ETV Bharat / bharat

ಗಡಿಯಲ್ಲಿ ಅಹಿತಕರ ಘಟನೆ ನಡೆದಿಲ್ಲ, ಶಾಂತಿ ಸ್ಥಾಪಿಸಲಾಗಿದೆ: ಸಂಸತ್ತಿಗೆ ರಾಜನಾಥ್​ ಸಿಂಗ್​ ಸ್ಷಷ್ಟನೆ

ಅರುಣಾಚಲಪ್ರದೇಶದಲ್ಲಿ ಚೀನಾ ಮತ್ತು ಭಾರತ ಸೇನೆಗಳ ಮಧ್ಯೆ ನಡೆದ ಗಲಾಟೆಯ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್​ ಸಂಸತ್ತಿಗೆ ಮಾಹಿತಿ ನೀಡಿದರು.

defence-minister-rajnath-singh
ರಾಜನಾಥ್​ ಸಿಂಗ್​
author img

By

Published : Dec 13, 2022, 12:44 PM IST

Updated : Dec 13, 2022, 1:17 PM IST

ನವದೆಹಲಿ: ದೇಶದ ಗಡಿ ಮತ್ತು ಸಾರ್ವಭೌಮತೆಯನ್ನು ಕಾಪಾಡುವಲ್ಲಿ ಭಾರತೀಯ ಸೇನೆ ಹಿಂಜರಿಯುವುದಿಲ್ಲ. ಚೀನಾದ ಆಕ್ರಮಣವನ್ನು ನಮ್ಮ ಹೆಮ್ಮೆಯ ಸೇನೆ ಹಿಮ್ಮೆಟ್ಟಿಸಿದೆ. ಗಡಿಯಲ್ಲಿ ಶಾಂತಿ ನೆಲೆಗೊಳ್ಳುವಂತೆ ನೋಡಿಕೊಳ್ಳಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಸಂಸತ್ತಿಗೆ ತಿಳಿಸಿದರು.

ಲೋಕಸಭೆಯಲ್ಲಿ ಮಾತನಾಡಿದ ಅವರು, ಡಿ.9 ರಂದು ವಾಸ್ತವಿಕ ಗಡಿ ರೇಖೆ ದಾಟಿ ಬಂದ ಚೀನಾ ಸೈನಿಕರು, ಭಾರತೀಯ ಸೈನಿಕರ ಜೊತೆ ಗಲಾಟೆ ಮಾಡಿದ್ದಾರೆ. ಈ ವೇಳೆ ಉಭಯ ಸೈನಿಕರಿಗೆ ಗಾಯಗಳಾಗಿವೆ. ಯಾವುದೇ ಸೈನಿಕರು ಹುತಾತ್ಮರಾಗಿಲ್ಲ. ತಕ್ಷಣವೇ ಸೈನಿಕರನ್ನು ಆ ಪ್ರದೇಶದಿಂದ ಹಿಂತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಅರುಣಾಚಲಪ್ರದೇಶದ ತವಾಂಗ್ ಸೆಕ್ಟರ್​ನಲ್ಲಿ ಗಡಿ ದಾಟಿ ಬಂದ ಚೀನಿ ಸೈನಿಕರನ್ನು ನಮ್ಮ ಯೋಧರು ಹಿಮ್ಮೆಟ್ಟಿಸುವಾಗ ಗಲಾಟೆ ನಡೆದಿದೆ. ಈ ವೇಳೆ ಸೇನಾ ಕಮಾಂಡರ್​ಗಳ ಸಮಯೋಚಿತ ಮಧ್ಯಸ್ಥಿಕೆಯಿಂದಾಗಿ ಗಲಾಟೆ ತಡೆಯಲಾಗಿದೆ. ಭಾರತೀಯ ಸೇನೆ ದೇಶದ ಗಡಿ ರಕ್ಷಣೆಗೆ ಕಟಿಬದ್ಧವಾಗಿದೆ. ಅಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ರಾಜನಾಥ್ ಸಿಂಗ್​ ಹೇಳಿದರು.

ಸದನದಿಂದ ಹೊರನಡೆದ ವಿಪಕ್ಷಗಳ ಸದಸ್ಯರು: ಅರುಣಾಚಲಪ್ರದೇಶದ ಗಡಿಯಲ್ಲಿ ಚೀನಾ ಸೈನಿಕರು ನಡೆಸಿದ ಗಲಾಟೆ ಮತ್ತು ದೇಶದ ಸಾರ್ವಭೌಮತೆಯ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್​ ಸೇರಿದಂತೆ ವಿಪಕ್ಷಗಳು ಮನವಿ ಮಾಡಿದ್ದರು. ಅದಕ್ಕೆ ಸಭಾಧ್ಯಕ್ಷರು ಅವಕಾಶ ನೀಡದ ಕಾರಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್​ ಸದಸ್ಯರು ಘೋಷಣೆ ಕೂಗುತ್ತಾ ಸ​ದನದಿಂದಲೇ ಹೊರನಡೆದರು.

ವಿಪಕ್ಷಗಳ ವಿರುದ್ಧ ಅಮಿತ್​ ಶಾ ಕೆಂಡ: ಗಡಿ ತಂಟೆಯ ಬಗ್ಗೆ ಚರ್ಚೆಗಾಗಿ ವಿಪಕ್ಷಗಳು ಸದನದಲ್ಲಿ ನಡೆಸಿದ ಗದ್ದಲದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಕಿಡಿಕಾರಿದ್ದಾರೆ. ರಕ್ಷಣಾ ಸಚಿವರು ಈ ಬಗ್ಗೆ ಉತ್ತರ ನೀಡುವುದಾಗಿ ಹೇಳಿದರೂ, ವಿಪಕ್ಷಗಳು ಗಲಾಟೆ ನಡೆಸಿ ಸದನದ ಸಮಯ ಹಾಳು ಮಾಡಿವೆ. ಇದು ಖಂಡನೀಯ ಎಂದರು.

ರಾಜೀವ್ ಗಾಂಧಿ ಪ್ರತಿಷ್ಠಾನದ ಎಫ್‌ಸಿಆರ್‌ಎ ಉಲ್ಲಂಘನೆಯ ಕುರಿತು ಚರ್ಚಿಸುವುದನ್ನು ತಪ್ಪಿಸಲು ಪ್ರತಿಪಕ್ಷಗಳು ಭಾರತ-ಚೀನಾ ಮುಖಾಮುಖಿಯನ್ನು ಪ್ರಸ್ತಾಪಿಸುತ್ತಿವೆ. ದೇಶದ ಗಡಿಯನ್ನು ನಮ್ಮ ಸೇನೆ ಧೀರೋತ್ತವಾಗಿ ಕಾಪಾಡುತ್ತಿದೆ. ಸದ್ಯಕ್ಕೆ ಶಾಂತಿ ಕಾಪಾಡಲಾಗಿದೆ ಎಂದು ಹೇಳಿದರು.

ಓದಿ: ಚೀನಾ ಮತ್ತೆ ಗಡಿ ತಂಟೆ: ಸೇನಾಧಿಕಾರಿಗಳ ಉನ್ನತ ಮಟ್ಟದ ಸಭೆ, ಸಂಸತ್ತಿನಲ್ಲಿ ಚರ್ಚೆಗೆ ಕಾಂಗ್ರೆಸ್​ ಆಗ್ರಹ

Last Updated : Dec 13, 2022, 1:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.