ETV Bharat / bharat

ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಆರೋಗ್ಯದಲ್ಲಿ ಚೇತರಿಕೆ - ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್

ಮೆದಂತಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರ ಪ್ರಕಾರ ಡಾ. ಎ.ಕೆ. ದುಬೆ ಅವರು ಸಚಿವರಿಗೆ ಕೋವಿಡ್ ನ್ಯುಮೋನಿಯಾ ಇದೆ. ಇದರಿಂದಾಗಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ..

COVID-19 positive Anil Vij's condition stable
ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್
author img

By

Published : Dec 18, 2020, 8:00 AM IST

ರೋಹ್ಟಕ್ (ಹರಿಯಾಣ) : ಕೊರೊನಾ ಸೋಂಕಿಗೆ ಒಳಗಾದ ನಂತರ ಗುರುಗ್ರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಅವರ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎ ಕೆ ದುಬೆ ತಿಳಿಸಿದ್ದಾರೆ.

ಅಧಿಕೃತ ಹೇಳಿಕೆಯ ಪ್ರಕಾರ, ಅನಿಲ್ ವಿಜ್ (Anil Vij) ಅವರನ್ನು ಮಂಗಳವಾರ ಸಂಜೆ ಮೆಡಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿಸೆಂಬರ್ 5ರಂದು ಕೊರೊನಾ ವೈರಸ್ ಸೋಂಕಿಗೆ ತುತ್ತಾದ ನಂತರ ಹರಿಯಾಣದ ಆರೋಗ್ಯ ಸಚಿವರಿಗೆ ತೀವ್ರ ಉಸಿರಾಟದ ತೊಂದ್ರೆ ಕಾಣಿಸಿತ್ತು. ಬಳಿಕ ಅವರನ್ನು ಗುರಗಾಂವ್‌ನ ಮೆದಂತಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕ (ಐಸಿಯು) ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಓದಿ :ಶ್ರೀಲಂಕಾದಿಂದ ಭಾರತೀಯ ಮೀನುಗಾರರ ವಶ : ಬಿಡುಗಡೆಗೆ ಮೋದಿ ನೆರವು ಕೋರಿದ ತಮಿಳುನಾಡು ಸಿಎಂ

ಮೆದಂತಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರ ಪ್ರಕಾರ ಡಾ. ಎ.ಕೆ. ದುಬೆ ಅವರು ಸಚಿವರಿಗೆ ಕೋವಿಡ್ ನ್ಯುಮೋನಿಯಾ ಇದೆ. ಇದರಿಂದಾಗಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ಸ್ಥಳೀಯ ಕೊರಾನಾ ವೈರಸ್​ನ "ಕೋವಾಕ್ಸಿನ್" (Covaxin) ಲಸಿಕೆಯ ಪ್ರಮಾಣವನ್ನು ವಿಜ್ ತೆಗೆದುಕೊಂಡಿದ್ದಾರೆ. ಕೊರೊನಾ ಲಸಿಕೆಯ ಮೂರನೇ ಹಂತದ ಪ್ರಯೋಗದ ವೇಳೆ ಸ್ವಯಂಸೇವಕರಾಗಿ ವಿಜ್ ಸ್ವತಃ ಲಸಿಕೆ ತೆಗೆದುಕೊಳ್ಳಲು ಮುಂದಾಗಿದ್ದರು. ಅವರಿಗೆ ನವಂಬರ್ 20ರಂದು ಲಸಿಕೆಯ ಡೋಸ್ ನೀಡಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.