ETV Bharat / bharat

ದೆಹಲಿಯ ಔರಂಗಜೇಬ್ ರಸ್ತೆಯ ಹೆಸರು ಬದಲು; ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಮರುನಾಮಕರಣ

ಔರಂಗಜೇಬ್ ರಸ್ತೆಯನ್ನು ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಮರುನಾಮಕರಣ ಮಾಡಲಾಗಿದೆ ಎಂದು ನವದೆಹಲಿ ಮುನ್ಸಿಪಲ್ ಕೌನ್ಸಿಲ್ ತಿಳಿಸಿದೆ.

New Delhi Municipal Council
ನವದೆಹಲಿ ಮುನ್ಸಿಪಲ್ ಕೌನ್ಸಿಲ್
author img

By

Published : Jun 28, 2023, 5:46 PM IST

ನವದೆಹಲಿ: ದೆಹಲಿಯ ಲುಟಿನ್ಸ್​ನಲ್ಲಿರುವ ಔರಂಗಜೇಬ್ ರಸ್ತೆಗೆ ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಮರುನಾಮಕರಣ ಮಾಡಲಾಗಿದೆ. ಈ ಕುರಿತು ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಅಧಿಕಾರಿಗಳು ಬುಧವಾರ ಪ್ರಕಟಣೆ ಹೊರಡಿಸಿದ್ದಾರೆ. ಎನ್‌ಡಿಎಂಸಿ ಸದಸ್ಯರ ಸಭೆಯಲ್ಲಿ ರಸ್ತೆಗೆ ಮರುನಾಮಕರಣ ಮಾಡಲು ಅನುಮೋದನೆ ನೀಡಲಾಗಿದೆ. ಎನ್‌ಡಿಎಂಸಿ ಆಗಸ್ಟ್ 2015ರಲ್ಲಿ ಔರಂಗಜೇಬ್ ರಸ್ತೆಯ ಹೆಸರನ್ನು ಡಾ.ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಬದಲಾಯಿಸಿತ್ತು. ಮರುನಾಮಕರಣವಾದ ಅಬ್ದುಲ್ ಕಲಾಂ ರಸ್ತೆಯು ಪೃಥ್ವಿರಾಜ್ ರಸ್ತೆಯನ್ನು ಸಂಪರ್ಕಿಸುತ್ತದೆ.

''ನವದೆಹಲಿಯ ಸೆಕ್ಷನ್ 231ರ ಉಪ-ವಿಭಾಗ(1)ರ ಷರತ್ತು (ಎ) ಪ್ರಕಾರ ಎನ್‌ಡಿಎಂಸಿ ಪ್ರದೇಶದ ಅಡಿಯಲ್ಲಿ ಔರಂಗಜೇಬ್ ರಸ್ತೆಯ ಹೆಸರು ಬದಲಾಯಿಸಲು ಕೌನ್ಸಿಲ್ ಮುಂದೆ ಪ್ರಸ್ತಾವ ಇರಿಸಲಾಗಿತ್ತು. ಮುನ್ಸಿಪಲ್ ಕಾಯಿದೆ-1994 ಅಡಿಯಲ್ಲಿ ಔರಂಗಜೇಬ್ ರಸ್ತೆಯನ್ನು ಡಾ.ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಮರುನಾಮಕರಣ ಮಾಡಲು ಕೌನ್ಸಿಲ್ ಅನುಮೋದಿಸಿದೆ'' ಎಂದು ಎನ್‌ಡಿಎಂಸಿ ಉಪಾಧ್ಯಕ್ಷ ಸತೀಶ್ ಉಪಾಧ್ಯಾಯ ತಿಳಿಸಿದರು.

ನೆಹರು ಸ್ಮಾರಕ ವಸ್ತು ಸಂಗ್ರಹಾಲಯ & ಗ್ರಂಥಾಲಯ ಸೊಸೈಟಿ ಹೆಸರು ಬದಲು: ದೆಹಲಿಯ ತೀನ್ ಮೂರ್ತಿ ಭವನದ ಆವರಣದಲ್ಲಿನ ನೆಹರು ಸ್ಮಾರಕ ವಸ್ತು ಸಂಗ್ರಹಾಲಯ ಹಾಗೂ ಗ್ರಂಥಾಲಯ ಸೊಸೈಟಿಯನ್ನು ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಹಾಗೂ ಗ್ರಂಥಾಲಯ ಸೊಸೈಟಿ ಎಂದು ಹೆಸರು ಬದಲಾಯಿಸಲಾಗಿದೆ. ಪ್ರಧಾನಮಂತ್ರಿಗಳ ಸಂಗ್ರಹಾಲಯ ಉದ್ಘಾಟನೆಗೊಂಡ ಒಂದು ವರ್ಷದ ಬಳಿಕ ಈ ರೀತಿಯ ಬೆಳವಣಿಗೆ ಜುರುಗಿದೆ. ತೀನ್ ಮೂರ್ತಿ ಭವನವು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಅಧಿಕೃತ ನಿವಾಸವಾಗಿತ್ತು. ನೆಹರು ಸ್ಮಾರಕ ವಸ್ತು ಸಂಗ್ರಹಾಲಯ ಹಾಗೂ ಗ್ರಂಥಾಲಯ ಸೊಸೈಟಿಯ (ಎನ್‌ಎಂಎಂಎಲ್) ವಿಶೇಷ ಸಭೆಯಲ್ಲಿ ಮರುನಾಮಕರಣ ಮಾಡಲು ನಿರ್ಧರಿಸಲಾಗಿತ್ತು ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ಜೂನ್ 16ರಂದು ಪ್ರಕಟಿಸಿತ್ತು.

ಸೊಸೈಟಿಯ ಉಪಾಧ್ಯಕ್ಷ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಭೆಯ ಅಧ್ಯಕ್ಷತೆಯನ್ನ ವಹಿಸಿದ್ದರು. ''ಹೆಸರು ಬದಲಾವಣೆಯ ಪ್ರಸ್ತಾವವನ್ನು ಸ್ವಾಗತಿಸಿದ್ದರು. ಸೊಸೈಟಿಯು ತನ್ನ ನೂತನ ರೂಪದಲ್ಲಿ ಜವಾಹರಲಾಲ್ ನೆಹರು ಅವರಿಂದ ನರೇಂದ್ರ ಮೋದಿ ಅವರೆಗಿನ ಎಲ್ಲ ಪ್ರಧಾನ ಮಂತ್ರಿಗಳ ಕೊಡುಗೆಗಳನ್ನು ಹಾಗೂ ಅವರು ತಮ್ಮ ಕಾಲಘಟ್ಟದಲ್ಲಿ ಎದುರಿಸಿದ ಹಲವು ಸವಾಲುಗಳಿಗೆ ಯಾವ ರೀತಿ ಪ್ರತಿಕ್ರಿಯಿಸಿದ್ದರು ಎಂಬುದನ್ನು ಪ್ರದರ್ಶಿಸುತ್ತದೆ ಎಂದು ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದರು.

ಪ್ರಧಾನ ಮಂತ್ರಿಗಳನ್ನು ಒಂದು ಸಂಸ್ಥೆ ಎಂದು ಹೇಳಿದ್ದ ಸಚಿವ ರಾಜನಾಥ್ ಅವರು, ವಿವಿಧ ಪ್ರಧಾನಮಂತ್ರಿಗಳ ಪ್ರಯಾಣವನ್ನು ಮಳೆಬಿಲ್ಲಿನ ಹಲವು ಬಣ್ಣಗಳಿಗೆ ಹೋಲಿಕೆ ಮಾಡಿದ್ದರು. ಕಾಮನಬಿಲ್ಲಿನ ಎಲ್ಲ ಬಣ್ಣಗಳನ್ನು ಸುಂದರವಾಗಿಸಲು ಪ್ರಮಾಣಕ್ಕೆ ಅಗುಣವಾಗಿ ಪ್ರತಿನಿಧಿಸಬೇಕಾಗುತ್ತದೆ. ಇದರಿಂದ ಈ ನಿರ್ಣಯವನ್ನು ನಮ್ಮ ಹಿಂದಿನ ಎಲ್ಲ ಪ್ರಧಾನಮಂತ್ರಿಗಳಿಗೆ ಪ್ರಜಾಪ್ರಭುತ್ವ ನೆಲೆಗಟ್ಟಿನಲ್ಲಿ ಹೊಸ ಹೆಸರು ಮತ್ತು ಗೌರವವನ್ನು ನೀಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಮುಂಬೈ ಸಮುದ್ರ ಸೇತುವೆಗೆ ಸಾವರ್ಕರ್, ಹಾರ್ಬರ್ ಮಾರ್ಗಕ್ಕೆ ವಾಜಪೇಯಿ ಹೆಸರಿಡಲು ತೀರ್ಮಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.