ನವದೆಹಲಿ: ನವದೆಹಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(Indira Gandhi International Airport), ವಿಮಾನದ ಸೀಟಿನ ಕೆಳಗೆ ಇರಿಸಲಾಗಿದ್ದ 1 ಕೋಟಿ ರೂಪಾಯಿ ಮೌಲ್ಯದ 2.5 ಕೆ.ಜಿ ಚಿನ್ನವನ್ನು ಕಸ್ಟಮ್ಸ್ ಇಲಾಖೆ(Customs Department) ಇಂದು ಬೆಳಗ್ಗೆ ವಶಪಡಿಸಿಕೊಂಡಿದೆ.
ಆರೋಪಿ ಭಾರತೀಯ ಪ್ರಜೆಯಾಗಿದ್ದು, ಮೂರು ವರ್ಷಗಳ ಬಳಿಕ ಸ್ವದೇಶಕ್ಕೆ ಮರಳುತ್ತಿದ್ದ. ಇದೀಗ ಆತನನ್ನು ಬಂಧಿಸಲಾಗಿದೆ. ಕಸ್ಟಮ್ಸ್ ಅಧಿಕಾರಿಗಳ ಪ್ರಕಾರ, ಚಿನ್ನವನ್ನು ಲೈಫ್ ಜಾಕೆಟ್‌ನಲ್ಲಿ ಬಚ್ಚಿಟ್ಟು ದುಬೈನಿಂದ ಬಂದ ಸ್ಪೈಸ್‌ಜೆಟ್ ವಿಮಾನದಲ್ಲಿ ಸೀಟಿನ ಕೆಳಗೆ ಇರಿಸಲಾಗಿತ್ತು.
ಇದನ್ನೂ ಓದಿ: ದೇಶದ ಅತಿ ಉದ್ದದ ಪೂರ್ವಾಂಚಲ ಎಕ್ಸ್ಪ್ರೆಸ್ ವೇ ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಸದ್ಯ ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.