ETV Bharat / bharat

ಸ್ಮಶಾನ ಜಾಗದಲ್ಲಿ ಅಂತ್ಯಕ್ರಿಯೆ ನೆರವೇರಿಸದಂತೆ ದಲಿತ ಕುಟುಂಬಕ್ಕೆ ತಡೆ : ಮೂವರ ಬಂಧನ - ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸದಂತೆ ತಡೆ

ಮಧ್ಯಪ್ರದೇಶದ ಸ್ಮಶಾನವೊಂದರಲ್ಲಿ ದಲಿತ ಕುಟುಂಬ ತಮ್ಮ ಸಂಬಂಧಿಕರ ಅಂತ್ಯಕ್ರಿಯೆ ನೆರವೇರಿಸದಂತೆ ತಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ..

Three arrested
ಮೂವರ ಬಂಧನ
author img

By

Published : May 2, 2022, 3:08 PM IST

ಗುನಾ : ಮಧ್ಯಪ್ರದೇಶದ ಗುನಾ ಜಿಲ್ಲೆಯ ಸ್ಮಶಾನ ಮೈದಾನವೊಂದರಲ್ಲಿ ಸಂಬಂಧಿಕರ ಅಂತ್ಯಕ್ರಿಯೆ ನೆರವೇರಿಸಲು ದಲಿತ ಕುಟುಂಬವೊಂದನ್ನು ಕೆಲವರು ತಡೆದಿದ್ದರು. ಈ ಹಿನ್ನೆಲೆ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಅವಕಾಶ ಕೊಡದ ಕಾರಣ ಆ ಕುಟುಂಬ ಸ್ಮಶಾನದ ಸಮೀಪದ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಿದೆ. ಗುನಾ ಜಿಲ್ಲಾ ಕೇಂದ್ರದಿಂದ 62 ಕಿ.ಮೀ. ದೂರದಲ್ಲಿರುವ ಕುಂಭರಾಜ್ ಪೊಲೀಸ್ ಠಾಣೆ ವ್ಯಾಪ್ತಿಯ ಚಂದ್‌ಪುರ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ವಿಡಿಯೋದಲ್ಲಿ ಅಂತ್ಯಕ್ರಿಯೆಗಾಗಿ ಸ್ಮಶಾನದ ವೇದಿಕೆಯನ್ನು ದಲಿತ ಕುಟುಂಬ ಬಳಸಲು ಅನುಮತಿಯಿಲ್ಲ ಎಂದು ವ್ಯಕ್ತಿಯೊಬ್ಬರು ಹೇಳುವುದನ್ನು ಕೇಳಬಹುದು. ಸ್ಥಳೀಯ ನಿವಾಸಿ ಕನ್ಹಯ್ಯ ಅಹಿರ್ವಾರ್ (70) ಎಂಬುವರ ಸಾವಿನ ನಂತರ ಅವರ ಕುಟುಂಬ ಸದಸ್ಯರು ಶವವನ್ನು ಸ್ಮಶಾನಕ್ಕೆ ಕೊಂಡೊಯ್ದಿದ್ದಾರೆ.

ಆದರೆ, ಗ್ರಾಮದ ಮೂವರು ವ್ಯಕ್ತಿಗಳು ಸೌಲಭ್ಯಗಳಿದ್ದಂತಹ ವೇದಿಕೆಯಲ್ಲಿ ಅಂತಿಮ ವಿಧಿ-ವಿಧಾನಗಳನ್ನು ಮಾಡದಂತೆ ತಡೆದಿದ್ದಾರೆ. ನಂತರ ಕುಟುಂಬವು ಸ್ಮಶಾನದ ವೇದಿಕೆಯ ಬಳಿಯ ಜಮೀನಿನಲ್ಲಿ ವ್ಯಕ್ತಿಯ ಅಂತಿಮ ವಿಧಿಗಳನ್ನು ನೆರವೇರಿಸಿದೆ ಎಂದು ಕುಂಭರಾಜ್ ಪೊಲೀಸ್ ಠಾಣೆಯ ಉಸ್ತುವಾರಿ ಸಂಜೀತ್ ಮಾವಾಯಿ ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಘಟನೆ ಕುರಿತು ನಾರಾಯಣ ಸಿಂಗ್ ಮೀನಾ, ರಾಮ್‌ಭರೋಸ್ ಮೀನಾ ಮತ್ತು ದಿಲೀಪ್ ಮೀನಾ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ರೌಡಿಶೀಟರ್ ಭೀಕರ ಕೊಲೆ ಕೇಸ್​; ಮೂವರು ಆರೋಪಿಗಳು ಪೊಲೀಸ್ ವಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.