ನವದೆಹಲಿ: ಕಳೆದ 14 ದಿನಗಳಿಂದ ಭಾರತದಲ್ಲಿ ಪತ್ತೆಯಾಗುತ್ತಿರುವ ಹೊಸ ಕೊರೊನಾ ಸೋಂಕಿತರಿಗಿಂತಲೂ ಗುಣಮುಖರ ಸಂಖ್ಯೆಯೇ ಹೆಚ್ಚಿದೆ. ನಿನ್ನೆ ಒಂದೇ ದಿನದಲ್ಲಿ 2,83,135 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈವರೆಗೆ 2,46,33,951 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಕೋವಿಡ್ ಚೇತರಿಕೆಯ ಪ್ರಮಾಣ ಶೇ.90.01ಕ್ಕೆ ಏರಿಕೆಯಾಗಿದೆ ಎಂದು ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳಲ್ಲಿ 2,11,298 ಸೋಂಕಿತರು ಪತ್ತೆಯಾಗಿದ್ದು, 3,847 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 2,73,69,093 ಹಾಗೂ ಮೃತರ ಸಂಖ್ಯೆ 3,15,235ಕ್ಕೆ ಏರಿಕೆಯಾಗಿದೆ. 24,19,907 ಪ್ರಕರಣಗಳು ದೇಶದಲ್ಲಿನ್ನೂ ಸಕ್ರಿಯವಾಗಿದೆ. ಅಮೆರಿಕ, ಬ್ರೆಜಿಲ್ ಬಳಿಕ ಸಾವಿನ ಸಂಖ್ಯೆ 3 ಲಕ್ಷ ಗಡಿ ದಾಟಿದ ಮೂರನೇ ದೇಶ ಭಾರತವಾಗಿದೆ.
ಈ ಸುದ್ದಿಯನ್ನೂ ಓದಿ: Pfizer vaccine: 12 ವರ್ಷ ಮೇಲ್ಪಟ್ಟವರಿಗೆ ನಮ್ಮ ಲಸಿಕೆ ಸೂಕ್ತ- ಕೇಂದ್ರಕ್ಕೆ ಫೈಜರ್ ಮಾಹಿತಿ
130 ದಿನದಲ್ಲಿ 20 ಕೋಟಿ ಮಂದಿಗೆ ಲಸಿಕೆ
ಜನವರಿ 16ರಿಂದ ದೇಶಾದ್ಯಂತ ಕೋವಿಡ್ ವ್ಯಾಕ್ಸಿನೇಷನ್ ಅಭಿಯಾನ ಆರಂಭವಾಗಿದ್ದು, 130 ದಿನದಲ್ಲಿ 20,26,95,874 ಮಂದಿಗೆ ಲಸಿಕೆ ನೀಡಲಾಗಿದೆ. ಅಮೆರಿಕ ಬಳಿಕ 20 ಕೋಟಿ ಜನರಿಗೆ ವ್ಯಾಕ್ಸಿನ್ ನೀಡಿ ಭಾರತ ದಾಖಲೆ ಮಾಡಿದೆ. 2021ರ ಡಿಸೆಂಬರ್ ವೇಳೆಗೆ ದೇಶದ ಎಲ್ಲರಿಗೂ ಲಸಿಕೆ ಹಾಕಲಾಗುವುದು ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ.