ETV Bharat / bharat

100 ರೂಪಾಯಿಗಾಗಿ ಮಗನನ್ನೇ ಕೊಂದ ಕುಡುಕ ತಂದೆ! - ಮೊಹಿಯುದ್ದೀನ್ ನಗರದ ಸ್ಟೇಷನ್ ಹೆಡ್ ಗೌರವ್ ಪ್ರಸಾದ್

ಕುಡಿದ ಅಮಲಿನಲ್ಲಿ ತಂದೆಯೊಬ್ಬ ತನ್ನ ಮೂರು ವರ್ಷದ ಮಗನನ್ನು ಕತ್ತು ಸೀಳಿ ಕೊಂದಿರುವ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ. ಪತಿ - ಪತ್ನಿಯ ನಡುವಿನ ಜಗಳದಲ್ಲಿ ಈ ಘಟನೆ ನಡೆದಿದೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಬಿಹಾರದ ಸಮಸ್ತಿಪುರ
ಬಿಹಾರದ ಸಮಸ್ತಿಪುರ
author img

By

Published : Jul 26, 2023, 6:06 PM IST

Updated : Jul 26, 2023, 7:12 PM IST

ಸಮಸ್ತಿಪುರ: ಬಿಹಾರದ ಸಮಸ್ತಿಪುರ ಜಿಲ್ಲೆಯಿಂದ ಆಘಾತಕಾರಿ ಸುದ್ದಿಯೊಂದು ಹೊರಬಂದಿದೆ. ಕುಡಿದ ಅಮಲಿನಲ್ಲಿ ತಂದೆಯೊಬ್ಬ ತನ್ನ ಅಮಾಯಕ ಮಗನನ್ನೇ ಕತ್ತು ಸೀಳಿ ಕೊಂದಿದ್ದಾನೆ. ಕೃತ್ಯ ಎಸಗಿದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮೊಹಿಯುದ್ದೀನ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಭಾದಯ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮಗನನ್ನು ಕೊಂದ ತಂದೆ : ಘಟನೆಗೆ ಸಂಬಂಧಿಸಿದಂತೆ ಭದಯ್ಯ ಗ್ರಾಮದಲ್ಲಿ ತಂದೆ ತನ್ನ ಮೂರು ವರ್ಷದ ಅಮಾಯಕ ಮಗನ ಕುತ್ತಿಗೆಗೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ. ಇದರಿಂದ ಮಗು ಗಂಭೀರವಾಗಿ ಗಾಯಗೊಂಡಿದೆ. ಗಲಾಟೆ ನಡೆದ ನಂತರ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಆಗಮಿಸಿ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ದುರಾದೃಷ್ಠವಶಾತ್​ ಚಿಕಿತ್ಸೆ ವೇಳೆ ಮಗು ಸಾವನ್ನಪ್ಪಿದೆ ಎಂಬುದು ತಿಳಿದು ಬಂದಿದೆ.

ಪತ್ನಿಯೊಂದಿಗೆ ಜಗಳವಾಡಿ ಕೊಲೆ : ಮಂಗಳವಾರ ಸಂಜೆ ಕುಡಿದ ಮತ್ತಿನಲ್ಲಿ ಮನೆಗೆ ಬಂದ ತಂದೆ ಕುಂದನ್ ಸಾಹ್ನಿ ತನ್ನ ಪತ್ನಿಯೊಂದಿಗೆ 100 ರೂ ಕೊಡುವಂತೆ ಕೇಳಿದ್ದಾನೆ. ಈ ವೇಳೆ ಅವರಿಬ್ಬರ ನಡುವೆ ಜಗಳ ಶುರುವಾಗಿದೆ. ಅಷ್ಟರಲ್ಲಿ ಕುಂದನ್ ತನ್ನ ಹೆಂಡತಿಯನ್ನು ಕಠಾರಿಯಿಂದ ಕೊಚ್ಚಿ ಕೊಲೆ ಮಾಡಲು ಮುಂದಾಗಿದ್ದಾನೆ. ಇದರಿಂದ ಹೆದರಿದ ಪತ್ನಿ ಓಡಿ ಹೋಗಿದ್ದಾಳೆ. ಬಳಿಕ ಕುಂದನ್ ತನ್ನ ಪಕ್ಕದಲ್ಲಿ ಮಲಗಿದ್ದ ಅಮಾಯಕ ಮಗನ ಕುತ್ತಿಗೆಗೆ ಹಲ್ಲೆ ನಡೆಸಿದ್ದಾನೆ. ಬಳಿಕ ಮನೆಯಿಂದ ಓಡಿ ಹೋಗಿದ್ದಾನೆ.

ಕುಟುಂಬಸ್ಥರಲ್ಲಿ ಗಲಾಟೆ : ಮಾದಕ ವ್ಯಸನಿಯ ಪತ್ನಿ ನಂತರ ಮರಳಿ ಮನೆಗೆ ಬಂದಾಗ ರಕ್ತಸಿಕ್ತ ಸ್ಥಿತಿಯಲ್ಲಿದ್ದ ಮಗನನ್ನು ನೋಡಿ ಕಂಗಾಲಾಗಿದ್ದಾರೆ. ಈ ವೇಳೆ ಬಾಲಕನ ಕೂಗಾಟದ ಧ್ವನಿ ಕೇಳಿ ಸುತ್ತಮುತ್ತಲ ಜನರು ಇವರ ಮನೆಯಲ್ಲಿ ಜಮಾಯಿಸಿದ್ದಾರೆ. ನಂತರ ಮಗುವನ್ನು ಪ್ರಾಣಾಪಾಯದಿಂದ ಪಾರುಮಾಡಲು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಮಗು ಚಿಕಿತ್ಸೆ ವೇಳೆ ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

'ಹಣದ ವಿಚಾರವಾಗಿ ಪತಿ-ಪತ್ನಿಯ ನಡುವೆ ಜಗಳವಾಗಿತ್ತು. ನಂತರ ಈ ಘಟನೆ ನಡೆದಿದೆ. ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಸದರ್ ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿ ತಂದೆ ವಿರುದ್ಧ ಎಫ್‌ಐಆರ್ ದಾಖಲಿಸಿ ಹುಡುಕಾಟ ನಡೆಸಲಾಗುತ್ತಿದೆ' ಎಂದು ಮೊಹಿಯುದ್ದೀನ್ ನಗರದ ಸ್ಟೇಷನ್ ಹೆಡ್ ಗೌರವ್ ಪ್ರಸಾದ್ ಅವರು ತಿಳಿಸಿದ್ದಾರೆ.

ಗರ್ಭಿಣಿ ಪತ್ನಿಯ ಬೈಕ್​ಗೆ ಕಟ್ಟಿ ಧರಧರನೇ ಎಳೆದೊಯ್ದ ಕುಡುಕ ಪತಿ: ಹೊಸ ವರ್ಷದಂದು ಕುಡಿದ ಮತ್ತಿನಲ್ಲಿ ಸ್ಕೂಟಿಗೆ ಕಾರು ಡಿಕ್ಕಿಯಾಗಿ 4 ಕಿ. ಮೀ ಎಳೆದೊಯ್ದು ಯುವತಿ ದಾರುಣವಾಗಿ ಸಾವನ್ನಪ್ಪಿದ ಘಟನೆ ದೇಶದಲ್ಲಿ ಸಂಚಲನ ಉಂಟು ಮಾಡಿತ್ತು. ಅದೇ ರೀತಿ (ಜನವರಿ 15-2023) ಉತ್ತರಪ್ರದೇಶದಲ್ಲಿ ಪತಿಯೊಬ್ಬ ಪಾನಮತ್ತನಾಗಿ ಗರ್ಭಿಣಿ ಪತ್ನಿಯನ್ನು ಬೈಕ್​ಗೆ ಕಟ್ಟಿ 200 ಮೀಟರ್​ ಎಳೆದೊಯ್ದು ಕ್ರೌರ್ಯ ಮೆರೆದಿದ್ದರಿಂದ ಆರೋಪಿಯನ್ನು ಬಂಧಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿರುವ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಇದನ್ನೂ ಓದಿ: ಕುಡಿಬೇಡ ಎಂದಿದ್ದಕ್ಕೆ ಗರ್ಭಿಣಿ ಪತ್ನಿಯ ಬೈಕ್​ಗೆ ಕಟ್ಟಿ ಧರಧರನೇ ಎಳೆದೊಯ್ದ ಕುಡುಕ ಪತಿ!

Last Updated : Jul 26, 2023, 7:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.