ವಾರಣಾಸಿ(ಉತ್ತರ ಪ್ರದೇಶ): ಹಳೆಯ ಸಂಪ್ರದಾಯಗಳನ್ನು ಬದಿಗಿರಿಸಿ, ಕೊರೊನಾದಿಂದ ಮೃತಪಟ್ಟ ತಮ್ಮ ತಂದೆಯ ಅಂತ್ಯಕ್ರಿಯೆ ನಡೆಸುವ ಮೂಲಕ ಮೂವರು ಹೆಣ್ಣು ಮಕ್ಕಳು ಸಮಾಜಕ್ಕೆ ಮಾದರಿಯಾಗಿದ್ದಾರೆ.
ಉತ್ತರ ಪ್ರದೇಶದ ಮಣಿಕರ್ಣಿಕಾ ಘಾಟ್ನಲ್ಲಿ ಹೆಣ್ಣು ಮಕ್ಕಳು ತಮ್ಮ ತಂದೆಯ ಕ್ರಿಯಾ ವಿಧಾನಗಳನ್ನು ಪುರೈಸಿದ್ದು, ಹಳೆಯ ಕಟ್ಟು ಸಂಪ್ರದಾಯಗಳಿಗೆ ಸೆಡ್ಡು ಹೊಡೆದು, ಅಚ್ಚರಿ ಮೂಡಿಸಿದ್ದಾರೆ.
ಕೆಲವು ದಿನಗಳ ಹಿಂದೆ ಗಾಜಿಯಾಬಾದ್ ಮೂಲದ ವಕೀಲ ಗಿರಿಜೇಶ್ ಸಿಂಗ್ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರು. ಈ ವೇಳೆ ಅಂತ್ಯ ಸಂಸ್ಕಾರ ವಿಧಾನವಾದ 'ಮುಖಾಗ್ನಿ' ಅನ್ನು ಆತನ ಹೆಣ್ಣುಮಕ್ಕಳಾದ ಕಾತ್ಯಾಯಿನಿ, ದಿವ್ಯ, ತೃಪ್ತಿ ನೆರವೇರಿಸಿದ್ದಾರೆ.
ಇದನ್ನೂ ಓದಿ: ಮೋದಿ ರಾಜೀನಾಮೆಗೆ ಆಗ್ರಹಿಸಿದ್ದ ಪೋಸ್ಟ್ಗಳನ್ನು ಹೈಡ್ ಮಾಡಿದ ಫೇಸ್ಬುಕ್
ತಂದೆಗೆ ಕೋವಿಡ್ ದೃಢಪಟ್ಟಿದೆ ಎಂದು ತಿಳಿದುಬಂದಾಗ ಹಲವು ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಈ ಮೂವರು ಹೆಣ್ಣು ಮಕ್ಕಳು ತಿರುಗಾಡಿದ್ದರು. ಆದ್ರೆ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿರಲಿಲ್ಲ.
ಹೆಣ್ಣು ಮಕ್ಕಳನಿಂದ ಯಾಕೆ ಈ ನಿರ್ಧಾರ..?
ಸರಿಯಾದ ಚಿಕಿತ್ಸೆ ಸಿಗದೆ ಗಿರಿಜೇಶ್ ಸಿಂಗ್ ಮೃತಪಟ್ಟಾಗ ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಯಾರೂ ಮುಂದೆ ಬಂದಿರಲಿಲ್ಲ. ಸ್ವತಃ ಸಂಬಂಧಿಗಳೇ ಅಂತ್ಯಸಂಸ್ಕಾರ ನೆರವೇರಿಸಿಕೊಡಲು ನಿರಾಕರಿಸಿದರು. ಈ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳೇ ಅಂತಿಮ ವಿಧಿವಿಧಾನಗಳನ್ನು ಪೂರೈಸಿದ್ದಾರೆ.
ಕೋವಿಡ್ ಭೀತಿಯಿಂದ ಯಾರೂ ಸಹಕಾರ ನೀಡಿಲ್ಲವೆಂದು ಮಗಳು ಕಾತ್ಯಾಯಿನಿ ಹೇಳಿದ್ದು, ವೈದ್ಯಕೀಯ ವ್ಯವಸ್ಥೆ ಹದಗೆಟ್ಟಿರುವುದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.