ನವ ದೆಹಲಿ: ಎಂಟು ತಿಂಗಳ ಗರ್ಭಿಣಿಗೆ ವೈದ್ಯಕೀಯ ಗರ್ಭಪಾತಕ್ಕೆ ಒಳಗಾಗಲು ದೆಹಲಿ ಹೈಕೋರ್ಟ್ ಮಂಗಳವಾರ ಒಪ್ಪಿಗೆ ಕೊಟ್ಟಿದೆ. ಭ್ರೂಣದಲ್ಲಿ ಮಿದುಳಿನ ತೊಂದರೆ ಕಂಡುಬಂದಿರುವ ಕಾರಣಕ್ಕೆ 26 ವರ್ಷದ ಮಹಿಳೆ ಗರ್ಭಪಾತಕ್ಕೆ ಅವಕಾಶ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ವಿಚಾರದಲ್ಲಿ ತಾಯಿಯ ಆಯ್ಕೆಯೇ ಅಂತಿಮ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು ವೈದ್ಯಕೀಯ ಗರ್ಭಪಾತಕ್ಕೆ ಅನುಮತಿಸಿತು. ಅರ್ಜಿದಾರರು ಅವರ ಆಯ್ಕೆಯ ಯಾವುದೇ ಆಸ್ಪತ್ರೆಯಲ್ಲಿ ತಕ್ಷಣವೇ ಗರ್ಭಪಾತ ಮಾಡಿಸಿಕೊಳ್ಳಬಹುದು ಎಂದು ನ್ಯಾಯಮೂರ್ತಿ ಪ್ರತಿಭಾ ಎಂ.ಸಿಂಗ್ ಆದೇಶ ನೀಡಿದ್ದಾರೆ. ಭಾರತೀಯ ಕಾನೂನಿನಲ್ಲಿ ಗರ್ಭ ಧರಿಸಿದ ನಂತರ ಮಗುವಿಗೆ ಜನ್ಮ ನೀಡಬೇಕೇ ಅಥವಾ ಬೇಡವೇ ಎಂದು ಮಹಿಳೆಯೇ ನಿರ್ಧರಿಸುತ್ತಾಳೆ ಎಂದು ಅವರು ಹೇಳಿದರು.
ಇದನ್ನೂ ಓದಿ:ಮೋರ್ಬಿ ದುರಂತ.. ಆಕ್ಷೇಪಾರ್ಹ ಟ್ವೀಟ್ ಪ್ರಕಟಿಸಿದ್ದಆರೋಪ: ಟಿಎಂಸಿ ವಕ್ತಾರ ಸಾಕೇತ್ ಗೋಖಲೆ ಬಂಧನ