ETV Bharat / bharat

ದಲಿತ ವ್ಯಕ್ತಿಗೆ ರಾಮನ ಪೂಜಾ ಸಾಮಗ್ರಿ ತಯಾರಿಕೆಗೆ ಅವಕಾಶ: ಧನ್ಯ ಎಂದ ಕುಶಲಕರ್ಮಿ

author img

By ETV Bharat Karnataka Team

Published : Jan 2, 2024, 3:37 PM IST

ವಾರಣಾಸಿಯ ದಲಿತ ಸಮುದಾಯದ ಕುಶಲಕರ್ಮಿಗೆ ಮಂದಿರ ಉದ್ಘಾಟನಾ ದಿನದ ಪೂಜಾ ಸಾಮಗ್ರಿಗಳನ್ನು ತಯಾರಿಸಿಕೊಡಲು ಸೂಚಿಸಲಾಗಿದೆ.

ಪೂಜಾ ಸಾಮಗ್ರಿ ತಯಾರಿಕೆ
ಪೂಜಾ ಸಾಮಗ್ರಿ ತಯಾರಿಕೆ

ವಾರಣಾಸಿ (ಉತ್ತರಪ್ರದೇಶ) : ಭವ್ಯ ರಾಮಮಂದಿರ ನಿರ್ಮಾಣ ಮತ್ತು ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ದೇಶದ ವಿವಿಧೆಡೆಗಳಿಂದ ಮತ್ತ ಎಲ್ಲ ಸಮಾಜಗಳಿಂದ ಕೊಡುಗೆ ಪಡೆಯಲಾಗುತ್ತಿದೆ. ಸರ್ವಧರ್ಮದ ನೆಲೆಯನ್ನಾಗಿ ಮಾಡಲು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ಯೋಜಿಸಿದೆ. ಜನವರಿ 22 ರಂದು ನಡೆಯುವ ಶ್ರೀರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ದಲಿತ ಸಮುದಾಯದ ವ್ಯಕ್ತಿಗೆ ಪೂಜಾ ಸಾಮಗ್ರಿಗಳನ್ನು ತಯಾರಿಸಲು ಅವಕಾಶ ನೀಡಲಾಗಿದೆ.

ಉತ್ತರಪ್ರದೇಶದ ವಾರಣಾಸಿಯ ಕಾಸೆರಾ ಸಮುದಾಯ (ದಲಿತ) ಕುಶಲಕರ್ಮಿಗೆ ಪೂಜಾ ಸಾಮಗ್ರಿಗಳಾದ ನೀರಿನ ಪಾತ್ರೆಗಳು, ಕಮಂಡಲಗಳು (ಉದ್ದವಾದ ನೀರಿನ ಮಡಕೆ), ಪೂಜೆ ತಾಲಿಗಳು ಮತ್ತು ಶೃಂಗಿಗಳನ್ನು (ಶಿವಲಿಂಗದ ಮೇಲೆ ನೀರನ್ನು ಸುರಿಯುವ ಪಾತ್ರೆ) ತಯಾರಿಸಿಕೊಡಲು ಸೂಚಿಸಲಾಗಿದೆ. ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಅವುಗಳನ್ನು ನೀಡಲು ಕುಶಲಕರ್ಮಿಗೆ ತಿಳಿಸಲಾಗಿದೆ.

ಅವಕಾಶ ಸಿಕ್ಕಿದ್ದೇ ಅದೃಷ್ಟ: ಕಾರ್ಯಕ್ರಮಕ್ಕಾಗಿ 121 ಸೆಟ್​ಗಳ ಪೂಜಾ ಪರಿಕರಗಳನ್ನು ತಯಾರಿಸಿಕೊಡಲು ಹೇಳಲಾಗಿದೆ. ನೀರಿನ ಪಾತ್ರೆಗಳು, ಕಮಂಡಲಗಳು, ಪೂಜಾ ತಾಲಿಗಳು ಮತ್ತು ಶೃಂಗಿಗಳನ್ನು ತಯಾರಿಸಲಾಗುತ್ತಿದೆ. ವಿಶ್ವವೇ ಕಾಯುತ್ತಿರುವ ಕಾರ್ಯಕ್ರಮದಲ್ಲಿ ತಾವು ಭಾಗವಾಗಿರಲು ಅವಕಾಶ ಸಿಕ್ಕಿದೆ. ಇದಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದೇವೆ ಎಂದು ಕುಶಲಕರ್ಮಿ ಲಾಲು ವರ್ಮಾ ಅವರು ತಿಳಿಸಿದರು.

35 ವರ್ಷಗಳಿಂದ ಕುಂಬಾರಿಕೆ ಕೆಲಸ ಮಾಡುತ್ತಿದ್ದೇವೆ. ಭಗವಾನ್ ಶ್ರೀರಾಮನಿಗಾಗಿ ಕೆಲಸ ಮಾಡುವ ಅವಕಾಶವನ್ನು ಪಡೆದಿರುವುದು ನಮ್ಮ ಅದೃಷ್ಟವಾಗಿದೆ. ಈ ಜನ್ಮದಲ್ಲಿ ನನಗೆ ಮಂದಿರದ ದರ್ಶನ ಸಿಗುತ್ತದೆ ಎಂದು ನಾನು ಊಹಿಸಿರಲಿಲ್ಲ. ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಪೂಜಾ ಸಾಮಗ್ರಿಗಳನ್ನು ತಯಾರಿಸುವುದು ನನ್ನ ಕನಸಾಗಿದೆ. ಭಗವಂತನ ಸೇವೆ ಮಾಡುವುದೇ ಅದೃಷ್ಟ. ಅದಕ್ಕಾಗಿ ಬೆಳ್ಳಿಯ ಸಾಮಗ್ರಿಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಜನವರಿ 15 ರ ಮೊದಲು ಪೂಜಾ ಪರಿಕರಗಳನ್ನು ನೀಡಲು ವರ್ಮಾ ಅವರಿಗೆ ಸೂಚಿಸಲಾಗಿದೆ. ವಾರಣಾಸಿಯ ಕಾಶಿಪುರ್ ಪ್ರದೇಶದಲ್ಲಿ ಪ್ರಬಲವಾಗಿರುವ ಕಾಸೆರಾ ಸಮುದಾಯವು ತಲೆಮಾರುಗಳಿಂದ ಹಿತ್ತಾಳೆ, ಬೆಳ್ಳಿ, ತಾಮ್ರ ಮತ್ತು ಬೆಳ್ಳಿಯ ಪೂಜಾ ಪಾತ್ರೆಗಳನ್ನು ನಿರ್ಮಿಸುವಲ್ಲಿ ಪ್ರಾವಿಣ್ಯತೆ ಪಡೆದಿದೆ.

ವಾರಾಣಸಿಯಿಂದ 50 ವಿಧ್ವಾಂಸರು: ಜನವರಿ 22 ರಂದು ನಡೆಯುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ದೇಶಾದ್ಯಂತ ಸುಮಾರು 121 ಬ್ರಾಹ್ಮಣರು ಭಾಗವಹಿಸಲಿದ್ದಾರೆ. ಅದರಲ್ಲಿ ವಾರಣಾಸಿಯಿಂದಲೇ 50 ಮಂದಿ ವಿದ್ವಾಂಸರು ಆಗಮಿಸಲಿದ್ದಾರೆ. ದಕ್ಷಿಣ ಭಾರತ, ಮಹಾರಾಷ್ಟ್ರ ಮತ್ತು ಒಡಿಶಾದಿಂದಲೂ ಬ್ರಾಹ್ಮಣರ ತಂಡವು ಐದು ದಿನಗಳ ಕಾಲ ನಡೆಯುವ ಆಚರಣೆಯಲ್ಲಿ ವಿಧಿವಿಧಾನಗಳನ್ನು ನಡೆಸಿಕೊಡಲಿದ್ದಾರೆ. ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮದ ದಿನ ಪ್ರಧಾನಿ ನರೇಂದ್ರ ಮೋದಿ, ವಿದ್ವಾಂಸರಾದ ಲಕ್ಷ್ಮೀಕಾಂತ್ ದೀಕ್ಷಿತ್, ಜ್ಯೋತಿಷಿ ಗಣೇಶ್ವರ್ ಸೇರಿದಂತೆ ಐವರಿಗೆ ಮಾತ್ರ ಗರ್ಭಗುಡಿಗೆ ಅವಕಾಶ ನೀಡಲಾಗಿದೆ.

ಇದನನ್ನೂ ಓದಿ: 51 ಇಂಚಿನ ಎತ್ತರದ 5 ವರ್ಷದ ರಾಮ ಲಲ್ಲಾ ವಿಗ್ರಹ ಸ್ಥಾಪನೆಗೆ ನಿರ್ಧಾರ: ದೇವಾಲಯ ಟ್ರಸ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.