ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಫೆಬ್ರವರಿ ನಡೆದ ಕೋಮು ಹಿಂಸಾಚಾರ ಪ್ರಕರಣದ ವಿದ್ಯಾರ್ಥಿ ಕಾರ್ಯಕರ್ತೆ ಗುಲ್ಫಿಶಾ ಫಾತಿಮಾ ಅವರಿಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಬ್ ರಾವತ್ ಅವರು ಫಾತಿಮಾ ಅವರಿಗೆ ಜಾಮೀನು ನೀಡಿದ್ದು, ಜಫ್ರಾಬಾದ್ ಪ್ರದೇಶದಲ್ಲಿ ನಡೆದ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ 30,000 ರೂ. ಜಾಮೀನು ಬಾಂಡ್ ಮೊತ್ತದೊಂದಿಗೆ ಜಾಮೀನು ನೀಡಲು ಒಪ್ಪಿದೆ.
ಈ ಪ್ರಕರಣದಲ್ಲಿ ಜೆಎನ್‌ಯು ವಿದ್ಯಾರ್ಥಿಗಳಾದ ದೇವಂಗನಾ ಕಾಳಿತಾ ಮತ್ತು ನತಾಶಾ ನರ್ವಾಲ್ ಅವರಿಗೆ ಈ ಹಿಂದೆ ಜಾಮೀನು ನೀಡಲಾಗಿತ್ತು.
ಫೆಬ್ರವರಿ 24ರಂದು ಈಶಾನ್ಯ ದೆಹಲಿಯಲ್ಲಿ ಕೋಮು ಸಂಘರ್ಷಗಳು ಭುಗಿಲೆದ್ದವು. ಪೌರತ್ವ ಕಾನೂನು ಬೆಂಬಲಿಗರು ಮತ್ತು ಪ್ರತಿಭಟನಾಕಾರರ ನಡುವಿನ ಹಿಂಸಾಚಾರದಲ್ಲಿ ಕನಿಷ್ಠ 53 ಜನರು ಸಾವನ್ನಪ್ಪಿದರು. ಸುಮಾರು 200 ಜನರು ಗಾಯಗೊಂಡಿದ್ದರು.