ETV Bharat / bharat

ಖಾಸಗಿ ಜೈವಿಕ ಅನಿಲ ಘಟಕದಲ್ಲಿ ಗ್ಯಾಸ್ ಸೋರಿಕೆ: ಓರ್ವ ಸಾವು, ನಾಲ್ವರು ಅಸ್ವಸ್ಥ - ಉತ್ತರಪ್ರದೇಶದಲ್ಲಿ ಅನಿಲ ಸೋರಿಕೆ

ಜೈವಿಕ ಅನಿಲ ಘಟಕದಲ್ಲಿ ಗ್ಯಾಸ್​ ಸೋರಿಕೆಯಾಗಿ ಓರ್ವ ಕಾರ್ಮಿಕ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಖಾಸಗಿ ಜೈವಿಕ ಅನಿಲ ಘಟಕದಲ್ಲಿ ಗ್ಯಾಸ್ ಸೋರಿಕೆ
ಖಾಸಗಿ ಜೈವಿಕ ಅನಿಲ ಘಟಕದಲ್ಲಿ ಗ್ಯಾಸ್ ಸೋರಿಕೆ
author img

By ETV Bharat Karnataka Team

Published : Nov 1, 2023, 5:42 PM IST

Updated : Nov 1, 2023, 6:36 PM IST

ಬರೆಲಿ( ಉತ್ತರಪ್ರದೇಶ: ಇಲ್ಲಿನ ಬರೇಲಿ ಜಿಲ್ಲೆಯ ಭೋಲಾಪುರ ರಾಮನಾಥ್ ಎಂಬ ಗ್ರಾಮದಲ್ಲಿ ಖಾಸಗಿ ಜೈವಿಕ ಅನಿಲ ಘಟಕದಲ್ಲಿ ಅನಿಲ ಸೋರಿಕೆಯಾಗಿ ಒಬ್ಬ ಮೃತಟ್ಟಿದ್ದು, ನಾಲ್ವರು ಅಸ್ವಸ್ಥರಾಗಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಬಿಹಾರ್​ ಮೂಲದ ರಿಶಿ ಎಂಬ ಕಾರ್ಮಿಕ ಮೃತಪಟ್ಟಿದ್ದಾರೆ. ಸಹೋದ್ಯೋಗಿಗಳಾದ ಪ್ರಿನ್ಸ್​, ಆಸಿಫ್, ಇರ್ಷಾದ್ ಮತ್ತು ಶಶಿಕಾಂತ್ ಅಸ್ವಸ್ಥರಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದರಲ್ಲಿ ಪ್ರಿನ್ಸ್​ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ವಿವರ: ಬಿತ್ರಿ ಚೈನ್‌ಪುರ್ ಪ್ರದೇಶದ ಭೋಲಾಪುರ ರಾಮನಾಥ ಗ್ರಾಮದಲ್ಲಿ ಖಾಸಗಿ ಜೈವಿಕ ಅನಿಲ ಘಟಕವೊಂದನ್ನು ಸ್ಥಾಪಿಸಲಾಗಿದೆ. ಮಂಗಳವಾರ ತಡರಾತ್ರಿ ಪ್ಲಾಂಟ್‌ನಿಂದ ಅನಿಲ ಸೋರಿಕೆಯಾಗಲಾರಂಭಿಸಿದ್ದು, ಪ್ಲಾಂಟ್‌ನಲ್ಲಿದ್ದ ನಿರ್ವಾಹಕರಾದ ರಿಶಿ ಮತ್ತು ಪ್ರಿನ್ಸ್​ ಇಬ್ಬರೂ ಗ್ಯಾಸ್ ಸೋರಿಕೆಯನ್ನು ತಡೆಯಲು ಟ್ಯಾಂಕ್ ಬಳಿಗೆ ತೆರಳಿದ್ದಾರೆ. ಈ ವೇಳೆ, ರಿಶಿ ಮತ್ತು ಪ್ರಿನ್ಸ್​ ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ಇದನ್ನು ಗಮನಿಸಿದ ಇತರ ಸಹೋದ್ಯೋಗಿಗಳು ಇಬ್ಬರನ್ನು ರಕ್ಷಣೆ ಮಾಡಲು ಬಂದ ವೇಳೆ ಗ್ಯಾಸ್​ ಸೋರಿಕೆಯಿಂದ ಇನ್ನೂ ಮೂವರು ಪ್ರಜ್ಞಾಹೀನರಾಗಿದ್ದರು.

ಘಟನೆ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಭಾಟಿ ಮಾತನಾಡಿ, ಅನಿಲ ಸೋರಿಕೆಯಾಗಿ ಮೊದಲಿಗೆ ಐವರು ಪ್ರಜ್ಞಾಹೀನರಾಗಿದ್ದಾರೆ. ಕೂಡಲೇ ಅವರನ್ನು ಖಾಸಗಿ ವೈದ್ಯಕೀಯ ಕಾಲೇಜಿಗೆ ಸೇರಿಸಲಾಗಿತ್ತು. ಈ ವೇಳೆ ಓರ್ವ ಕಾರ್ಮಿಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು, ಮತ್ತೋರ್ವನ ಸ್ಥಿತಿ ಚಿಂತಾಜನಕವಾಗಿದೆ. ಉಳಿದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಕುರಿತ ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಪೂರ್ಣ ಪ್ರಮಾಣದ ತನಿಖೆ ನಡೆಸಲು ಜಿಲ್ಲಾಧಿಕಾರಿ ರವೀಂದ್ರಕುಮಾರ್ ಸಮಿತಿ ರಚಿಸಿದ್ದು, ತನಿಖೆ ನಡೆಸಿ ವರದಿ ಸಲ್ಲಿಸಲಿದ್ದಾರೆ. ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬರೇಲಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹೇಳಿದ್ದಾರೆ.

ಅಮೋನಿಯಾ ಅನಿಲ ಸೋರಿಕೆ: ಬಿಹಾರದ ವೈಶಾಲಿ ಜಿಲ್ಲೆಯ ಹಾಜಿಪುರದಲ್ಲಿರುವ ಡೈರಿ ಕಾರ್ಖಾನೆಯಲ್ಲಿ ಇತ್ತೀಚೆಗೆ ಅಮೋನಿಯಾ ಅನಿಲ ಸೋರಿಕೆಯಾಗಿ ಓರ್ವ ಕಾರ್ಮಿಕ ಸಾವನ್ನಪ್ಪಿ, 100ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದರು. ಕಾರ್ಖಾನೆಯಿಂದ ಸೋರಿಕೆಯಾದ ಅಮೋನಿಯಾ ಅನಿಲವು ಸುತ್ತಮುತ್ತಲಿನ ಪ್ರದೇಶಗಳಿಗೆ ನಾಲ್ಕು ಕಿಲೋಮೀಟರ್ ವ್ಯಾಪ್ತಿಯವರೆಗೆ ಹರಡಿತ್ತು.

ಇದನ್ನೂ ಓದಿ: ಬಿಹಾರದ ಡೈರಿ ಕಾರ್ಖಾನೆಯಲ್ಲಿ ಅಮೋನಿಯಾ ಅನಿಲ ಸೋರಿಕೆ: ಓರ್ವ ಸಾವು, 100ಕ್ಕೂ ಅಧಿಕ ಮಂದಿ ಅಸ್ವಸ್ಥ

Last Updated : Nov 1, 2023, 6:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.