ಚಂದೌಲಿ(ಉತ್ತರಪ್ರದೇಶ) : ಇಲ್ಲಿನ ಚಂದೌಲಿ ಜಿಲ್ಲೆಯ ಅಲಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. NH 2 ಬಳಿಯ ಪೋಖರಾ ಎಂಬಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯಲ್ಲಿ ಅಸ್ಥಿಪಂಜರವೊಂದು ಪತ್ತೆಯಾಗಿದೆ.
ಅಸ್ಥಿಪಂಜರ ಪತ್ತೆಯಾದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಸ್ಥಿಪಂಜರದ ಮರಣೋತ್ತರ ಪರೀಕ್ಷೆಯನ್ನು ಬಿಎಚ್‌ಯುನಲ್ಲಿ ನಡೆಸಲಿದ್ದಾರೆ. ಸದ್ಯಕ್ಕೆ ಪೊಲೀಸರು ಕಟ್ಟಡದ ಮಾಲೀಕರನ್ನು ವಿಚಾರಣೆ ನಡೆಸುತ್ತಿದ್ದಾರೆ. ಆರು ತಿಂಗಳ ಹಿಂದೆಯೇ ಸಾವು ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಆದರೂ, ಆ ವ್ಯಕ್ತಿ ಹೇಗೆ ಸತ್ತಿದ್ದಾನೆ ಎಂಬುವ ಕುರಿತು ತನಿಖೆ ನಡೆಸಿ, ಶೀಘ್ರವೇ ಮಾಹಿತಿ ಬಹಿರಂಗಪಡಿಸಲಾಗುವುದು. ಪ್ಲಾಟ್ ನಿರ್ಮಾಣ ಹಂತದಲ್ಲಿದೆ. ಈ ಕುರಿತು ಸ್ಥಳೀಯರಿಂದ ಮಾಹಿತಿ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ಭಟ್ಕಳ : ಸರ್ಕಾರಿ ಜಾಗದಲ್ಲಿ ಅಸ್ಥಿಪಂಜರ ರೂಪದಲ್ಲಿ ಮೃತದೇಹ ಪತ್ತೆ
ಮಧುರೈನ ಉತ್ಖನನ ಸ್ಥಳದಲ್ಲಿ ಮಾನವ ಅಸ್ಥಿಪಂಜರ ಪತ್ತೆ
ಘಟನೆ ಹಿನ್ನೆಲೆ : ಮಂಗಳವಾರ ಅಲಿನಗರ ಪ್ರದೇಶದ ಗುಲ್ಲಿ ಪಾಂಡೆಯ ಪೋಖರಾ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಬಳಿ ಕೆಲವರು ಹೋದಾಗ ಸಂಜೆ ವೇಳೆಗೆ ಭೂಮಿಯಲ್ಲಿ ಅರ್ಧ ಹುದುಗಿ ಹೋಗಿದ್ದ ಅಸ್ಥಿಪಂಜರ ನೋಡಿದ್ದಾರೆ. ಈ ಬಗ್ಗೆ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು.
ಹಿಂದಿನ ಪ್ರಕರಣಗಳು : ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾರಗದ್ದೆ ಹುರುಳಿಯ ಗೊಂಡರಕೇರಿಯ ನಿರ್ಜನ ಪ್ರದೇಶದಲ್ಲಿ ಜೂನ್ 22, 2022 ರ ಸಂಜೆ ಅಪರಿಚಿತ ಶವವೊಂದು ಅಸ್ಥಿಪಂಜರದ ಸ್ಥಿತಿಯಲ್ಲಿ ದೊರೆತಿತ್ತು. ಈತ ಸುಮಾರು 40 ರಿಂದ 50 ವರ್ಷದ ಆಸುಪಾಸಿನ ವ್ಯಕ್ತಿಯೆಂದು ಅಂದಾಜಿಸಲಾಗಿತ್ತು. ಸ್ಥಳಕ್ಕೆ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಹಾಗೆಯೇ, 2020 ರ ಆಗಸ್ಟ್ 12 ರಂದು ಮಧುರೈ ಬಳಿಯ ಕೊಂಡಗೈ ಉತ್ಖನನ ಸ್ಥಳದಲ್ಲಿ ಮನುಷ್ಯನ ಅಸ್ಥಿಪಂಜರವೊಂದು ಪತ್ತೆಯಾಗಿತ್ತು. 2020 ರ ಫೆಬ್ರವರಿ 19 ರಂದು ಅಂದಿನ ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಈ ಪ್ರದೇಶದಲ್ಲಿ ಆರನೇ ಹಂತದ ಉತ್ಖನನ ಕಾರ್ಯಕ್ಕೆ ಚಾಲನೆ ನೀಡಿದ್ದರು.
ತಮಿಳುನಾಡಿನ ಪಳನಿ ಪಟ್ಟಣದ ದೇವಾಂಗರ್ ಪ್ರದೇಶದಲ್ಲಿರುವ ಕೆಲ ಮನೆಗಳು ಹಾಗೂ ಅಂಗಡಿಗಳ ಮುಂದೆ ಅರಿಶಿಣ ಮತ್ತು ಕುಂಕುಮ ಹಚ್ಚಿದ ಮಾನವನ ತಲೆಬುರುಡೆ ಹಾಗೂ ಮೂಳೆಗಳು 2020 ರ ಆಗಸ್ಟ್ 8 ನೇ ತಾರೀಖಿನಂದು ಪತ್ತೆಯಾಗಿದ್ದವು. ಮಾಟ - ಮಂತ್ರ ಮಾಡಿಸಿರುವ ಶಂಕೆವನ್ನು ನಿವಾಸಿಗಳು ವ್ಯಕ್ತಪಡಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂದ್ದ ಪೊಲೀಸರು, ರಸ್ತೆಯಲ್ಲಿನ ಸಿಸಿಟಿವಿ ದೃಶ್ಯ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದರು.
ಇದನ್ನೂ ಓದಿ : ಮನೆ-ಅಂಗಡಿಗಳ ಮುಂದೆ ಅಸ್ಥಿಪಂಜರಗಳನ್ನ ಕಂಡು ದಂಗಾದ ಜನರು
ಅಸ್ತಿಪಂಜರ ಸುಟ್ಟು ಶವ ಹೂಳುವ ಜನರು : ಸ್ಮಶಾನ ಇಲ್ಲದೇ ದಲಿತರ ಪಡಿಪಾಟಲು