ETV Bharat / bharat

ನೀರವ್ ಮೋದಿಯ 500 ಕೋಟಿ ರೂ ಆಸ್ತಿ ಜಪ್ತಿ ಮಾಡಲು ಇಡಿಗೆ ಅನುಮತಿ ನೀಡಿದ ಕೋರ್ಟ್​ - 39 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅನುಮೋದನೆ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ, ಖ್ಯಾತ ವಜ್ರದ ಉದ್ಯಮಿ ನೀರವ್ ಮೋದಿ ಅವರ 500 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯವು (ED) ಬಾಂಬೆ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ಅಂಗೀಕರಿಸಿದ ಕೋರ್ಟ್, 500 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಇಡಿಗೆ ಸೂಚಿಸಿದೆ.

diamond businessman Nirav Modi
ಬಹುಕೋಟಿ ಹಗರಣದ ಆರೋಪಿ ನೀರವ್ ಮೋದಿ
author img

By

Published : Oct 20, 2022, 1:31 PM IST

ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ, ಖ್ಯಾತ ವಜ್ರದ ವ್ಯಾಪಾರಿ ನೀರವ್ ಮೋದಿ ಅವರ 500 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯವು (ED) ಬಾಂಬೆ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಈ ಅರ್ಜಿಯನ್ನು ಕೋರ್ಟ್ ಅಂಗೀಕರಿಸಿದ್ದು, 500 ಕೋಟಿ ರೂ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಇಡಿಗೆ ಸೂಚಿಸಿದೆ.

ದಕ್ಷಿಣ ಮುಂಬಯಿಯ ಹೃದಯಭಾಗದಲ್ಲಿರುವ ನೀರವ್ ಮೋದಿ ಅವರ ರಿದಮ್ ಹೌಸ್ ವನ್ನು ಸಹ ವಶಪಡಿಸಿಕೊಳ್ಳಲು ಜಾರಿ ನಿರ್ದೇಶನಾಲಯವು ಮನವಿ ಮಾಡಿದೆ. ಅದರಂತೆ ಅಲಿಬಾಗ್‌ನ ಬಂಗಲೆಯಿಂದ ವಶಪಡಿಸಿಕೊಂಡ ಬೆಲೆಬಾಳುವ ವಸ್ತುಗಳು, 22 ಕಾರುಗಳನ್ನು ಜಪ್ತಿಗೆ ಸೂಚಿಸಲಾಗಿದೆ.

ಇಡಿ ಮನವಿಗೆ ಬುಧವಾರ ವಿಶೇಷ ನ್ಯಾಯಾಲಯವು ಆರ್ಥಿಕ ಅಪರಾಧ ಕಾಯ್ದೆಯಡಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿ ನೀರವ್ ಮೋದಿ 39 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅನುಮೋದನೆ ನೀಡಿದೆ. ನ್ಯಾಯಾಲಯವು ಇದು ಎರಡನೇ ಬಾರಿಗೆ ಅವರ ಆಸ್ತಿಯನ್ನು ವಶಪಡಿಸಿಕೊಳ್ಳಲು ಅವಕಾಶ ನೀಡಿದೆ.

ಆರ್ಥಿಕ ಅಪರಾಧಿಗಳ ಕಾಯಿದೆಯಡಿ ಕೋರ್ಟ್​, ಪರಾರಿಯಾದ ಅಪರಾಧಿಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕಾನೂನಿನ ಪ್ರಕಾರ ಡಿಸೆಂಬರ್ 2019 ರಲ್ಲಿ ನೀರವ್ ಮೋದಿ ಉದ್ಯಮಿಯನ್ನು ಆರ್ಥಿಕ ಅಪರಾಧಿ ಎಂದು ಘೋಷಿಸಿತ್ತು. ಈ ಘೋಷಣೆ ನಂತರ ಜಾರಿ ನೀರ್ದೆಶನಾಲಯವು ಆಸ್ತಿಯನ್ನು ವಶಪಡಿಸಿಕೊಳ್ಳಲು ಅರ್ಜಿ ಸಲ್ಲಿಸಿತ್ತು. ಹಣ ವರ್ಗಾವಣೆ ತಡೆ ಕಾಯ್ದೆಯಡಿ ಜಾರಿ ನಿದೇಶನಾಲಯವು ಉದ್ಯಮಿ ನೀರವ್ ಮೋದಿ ಆಸ್ತಿಗಳನ್ನು ವಶಪಡಿಸಿಕೊಂಡಿದೆ.

ವಂಚನೆ:ಬಹುಕೋಟಿ ಹಗರಣದ ಆರೋಪಿ ಮೋದಿ ಅವರು ಸಾರ್ವಜನಿಕ ವಲಯದ ಬ್ಯಾಂಕ್‌ಗೆ ಬೋಗಸ್ ಲೆಟರ್ ಆಫ್ ಅಂಡರ್‌ಟೇಕಿಂಗ್ ನೀಡಿ ವಂಚಿಸಿದ್ದರು ಎಂಬ ಆರೋಪ ಹೊತ್ತಿದ್ದಾರೆ. ಈ ಬಹುಕೋಟಿ ಪ್ರಕರಣ ಬೆಳಕಿಗೆ ಬರುವವರೆಗೂ ಪಂಜಾಬ ನ್ಯಾಷನಲ್​ ಬ್ಯಾಂಕ್ ಮುಂಬೈ ಶಾಖೆಯು ಮಾರ್ಚ್ 2011 ರಿಂದ ವಜ್ರದ ವ್ಯಾಪಾರಿ ನೀರವ್ ಮೋದಿಯ ಸಮೂಹದ ಕಂಪನಿಗಳಿಗೆ ಸಾಲವನ್ನು ಒದಗಿಸಿತ್ತು.

ಇದನ್ನು ಓದಿ:24ನೇ ಅಂತಸ್ತಿನ ಕಟ್ಟಡದ ಮೇಲಿಂದ ಜಿಗಿದು ಉದ್ಯಮಿ ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.