದ್ರ (ಆರ್‌ಡಬ್ಲ್ಯುಎಫ್‌ಸಿ) ಮುಂದಿನ 2 ಗಂಟೆಗಳಲ್ಲಿ ರಾಜಸ್ಥಾನದ ಭದ್ರಾ, ಸಿಡ್ಮುಖ್, ಸದುಲ್‌ಪುರ ಮತ್ತು ಹರಿಯಾಣದ ಹನ್ಸಿ, ಹಿಸ್ಸಾರ್, ತೋಶಮ್, ಬಾರ್ವಾಲಾ, ನರ್ವಾನಾ, ಸಿವಾನಿ, ಅಡಂಪೂರ್, ಫತೇಹಾಬಾದ್‌ನ ಪ್ರತ್ಯೇಕ ಸ್ಥಳಗಳಲ್ಲಿ ಮಧ್ಯಮ ಮಳೆಯಾಗುವ ಮುನ್ಸೂಚನೆ ನೀಡಿದೆ.