ETV Bharat / bharat

ಕಳೆದ ಬಾರಿಗಿಂತ ಈ ಬಾರಿ ಎಂಸಿಡಿ ವೋಟಿಂಗ್​ ನಿರಸ.. ಎಎಪಿ-ಬಿಜೆಪಿ ಮಧ್ಯೆ ತೀವ್ರ ಪೈಪೋಟಿ - 50 ಪ್ರತಿಶತದಷ್ಟು ಮತದಾನ

ಕಳೆದ ನಾಗರಿಕ ಚುನಾವಣೆಗಿಂತ ಈ ಬಾರಿಯ ಮತದಾನದ ಪ್ರಮಾಣ ಕಡಿಮೆಯಾಗಿದೆ. ಈ ಹಿಂದೆ ಅಂದ್ರೆ 2017 ರಲ್ಲಿ ನಡೆದ ನಾಗರಿಕ ಸಂಸ್ಥೆ ಚುನಾವಣೆಯಲ್ಲಿ 53 ಪ್ರತಿಶತ ಮತದಾನ ದಾಖಲಾಗಿತ್ತು. ಆದ್ರೆ ಈ ಬಾರಿ 50 ಪ್ರತಿಶತ ಮತದಾನವಾಗಿದೆ.

Delhi mcd polls analysis  AAP BJP claim victory in Delhi MCD polls  Delhi MCD polls  Delhi mcd polls turnout  ಈ ಬಾರಿ ಎಂಸಿಡಿ ವೋಟಿಂಗ್​ ನಿರಸ  ಎಎಪಿ ಬಿಜೆಪಿ ಮಧ್ಯೆ ತೀವ್ರ ಪೈಪೋಟಿ  ನಾಗರಿಕ ಚುನಾವಣೆಗಿಂತ ಈ ಬಾರಿಯ ಮತದಾನದ ಪ್ರಮಾಣ ಕಡಿಮೆ  ನಾಗರಿಕ ಸಂಸ್ಥೆ ಚುನಾವಣೆ  ಮುನ್ಸಿಪಲ್ ವಾರ್ಡ್‌ಗಳಿಗೆ ನಡೆದ ಚುನಾವಣೆ  50 ಪ್ರತಿಶತದಷ್ಟು ಮತದಾನ  ವಿಧಾನಸಭಾ ಚುನಾವಣೆಯಲ್ಲಿ ಪಕ್ಷ
ಕಳೆದ ಬಾರಿಗಿಂತ ಈ ಬಾರಿ ಎಂಸಿಡಿ ವೋಟಿಂಗ್​ ನಿರಸ
author img

By

Published : Dec 5, 2022, 9:59 AM IST

ನವದೆಹಲಿ: ದೆಹಲಿಯ 250 ಮುನ್ಸಿಪಲ್ ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಭಾನುವಾರ ಸುಮಾರು 50 ಪ್ರತಿಶತದಷ್ಟು ಮತದಾನ ದಾಖಲಾಗಿದೆ. ಪ್ರಮುಖ ಪ್ರತಿಸ್ಪರ್ಧಿಗಳಾದ ಬಿಜೆಪಿ ಮತ್ತು ಎಎಪಿ ಗೆಲುವಿಗಾಗಿ ಹರಸಾಹಸಪಟ್ಟಿವೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು 15 ವರ್ಷಗಳಿಂದ ಮುನ್ಸಿಪಲ್ ಸಂಸ್ಥೆಗಳನ್ನು ನಿಯಂತ್ರಿಸುತ್ತಿರುವ ಬಿಜೆಪಿ ನಡುವಿನ ಹೋರಾಟ ತೀವ್ರಗೊಂಡಿದೆ.

ಕಳೆದ ಚುನಾವಣೆಗಿಂತ ಈ ಬಾರಿಯ ಮತದಾನದ ಪ್ರಮಾಣ ಕಡಿಮೆಯಾಗಿದೆ. ಮತದಾನಕ್ಕೆ ಸಾರ್ವಜನಿಕರು ನಿರಾಸಕ್ತಿ ತೋರಿದಂತೆ ಕಾಣುತ್ತಿದೆ. ಇದರಿಂದಾಗಿ ರಾಜಕೀಯ ಮುಖಂಡರು ಹೆಚ್ಚು ಅಸಮಾಧಾನಗೊಂಡಂತೆ ಕಾಣುತ್ತಿದೆ. ಈ ಹಿಂದಿನ ಅಂದ್ರೆ 2017 ರಲ್ಲಿ ನಡೆದ ನಾಗರಿಕ ಸಂಸ್ಥೆ ಚುನಾವಣೆಯಲ್ಲಿ 53 ಪ್ರತಿಶತ ಮತದಾನ ದಾಖಲಾಗಿತ್ತು. ಆದ್ರೆ ಈ ಬಾರಿ ಶೇ.50ರಷ್ಟು ಮತದಾನವಾಗಿದೆ.

ಬೆಳಗಿನ ನಿರಸವಾಗಿ ಮತದಾನ ನಡೆಯಿತು. ಆದ್ರೆ ದಿನದ ಅಂತ್ಯದ ವೇಳೆಗೆ ಮತದಾನವು ವೇಗ ಪಡೆಯುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಆಗಲಿಲ್ಲ. ರಾಜಕಾರಣಿಗಳ ಹೇಳಿಕೆಗಳ ಹೊರತಾಗಿ, ಮತದಾರರ ನಿರಾಸಕ್ತಿ ಮತ್ತು ವಿಶ್ಲೇಷಕರ ಅಭಿಪ್ರಾಯವನ್ನು ನೋಡಿದರೆ ಪಾಲಿಕೆಯಲ್ಲಿ ಬಿಜೆಪಿಯ ಸಾಧನೆಯಿಂದ ಜನರು ಅಸಮಾಧಾನಗೊಂಡಿದ್ದರೂ ಸಹ ಎಎಪಿ ಮೇಲೆ ಹೆಚ್ಚಿನ ಭರವಸೆಯನ್ನು ಹೊಂದಿಲ್ಲ ಎಂಬುದು ಸ್ಪಷ್ಟವಾಗಿದೆ.

250 ವಾರ್ಡ್‌ಗಳ ಚುನಾವಣೆಯನ್ನು ರಾಜಕೀಯ ವಿಮರ್ಶಕರು ಹೆಚ್ಚಾಗಿ ಬಿಜೆಪಿ ಮತ್ತು ಎಎಪಿ ನಡುವಿನ ದ್ವಿಮುಖ ಸ್ಪರ್ಧೆ ಎಂದು ಪರಿಗಣಿಸುತ್ತಾರೆ ಮತ್ತು ಕಾಂಗ್ರೆಸ್ ಪಕ್ಷವು ನಗರದಲ್ಲಿ ಕ್ರಮೇಣ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದೆ.

ಜನರು ಬಿಜೆಪಿ ಮತ್ತು ಎಎಪಿ ಎರಡಕ್ಕೂ ಪಾಠ ಕಲಿಸಲು ಬಯಸುತ್ತಿರುವ ಕಾರಣ ಕಾಂಗ್ರೆಸ್ ಕೆಲವು ಅನುಕೂಲಗಳನ್ನು ಪಡೆದುಕೊಂಡಿದೆ. ಅದೇನೇ ಇದ್ದರೂ ಎಎಪಿ ಮತ್ತು ಅದರ ನಾಯಕ ಅರವಿಂದ್ ಕೇಜ್ರಿವಾಲ್ ಅವರು ದೇಶದಲ್ಲಿ 2024 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಪಕ್ಷದ ವಿಸ್ತರಣೆಯನ್ನು ಬಯಸುತ್ತಿರುವ ಕಾರಣ ಈ ಚುನಾವಣೆ ನಿರ್ಣಾಯಕವಾಗಿವೆ.

ಎಂಸಿಡಿ ಚುನಾವಣೆಯ ಗೆಲುವು ದೆಹಲಿಯಲ್ಲಿ ಎಎಪಿ ಸ್ಥಾನವನ್ನು ಭದ್ರಪಡಿಸುವುದಲ್ಲದೆ, ರಾಷ್ಟ್ರೀಯ ದೃಶ್ಯದಲ್ಲಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಗಂಭೀರ ಸ್ಪರ್ಧಿಯಾಗಿ ಹೊರಹೊಮ್ಮುವ ಆಕಾಂಕ್ಷೆಯನ್ನು ಉತ್ತೇಜಿಸುತ್ತದೆ. ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಮತ್ತು ಪಿಯೂಷ್ ಗೋಯಲ್ ಮತ್ತು ಆರು ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ತನ್ನ ಪ್ರಮುಖ ನಾಯಕರನ್ನು ಪ್ರಚಾರಕ್ಕೆ ನಿಯೋಜಿಸಿದ್ದ ಬಿಜೆಪಿಯು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಮೂಲಕ ವಿಮೋಚನೆಗಾಗಿ ಪ್ರಯತ್ನಿಸುತ್ತಿದೆ.

2020 ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಎಎಪಿಯ ಕೈಯಲ್ಲಿ ಸೋಲು ಕಂಡಿತು ಮತ್ತು 70 ಸ್ಥಾನಗಳಲ್ಲಿ ಕೇವಲ ಎಂಟು ಸ್ಥಾನಗಳನ್ನು ಗೆದ್ದಿತು. ಪಕ್ಷದ ಮೇಯರ್ ನೇತೃತ್ವದಲ್ಲಿ ಏಕೀಕೃತ ಎಂಸಿಡಿಯೊಂದಿಗೆ, ರಾಷ್ಟ್ರ ರಾಜಧಾನಿಯ ರಾಜಕೀಯದಲ್ಲಿ ಎಎಪಿ ಮತ್ತು ಕೇಜ್ರಿವಾಲ್‌ಗೆ ಸವಾಲು ಹಾಕುವುದನ್ನು ಬಿಜೆಪಿ ಮುಂದುವರಿಸಬಹುದು.

ಪೌರಕಾರ್ಮಿಕರ ನಿರ್ಲಕ್ಷ್ಯ ಎಂದು ಆರೋಪಿಸಿ ನಿವಾಸಿಗಳು ಚುನಾವಣೆ ಬಹಿಷ್ಕರಿಸಿದ್ದರಿಂದ ಬವನದ ಕಾಟೇವಾರ ಗ್ರಾಮದ ಮತಗಟ್ಟೆಗಳೆಲ್ಲ ಖಾಲಿ ಖಾಲಿಯಾಗಿದ್ದವು. ನಂಗಲ್ ಠಾಕ್ರಾನ್ ವಾರ್ಡ್‌ನ ಮತಗಟ್ಟೆಗಳಲ್ಲಿ ಚುನಾವಣೆಯನ್ನು ಬಹಿಷ್ಕರಿಸಲು ನಿವಾಸಿಗಳು ಸರ್ವಾನುಮತದಿಂದ ನಿರ್ಧರಿಸಿದ್ದಾರೆ ಎಂದು ಕಾಟೇವಾರ ಗ್ರಾಮದ ಕೃಷ್ಣಾ ವತ್ಸ್ ನಿವಾಸಿಯೊಬ್ಬರು ಹೇಳಿದ್ದರು.

ಸ್ವಚ್ಛತೆ, ಉದ್ಯಾನವನಗಳ ನಿರ್ವಹಣೆ, ವಾಹನ ನಿಲುಗಡೆ ವ್ಯವಸ್ಥೆ ಇಲ್ಲದಿರುವುದು ಮತದಾನಕ್ಕೆ ಬಂದ ಮಹಿಳೆಯರಿಗೆ ಆತಂಕ ತಂದಿತ್ತು. ಇಲ್ಲಿನ ಡಿಡಿಯು ಮಾರ್ಗದ ಪಿಂಕ್ ಬೂತ್‌ಗೆ ಆಗಮಿಸಿದ ಸಾಮಾನ್ಯ ವೈದ್ಯಾಧಿಕಾರಿ ಡಾ.ರೆಹಾನಾ ಪರ್ವೀನ್ ಅವರು ಕಾಲೋನಿಗಳಿಂದ ಕಸ ಸಂಗ್ರಹಣೆ ಸಮಸ್ಯೆ ಕುರಿತು ಮಾತನಾಡಿದರು.

ಮತದಾರರಲ್ಲಿ 106 ವರ್ಷದ ಶಾಂತಿ ಬಾಲ ವೈದ್ಯ ಅವರು ಬಾರಾ ಹಿಂದೂ ರಾವ್ ಪ್ರದೇಶದ ಉಪ ಗಂಜ್ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿರು. ಅವರ 106 ವರ್ಷ ವಯಸ್ಸಾಗಿದ್ದ ಅವರು ಮತದಾನ ಮಾಡಲು ಆರಂಭಿಸಿದಾಗಿನಿಂದಲೂ ಚುನಾವಣೆ ತಪ್ಪಿಸಿಲ್ಲ ಎಂದು ಅವರ ಮಗಳಾದ ಕಮಲಾ ಹೇಳಿದ್ದಾರೆ. ಶಾಂತಿ ಬಾಲ ವೈದ್ಯ (106) ಬೆಂಗಾಲಿಯನ್ನು ಮಾತ್ರ ಅರ್ಥಮಾಡಿಕೊಳ್ಳುತ್ತಾರೆ. ಆದರೆ ಅವರಿ ಮಾತನಾಡಲು ಸಾಧ್ಯವಿಲ್ಲ.

ವಿಶೇಷವಾಗಿ ರಾಷ್ಟ್ರ ರಾಜಧಾನಿಯ ನಿರ್ಣಾಯಕ ಅಥವಾ ಸೂಕ್ಷ್ಮ ಬೂತ್‌ಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಅರವತ್ತು ಡ್ರೋನ್‌ಗಳನ್ನು ಬಳಸಲಾಯಿತು. ಇದೇ ವೇಳೆ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷಗಳು ಮತದಾನದ ವೇಳೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿವೆ ಎಂದು ಪರಸ್ಪರ ಆರೋಪಿಸಿದರು.

ಎಂಸಿಡಿಯಲ್ಲಿ ಸತತ ನಾಲ್ಕನೇ ಬಾರಿಗೆ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಮರಳುತ್ತಿದೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಪ್ರತಿಪಾದಿಸಿದ್ದಾರೆ. ಕೇಜ್ರಿವಾಲ್ ಸರ್ಕಾರದ ಹಗರಣಗಳು ಮತ್ತು ಸುಳ್ಳು ಪ್ರಚಾರದ ವಿರುದ್ಧ ಜನರು ಮತ ಹಾಕಿದ್ದಾರೆ ಎಂದು ಗುಪ್ತಾ ಹೇಳಿದರು.

2012 ಮತ್ತು 2022 ರ ನಡುವೆ ದೆಹಲಿ 272 ವಾರ್ಡ್‌ಗಳು ಮತ್ತು ಮೂರು ನಿಗಮಗಳು ಹೊಂದಿತ್ತು.ಮೇ 22 ರಂದು ಅಸ್ತಿತ್ವಕ್ಕೆ ಬಂದ ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್‌ಗೆ ಈ ಮೂರು ನಾಗರಿಕ ಸಂಸ್ಥೆಗಳನ್ನು ಮರು ಸೇರ್ಪಡಿಸಲಾಯಿತು.

2017ರ ಪೌರ ಚುನಾವಣೆಯಲ್ಲಿ 270 ವಾರ್ಡ್‌ಗಳಲ್ಲಿ ಬಿಜೆಪಿ 181ರಲ್ಲಿ ಗೆಲುವು ಸಾಧಿಸಿತ್ತು. ಅಭ್ಯರ್ಥಿಗಳ ಸಾವಿನಿಂದ ಎರಡು ಕ್ಷೇತ್ರಗಳಲ್ಲಿ ಮತದಾನ ನಡೆಯಲಿಲ್ಲ. AAP 48 ವಾರ್ಡ್‌ಗಳನ್ನು ಮತ್ತು ಕಾಂಗ್ರೆಸ್ 27 ಸೀಟು ಗೆದ್ದಿತ್ತು. ಆ ವರ್ಷ ಮತದಾನದ ಶೇಕಡಾ 53 ರಷ್ಟಿತ್ತು. ಆದ್ರೆ ಈ ಬಾರಿಯ ಮತದಾನ ಶೇಕಡ 50ರಷ್ಟು ನಡೆದಿದೆ.

ಓದಿ: ಮದುವೆ ಮನೆಯಿಂದ ನೇರ ಮತಗಟ್ಟೆಗೆ.. ಮತದಾನ ಮಾಡಿ ಗಮನ ಸೆಳೆದ ನವದಂಪತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.