ETV Bharat / bharat

'ವೈವಾಹಿಕ ಅತ್ಯಾಚಾರ'ವನ್ನು ಕ್ರಿಮಿನಲ್ ಅಪಾರಧವೆಂದು ಪರಿಗಣಿಸಲು ಕೋರಿ ಅರ್ಜಿ: ಮೇ 9ರಂದು ವಿಚಾರಣೆ

ವೈವಾಹಿಕ ಅತ್ಯಾಚಾರವನ್ನು ಅಪರಾಧಿಕರಣಗೊಳಿಸುವುದಕ್ಕೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿವರವಾದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮೇ 9 ರಂದು ನಿಗದಿಪಡಿಸಿದೆ.

court-to-hear-on-may-9-petitions-seeking-to-declare-marital-rape-as-crime
'ವೈವಾಹಿಕ ಅತ್ಯಾಚಾರ'ವನ್ನು ಕ್ರಿಮಿನಲ್ ಅಪಾರದವೆಂದು ಕೋರಿ ಅರ್ಜಿ: ಮೇ 9ರಂದು ವಿಚಾರಣೆ
author img

By

Published : Mar 22, 2023, 7:43 PM IST

ನವದೆಹಲಿ: ವೈವಾಹಿಕ ಅತ್ಯಾಚಾರವನ್ನು ಕ್ರಿಮಿನಲ್​ ಅಪರಾಧವೆಂದು ಘೋಷಿಸಲು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮೇ 9 ರಂದು ನಿಗದಿಪಡಿಸಿದೆ. ಹಿರಿಯ ವಕೀಲೆ ಇಂದಿರಾ ಜೈಸಿಂಗ್​ ಅವರು ಪ್ರಕರಣವನ್ನು ಪ್ರಸ್ತಾಪಿಸಿದ ನಂತರ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್​ ನೇತೃತ್ವದ ಪೀಠವು ಈ ಆದೇಶವನ್ನು ನೀಡಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರದ ಉತ್ತರ ಸಿದ್ಧವಾಗಿದ್ದು, ತನಿಖೆಯಾಗಬೇಕಿದೆ ಎಂದು ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ ತಿಳಿಸಿದ್ದಾರೆ. ಜನವರಿ 16 ರಂದು ವೈವಾಹಿಕ ಜೀವನ ಅಪರಾಧೀಕರಣಕ್ಕೆ ಸಂಬಂಧಿಸಿದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಕೇಂದ್ರದಿಂದ ಪ್ರತಿಕ್ರಿಯೆ ಕೇಳಿತ್ತು. ವೈವಾಹಿಕ ಅತ್ಯಾಚಾರದ ವಿಷಯದ ಕುರಿತು ದೆಹಲಿ ಹೈಕೋರ್ಟ್‌ನ ವಿಭಜಿತ ತೀರ್ಪಿಗೆ ಸಂಬಂಧಿಸಿದಂತೆ ಒಂದು ಅರ್ಜಿಯನ್ನು ಸಲ್ಲಿಸಲಾಗಿದೆ. ಈ ಮನವಿಯು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿದಾರರಲ್ಲಿ ಒಬ್ಬರಾದ ಖುಷ್ಬೂ ಸೈಫಿ ಅವರು ಸಲ್ಲಿಸಿದ್ದರು. ಕಳೆದ ವರ್ಷ ಮೇ 11 ರಂದು ದೆಹಲಿ ಹೈಕೋರ್ಟ್ ಈ ವಿಷಯದಲ್ಲಿ ವಿಭಜನೆಯ ತೀರ್ಪು ನೀಡಿತ್ತು.

ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 375ರ ಪ್ರಕಾರ, ಅತ್ಯಾಚಾರವು ಮಹಿಳೆಯ ಸಮ್ಮತಿಯಿಲ್ಲದ ಲೈಂಗಿಕ ದೌರ್ಜನ್ಯವನ್ನು ಒಳಗೊಂಡಿರುತ್ತದೆ. ಸೆಕ್ಷನ್ 375ರ ವಿನಾಯಿತಿ 2ರ ಅಡಿಯಲ್ಲಿ, ಪತಿ ಅಥವಾ ಹೆಂಡತಿಯ ವಯಸ್ಸು 15 ವರ್ಷಕ್ಕಿಂತ ಹೆಚ್ಚಿದ್ದರೆ ಹೆಂಡತಿ ಅಥವಾ ಗಂಡನ ನಡುವಿನ ಸಮ್ಮತಿಯ ಲೈಂಗಿಕ ಸಂಭೋಗವು 'ಅತ್ಯಾಚಾರ' ಆಗುವುದಿಲ್ಲ ಮತ್ತು ಅದೇ ವಿನಾಯಿತಿಯು ವೈವಾಹಿಕ ಅತ್ಯಾಚಾರವನ್ನು ಅಪರಾಧವಾಗದಂತೆ ತಡೆಯುತ್ತದೆ.

ಈಗಲೂ ದೇಶದಲ್ಲಿ ವೈವಾಹಿಕ ಅತ್ಯಾಚಾರವನ್ನು ಕ್ರಿಮಿನಲ್ ವರ್ಗಕ್ಕೆ ತರುವ ಹೋರಾಟ ನಡೆಯುತ್ತಿದೆ. 29 ಸೆಪ್ಟೆಂಬರ್ 2022 ರಂದು, ಸುಪ್ರೀಂ ಕೋರ್ಟ್‌ನ ಪೀಠವು ಮಹಿಳೆಯ ವೈವಾಹಿಕ ಸ್ಥಿತಿ ಏನೇ ಇರಲಿ, ಸುರಕ್ಷಿತ ಮತ್ತು ಕಾನೂನು ರೀತಿಯಲ್ಲಿ ಗರ್ಭಪಾತ ಮಾಡುವ ಹಕ್ಕನ್ನು ಹೊಂದಿದೆ ಎಂದು ತೀರ್ಪು ನೀಡಿತ್ತು.

ಇದನ್ನೂ ಓದಿ : ಕೇರಳದ ಮೊದಲ ತೃತೀಯಲಿಂಗಿ ವಕೀಲರಾಗಿ ಪದ್ಮಲಕ್ಷ್ಮಿ: ಬಡವರ ಪರ ಕೆಲಸದ ಭರವಸೆ

ದೆಹಲಿ ಹೈಕೋರ್ಟ್ ವಿಭಿನ್ನ ತೀರ್ಪು: ಪತ್ನಿಯೊಂದಿಗಿನ ಬಲವಂತದ ಲೈಂಗಿಕತೆಗೆ ವಿನಾಯಿತಿ ನೀಡುವ ಭಾರತೀಯ ದಂಡ ಸಂಹಿತೆ ಸೆಕ್ಷನ್​​ 375 ಅನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್‌, 2022 ಮೇ 11ರಂದು ವಿಭಿನ್ನ ತೀರ್ಪು ನೀಡಿತ್ತು. ವೈವಾಹಿಕ ಅತ್ಯಾಚಾರ ಅಪರಾಧೀಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ರಾಜೀವ್ ಶಕ್ದರ್​​ ಮತ್ತು ಜಸ್ಟಿಸ್ ಹರಿ ಶಂಕರ್ ಅವರಿದ್ದ ಪೀಠ ಅರ್ಜಿ ವಿಚಾರಣೆ ನಡೆಸಿತ್ತು. ಈ ಸಂದರ್ಭದಲ್ಲಿ, ವೈವಾಹಿಕ ಅತ್ಯಾಚಾರ ಸಂವಿಧಾನವನ್ನು ಉಲ್ಲಂಘಿಸುವುದಿಲ್ಲ ಎಂದು ನ್ಯಾ. ಹರಿ ಶಂಕರ್ ಅಭಿಪ್ರಾಯಪಟ್ಟಿದ್ದರು. ಆದರೆ ನ್ಯಾ.ರಾಜೀವ್ ಶಕ್ಧರ್ ಅವರು, ವೈವಾಹಿಕ ಅತ್ಯಾಚಾರ ವಿನಾಯಿತಿಯನ್ನು ರದ್ದುಗೊಳಿಸುವ ಬಗ್ಗೆ ಒಲವು ತೋರಿದ್ದರು.

ಇದನ್ನೂ ಓದಿ : ಮರಣದಂಡನೆಗೆ 'ಕಡಿಮೆ ನೋವಿನ, ಹೆಚ್ಚು ಘನತೆಯ' ವಿಧಾನ ಪರಿಗಣಿಸಲು ಸೂಚಿಸಿದ ಸುಪ್ರೀಂ ಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.