ETV Bharat / bharat

ಕೋವಿಡ್​ನಿಂದ ಚೇತರಿಸಿಕೊಂಡವರು ಯಾವಾಗ ವ್ಯಾಕ್ಸಿನ್​​ ಪಡೆದುಕೊಳ್ಳಬೇಕು.. ಇಲ್ಲಿದೆ ನೋಡಿ ಉತ್ತರ!

author img

By

Published : May 13, 2021, 4:54 PM IST

ಡೆಡ್ಲಿ ವೈರಸ್​ನಿಂದ ಚೇತರಿಸಿಕೊಂಡವರು ಯಾವಾಗ ಲಸಿಕೆ ಪಡೆದುಕೊಳ್ಳಬೇಕು? ಎಷ್ಟು ತಿಂಗಳ ಅಂತರ ಇರಬೇಕು ಎಂಬ ಪ್ರಶ್ನೆಗೆ ಇದೀಗ ಉತ್ತರ ಲಭ್ಯವಾಗಿದೆ.

Covid Recovery
Covid Recovery

ನವದೆಹಲಿ: ಕೊರೊನಾ ಸೋಂಕಿಗೊಳಗಾಗಿ ಚೇತರಿಸಿಕೊಳ್ಳುವವರು ಯಾವ ಸಂದರ್ಭದಲ್ಲಿ ಕೋವಿಡ್​ ಲಸಿಕೆ ತೆಗೆದುಕೊಳ್ಳಬೇಕು ಎಂಬ ಗೊಂದಲಕ್ಕೆ ಇದೀಗ ಉತ್ತರ ಸಿಕ್ಕಿದೆ.

ಕೋವಿಡ್​ ಸೋಂಕಿಗೊಳಗಾಗಿ ಚೇತರಿಸಿಕೊಂಡವರು ಆರು ತಿಂಗಳವರೆಗೆ ಲಸಿಕೆ ಹಾಕಿಸಿಕೊಳ್ಳಬಾರದು ಎಂದು ಸರ್ಕಾರಿ ಸಮಿತಿ ಶಿಫಾರಸು ಮಾಡಿದೆ ಎಂದು ಪಿಟಿಐ ವರದಿ ಮಾಡಿದೆ. ಇದರ ಜತೆಗೆ ಕೋವಿಡ್ ಲಸಿಕೆಯಾಗಿರುವ ಕೋವಿಶೀಲ್ಡ್​​ ಪಡೆದುಕೊಳ್ಳುವುದರ ನಡುವಿನ ಅಂತರ 12ರಿಂದ 16 ವಾರಗಳಿಗೆ ಹೆಚ್ಚಿಸಬೇಕು ಎಂದು ಆ ಸಮಿತಿ ತಿಳಿಸಿದೆ. ಇದರಿಂದ ಅದು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಭಾರತ್ ಬಯೋಟೆಕ್​ನ ಕೊವ್ಯಾಕ್ಸಿನ್​ನಲ್ಲಿ ಯಾವುದೇ ಬದಲಾವಣೆ ಸೂಚಿಸಿಲ್ಲ.

ಇದನ್ನೂ ಓದಿ: ನೀವೂ ಎಚ್ಚರ: 'ಕೋವಿಡ್ ಎಮರ್ಜೆನ್ಸಿ​' ಹೆಸರಿನಲ್ಲಿ 23 ಲಕ್ಷ ರೂ. ಲಪಟಾಯಿಸಿದ ಭೂಪ

ಪ್ರಮುಖವಾಗಿ ಕೋವಿಡ್ ಲಸಿಕೆ ಪಡೆದುಕೊಳ್ಳುವ ಮೊದಲು ಧನಾತ್ಮಕ ಪರೀಕ್ಷೆಗೊಳಪಟ್ಟವರು ಸೋಂಕಿನಿಂದ ಚೇತರಿಸಿಕೊಂಡ ನಂತರ ಆರು ತಿಂಗಳ ಕಾಲ ಕಾಯಬೇಕು ಎಂದು ತಿಳಿಸಿದೆ. ಜತೆಗೆ ಕೋವಿಡ್​ನಿಂದ ಚೇತರಿಸಿಕೊಂಡು ಕೋವಿಡ್ ರೋಗಿಗಳಿಗೆ ಪ್ಲಾಸ್ಮಾ ದಾನ ಮಾಡುವ ವ್ಯಕ್ತಿಗಳು ಮೂರು ತಿಂಗಳ ನಂತರ ವ್ಯಾಕ್ಸಿನೇಷನ್ ಪಡೆದುಕೊಳ್ಳಬೇಕು ಎಂದಿದ್ದಾರೆ.

ದೇಶದಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್ ಸೋಂಕಿತ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕೆಲವೊಂದು ರಾಜ್ಯಗಳಲ್ಲಿ ಕೋವಿಡ್ ಲಸಿಕೆ ಅಭಾವ ಸಹ ಉದ್ಭವವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.