ಕೊಯಮತ್ತೂರು: ಕೊಯಮತ್ತೂರು ಮೂಲದ ನವ ದಂಪತಿ ತಮ್ಮ ಚಿನ್ನದ ಆಭರಣಗಳನ್ನು ಅಡವಿಟ್ಟು ಸಿಂಗನಲ್ಲೂರಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಇಎಸ್‌ಐ ಆಸ್ಪತ್ರೆಗೆ 100 ವಿದ್ಯುತ್ ಫ್ಯಾನ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಸಾಂಕ್ರಾಮಿಕ ಸಮಯದಲ್ಲಿ ಆಸ್ಪತ್ರೆಗಳಲ್ಲಿ ಎಸಿ ಬಳಸುವುದನ್ನು ನಿಷೇಧಿಸಲಾಗಿದೆ. ಲಸಿಕೆ ಪಡೆಯಲು ಆಸ್ಪತ್ರೆಗೆ ಬಂದ ದಂಪತಿ 100 ವಿದ್ಯುತ್ ಫ್ಯಾನ್‌ಗಳನ್ನು ದಾನ ಮಾಡಿದ್ದಾರೆ.
ಈ ವಿಚಾರ ತಿಳಿದ ನಂತರ ಆಸ್ಪತ್ರೆಯ ಅಧಿಕಾರಿಗಳು ದಂಪತಿಗಳಿಗೆ ಕೊಡುಗೆಯಾಗಿ ಕೊಟ್ಟ ಫ್ಯಾನ್‌ಗಳನ್ನು ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿಕೊಂಡರು. ಆದರೆ, ದಂಪತಿಗಳು ತಮ್ಮ ನಿರ್ಧಾರದಿಂದ ಹಿಂದೆಸರಿಯದೆ ಅಚಲವಾಗಿ ನಿಂತರು. ತಮಗೆ ಹಣದ ತುರ್ತು ಅಗತ್ಯವಿಲ್ಲ ಎಂಬ ದಂಪತಿ ಭರವಸೆಗೆ ಅಧಿಕಾರಿಗಳು ಫ್ಯಾನ್ ಸ್ವೀಕರಿಸಿದರು. ಆದರೆ, ನವ ದಂಪತಿ ತಮ್ಮ ಹೆಸರು ಬಹಿರಂಗ ಪಡಿಸದಂತೆ ಆಸ್ಪತ್ರೆಗೆ ಮನವಿ ಮಾಡಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.