ತಿರುವನಂತಪುರಂ(ಕೇರಳ): ಕಾಂಗ್ರೆಸ್ ಪಕ್ಷದಿಂದ ಆಯೋಜಿಸಲಾಗಿರುವ ಭಾರತ್ ಜೋಡೊ ಯಾತ್ರೆಗೆ ಇಂದು (ಸೋಮವಾರ, ಸೆ.12) ಜನರಿಂದ ವ್ಯಾಪಕ ಸ್ಪಂದನೆ ಸಿಕ್ಕಿದೆ. ಬೆಳಗ್ಗೆ ಕೇರಳದ ವೆಲ್ಲಾಯನಿ ಜಂಕ್ಷನ್ನಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯಾತ್ರೆಯನ್ನು ಮುಂದುವರೆಸಿದರು. ಈ ಸಂದರ್ಭದಲ್ಲಿ ವಯನಾಡ್ ಸಂಸದ ರಾಹುಲ್ರನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲೂ ಜನಸ್ತೋಮ ನೆರೆದಿತ್ತು.
ಯಾತ್ರೆಯಲ್ಲಿ ಪಾಲ್ಗೊಳ್ಳಲು ಸಾವಿರಾರು ಜನ ನಡೆದು ಬರುತ್ತಿದ್ದು, ರಾಹುಲ್ರನ್ನು ನೋಡುವ ಸಲುವಾಗಿಯೇ ಇನ್ನೂ ಸಾವಿರಾರು ಜನ ಯಾತ್ರೆಯ ಮಾರ್ಗದುದ್ದಕ್ಕೂ ಜಮಾಯಿಸಿದ್ದಾರೆ. ಭಾನುವಾರ ಇಲ್ಲಿನ ನೇಮೊಮ್‌ನಲ್ಲಿ ದಿನದ ಯಾತ್ರೆ ಮುಕ್ತಾಯಗೊಂಡಾಗ, ಕೇರಳವು ಎಲ್ಲರನ್ನೂ ಗೌರವಿಸುತ್ತದೆ ಮತ್ತು ತಮ್ಮನ್ನು ವಿಭಜಿಸಲು ಅಥವಾ ದ್ವೇಷವನ್ನು ಹರಡಲು ಬಿಡುವುದಿಲ್ಲ. ಭಾರತ್ ಜೋಡೋ ಯಾತ್ರೆಯು ಒಂದರ್ಥದಲ್ಲಿ ಈ ಆಲೋಚನೆಗಳ ವಿಸ್ತರಣೆಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು.
-
Kerala | Congress begins its sixth day of the #BharatJodoYatra, led by party MP Rahul Gandhi, in Thiruvananthapuram pic.twitter.com/0zFHZdCZ2a
— ANI (@ANI) September 12, 2022 " class="align-text-top noRightClick twitterSection" data="
">Kerala | Congress begins its sixth day of the #BharatJodoYatra, led by party MP Rahul Gandhi, in Thiruvananthapuram pic.twitter.com/0zFHZdCZ2a
— ANI (@ANI) September 12, 2022Kerala | Congress begins its sixth day of the #BharatJodoYatra, led by party MP Rahul Gandhi, in Thiruvananthapuram pic.twitter.com/0zFHZdCZ2a
— ANI (@ANI) September 12, 2022
ಯಾತ್ರೆಯು ಸಂಜೆ 5 ಗಂಟೆಗೆ ಕಜಕುಟ್ಟಂ ತಲುಪಲಿದೆ. ಅಲ್ಲಿ ದಿನದ ಪ್ರಯಾಣವು ಕೊನೆಗೊಳ್ಳಲಿದೆ ಎಂದು ಕಾಂಗ್ರೆಸ್ ಬಿಡುಗಡೆ ಮಾಡಿದ ಯಾತ್ರೆಯ ವಿವರದಲ್ಲಿ ತಿಳಿಸಲಾಗಿದೆ. ಶನಿವಾರ ಸಂಜೆ ಕೇರಳ ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆ ಅಕ್ಟೋಬರ್ 1 ರಂದು ಕರ್ನಾಟಕವನ್ನು ಪ್ರವೇಶಿಸಲಿದೆ. ಇದಕ್ಕೂ ಮುನ್ನ ಯಾತ್ರೆಯ 19 ದಿನಗಳ ಅವಧಿಯಲ್ಲಿ ಏಳು ಜಿಲ್ಲೆಗಳ ಮೂಲಕ 450 ಕಿಲೋಮೀಟರ್ ದೂರ ಕ್ರಮಿಸಲಿದೆ.
ಇದನ್ನೂ ಓದಿ : ಭಾರತ ಜೋಡೋ ಯಾತ್ರೆ.. ಚರ್ಚೆಗೀಡಾದ ರಾಹುಲ್ ಟೀ ಶರ್ಟ್ ಬೆಲೆ: ಬಿಜೆಪಿ ಟ್ವೀಟ್ ವ್ಯಂಗ್ಯ.. ಕಾಂಗ್ರೆಸ್ ತಿರುಗೇಟು