ರಾಂಚಿ : ಜಿಲ್ಲೆಯ ಒರ್ಮಂಜಿ ಬ್ಲಾಕ್‌ನ ದಹು ಗ್ರಾಮದ ನಿವಾಸಿ ಸೀಮಾ ಕುಮಾರಿ, ಕೇಂಬ್ರಿಡ್ಜ್‌ನ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಓದಲು ತೆರಳಲಿದ್ದಾರೆ.
ಇದಕ್ಕಾಗಿ ಅವರು ವಿವಿಯಿಂದ ವಿದ್ಯಾರ್ಥಿವೇತನ ಪಡೆಯಲಿದ್ದಾರೆ. 'ಯುವ' ಹೆಸರಿನ ಸಂಸ್ಥೆ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಇದಕ್ಕೆ ಸಂಬಂಧಿಸಿದ ಮಾಹಿತಿ ಹಂಚಿಕೊಂಡಿದೆ.
ಸೀಮಾ ತಂದೆತಾಯಿ ಸುಶಿಕ್ಷಿತರಲ್ಲ. ಕುಟುಂಬ ಸಹ ರೈತಾಪಿ ಕುಟುಂಬ. ಜೊತೆಗೆ ಸೀಮಾ ತಂದೆ ಥ್ರೆಡ್ ಕಾರ್ಖಾನೆಯಲ್ಲಿ ಕಾರ್ಮಿಕರಾಗಿದ್ದಾರೆ.
ಸೀಮಾ 2012ರಲ್ಲಿ ಯುವ ಸಂಸ್ಥೆಯ ಫುಟ್ಬಾಲ್ ತಂಡಕ್ಕೆ ಸೇರಿದರು. ಆರಂಭದಲ್ಲಿ, ಅವರು ಸಾಕಷ್ಟು ತೊಂದರೆಗಳನ್ನು ಎದುರಿಸಿದರು.
ಆದರೆ, ಧೈರ್ಯ ಕಳೆದುಕೊಳ್ಳದೆ, ‘ ಮುನ್ನುಗ್ಗಿದ ಸೀಮಾ ಈಗ ತಮ್ಮ ಕುಟುಂಬದಲ್ಲಿ ವಿಶ್ವವಿದ್ಯಾಲಯವೊಂದರಲ್ಲಿ ಅಧ್ಯಯನ ಮಾಡಿದ ಮೊದಲ ಹೆಣ್ಣುಮಗಳಾಗಲಿದ್ದಾರೆ.
ಸೀಮಾ ಅವರ ಈ ಸಾಧನೆಯ ಹಿಂದಿರುವ ಶಕ್ತಿ ಜಾರ್ಖಂಡ್‌ನ 'ಯುವ' ಎಂಬ ಸ್ವಯಂಸೇವಕ ಸಂಸ್ಥೆ. ಈ ಸಂಸ್ಥೆ ಜಾರ್ಖಂಡ್‌ನ ಗ್ರಾಮೀಣ ಪ್ರದೇಶಗಳ ಬಡ ಹುಡುಗಿಯರಿಗೆ ಫುಟ್‌ಬಾಲ್ ಕಲಿಸುತ್ತದೆ. ಆ ಮೂಲಕ ಅವರ ಜೀವನವನ್ನು ಸುಧಾರಿಸಲು ಕೆಲಸ ಮಾಡುತ್ತಿದೆ.
'ಯುವ' ಸಂಸ್ಥಾಪಕ ಫ್ರಾಂಜ್ ಗ್ಯಾಸ್ಟ್ಲರ್ ಯುಎಸ್ ಪ್ರಜೆ. ಫ್ರಾಂಜ್ 2007 ರಲ್ಲಿ ಭಾರತಕ್ಕೆ ಬಂದು 2009 ರಲ್ಲಿ ಜಾರ್ಖಂಡ್‌ನ ರಾಂಚಿಯಲ್ಲಿ ಯುವ ಎಂಬ ಸಂಸ್ಥೆ ಸ್ಥಾಪಿಸಿದ್ರು. ಈ ಸಂಸ್ಥೆಗೆ ಸೇರಿದ ಎಷ್ಟು ಬಡ ಹುಡುಗಿಯರು ಜಾರ್ಖಂಡ್ ಹೆಸರನ್ನು ಅನೇಕ ದೇಶಗಳಲ್ಲಿ ಬೆಳಗಿಸಿದ್ದಾರೆ.
ಇನ್ನು, ಬಾಲಿವುಡ್ ನಟ ಪ್ರಿಯಾಂಕಾ ಚೋಪ್ರಾ ತಮ್ಮ ಟ್ವಿಟರ್ನಲ್ಲಿ ಸೀಮಾ ಅವರನ್ನು ಹೊಗಳಿದ್ದಾರೆ. ಇದಲ್ಲದೆ, ಸೀಮಾ ಅವರನ್ನು ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರು ಸೀಮಾ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಒಂದು ಸಣ್ಣ ಹಳ್ಳಿಯಿಂದ ವಿಶ್ವದ ಪ್ರಸಿದ್ಧ ವಿಶ್ವವಿದ್ಯಾಲಯದವರೆಗಿನ ಸೀಮಾ ಪ್ರಯಾಣವು ನಿಜಕ್ಕೂ ಇತರ ಹೆಣ್ಣುಮಕ್ಕಳಿಗೆ ಸ್ಫೂರ್ತಿದಾಯಕವಾಗಿದೆ.