ನಾಸಿಕ್ (ಮಹಾರಾಷ್ಟ್ರ): ಹಾಸಿಗೆ ಕೊರೆತೆಯಿಂದಾಗಿ ಆಸ್ಪತ್ರೆಯಲ್ಲಿ ದಾಖಲಾಗಲಾಗದೇ, ಇತ್ತ ಆಮ್ಲಜನಕವೂ ಸಿಗದೇ ಕೋವಿಡ್ ರೋಗಿಯೊಬ್ಬ ಪತ್ನಿಯ ಮಡಿಲಲ್ಲೇ ಪ್ರಾಣ ಬಿಟ್ಟಿದ್ದಾನೆ.
ಆಕ್ಸಿಜನ್ ಸೋರಿಕೆಯಿಂದಾಗಿ ನಿನ್ನೆಯಷ್ಟೇ 22 ರೋಗಿಗಳ ಸಾವಿಗೆ ಸಾಕ್ಷಿಯಾಗಿದ್ದ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಇಂತಹದೊಂದು ದಾರುಣ ಘಟನೆ ನಡೆದಿದೆ.
ಇದನ್ನೂ ಓದಿ: ಮಹಾರಾಷ್ಟ್ರ ಆಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆ.. 22 ಜನರ ದುರ್ಮರಣ!
ನಾಸಿಕ್‌ನ ಚಂದ್ವಾಡ್ ಸರ್ಕಾರಿ ಆಸ್ಪತ್ರೆಗೆ ಸೋಂಕಿತ ಪತಿಯನ್ನು ಅವರ ಪತ್ನಿ ಕರೆದುಕೊಂಡು ಬಂದಿದ್ದಾಳೆ. ಆದರೆ ಹಾಸಿಗೆಗಳು ಹಾಗೂ ಆಮ್ಲಜನಕ ಲಭ್ಯವಿಲ್ಲದ ಕಾರಣ ಆಸ್ಪತ್ರೆಯ ಗೇಟ್ ಮುಂದೆಯೇ ಕುಳಿತಿದ್ದಾರೆ. ಆದರೆ ನೋಡ ನೋಡುತ್ತಲೇ ತೀವ್ರ ಉಸಿರಾಟದ ಸಮಸ್ಯೆಯಿಂದ ನರಳುತ್ತಾ ಆತ ಕೊನೆಯುಸಿರೆಳೆದಿದ್ದಾನೆ.