ವಾರಣಾಸಿ (ಉತ್ತರಪ್ರದೇಶ) : ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಡ್ರೈವಿಂಗ್ ಕುರಿತ ಆಸಕ್ತಿ ಹೆಚ್ಚಾಗಿದೆ. ಇಂದು ಡ್ರೈವಿಂಗ್ ವೃತ್ತಿಯನ್ನು ಮಾಡಿಕೊಂಡು ಲಕ್ಷಾಂತರ ಯುವಕರು ಜೀವನ ಕಟ್ಟಿಕೊಂಡಿದ್ದಾರೆ. ಜೊತೆಗೆ ಡ್ರೈವಿಂಗ್ ಮೂಲಕ ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ. ವಿದೇಶದಲ್ಲಿ ಡ್ರೈವಿಂಗ್ ಉದ್ಯೋಗವನ್ನು ಹೊಂದಲು ಉತ್ತರಪ್ರದೇಶದ ವಾರಣಾಸಿಯಲ್ಲಿ ದೇಶದ ಮೊದಲ ಎಡಗೈ ಚಾಲನಾ ತರಬೇತಿ ಕೇಂದ್ರವನ್ನು ಆರಂಭಿಸಲಾಗುತ್ತಿದೆ.
ಭಾರತದಲ್ಲಿ ಸಾಮಾನ್ಯವಾಗಿ ಬಲಗಡೆಯಲ್ಲಿ ಕುಳಿತು ವಾಹನ ಚಲಾಯಿಸಲಾಗುತ್ತದೆ. ಇದನ್ನು ನಾವು ಬಲಗೈ ಚಾಲನೆ ಎಂದು ಹೇಳುತ್ತೇವೆ. ಆದರೆ ವಿದೇಶಗಳಲ್ಲಿ ಸಮಾನ್ಯವಾಗಿ ಎಡಗಡೆ ಕುಳಿತು ವಾಹನ ಚಲಾಯಿಸಲಾಗುತ್ತದೆ. ಈ ಸಂಬಂಧ ಎಡಗೈ ವಾಹನ ಚಾಲನೆಗೆ ತರಬೇತಿ ನೀಡಲು ಸರ್ಕಾರ ಮುಂದಾಗಿದೆ. ಇದರ ಜೊತೆಗೆ ರಾಜ್ಯದ ಮೊದಲ ಎಡಗೈ ಡ್ರೈವಿಂಗ್ ಟ್ರ್ಯಾಕ್( ಲೆಫ್ಟ್ ಹ್ಯಾಂಡ್ ಡ್ರೈವಿಂಗ್ ಟ್ರಾಕ್)ಅನ್ನು ಇಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಮೂಲಕ ಯುವಕರಿಗೆ ತರಬೇತಿ ನೀಡಿ ವಿದೇಶದಲ್ಲಿ ಉದ್ಯೋಗ ಹೊಂದಲು ಸಹಕಾರಿಯಾಗಿದೆ.
ತರಬೇತಿ ಬಳಿಕ ಗಲ್ಫ್ ದೇಶಗಳಲ್ಲಿ ಉದ್ಯೋಗ : ವಿದೇಶಗಳಲ್ಲಿ ಸಾಮಾನ್ಯವಾಗಿ ಎಡಗಡೆ ಕುಳಿತು ವಾಹನ ಚಲಾಯಿಸುವುದನ್ನು ನೋಡಬಹುದು. ಸಾವಿರಾರು ಭಾರತೀಯರು ವಿದೇಶದಲ್ಲಿ ಡ್ರೈವಿಂಗ್ ವೃತ್ತಿಯನ್ನು ಮಾಡಿಕೊಂಡು ಲಕ್ಷಾಂತರ ರೂ. ಸಂಪಾದನೆ ಮಾಡುತ್ತಿದ್ದಾರೆ. ವಿದೇಶದಲ್ಲಿ ಡ್ರೈವಿಂಗ್ ವೃತ್ತಿ ಮಾಡಲು ಬಯಸುವವರಿಗೆ ವಾರಣಾಸಿಯಲ್ಲಿ ತರಬೇತಿ ನೀಡಲಾಗುತ್ತದೆ. ಬಳಿಕ ಇವರಿಗೆ ಗಲ್ಫ್ ದೇಶಗಳಲ್ಲಿ ಮತ್ತು ವಿದೇಶಗಳಲ್ಲಿ ಉದ್ಯೋಗ ಕೊಡಿಸಲಾಗುತ್ತದೆ.
ಎಡಗೈ ಚಾಲನೆ ತರಬೇತಿ ಡಿಸೆಂಬರ್ ತಿಂಗಳಲ್ಲಿ ಆರಂಭವಾಗಲಿದ್ದು, ತರಬೇತಿ ಪಡೆದ 30 ಜನರ ಗುಂಪು ಫೆಬ್ರವರಿ ತಿಂಗಳಲ್ಲಿ ಗಲ್ಫ್ ದೇಶಗಳಿಗೆ ಉದ್ಯೋಗಕ್ಕೆ ತೆರಳಲಿದ್ದಾರೆ. ವಿದೇಶದಲ್ಲಿ ವಾಹನ ಚಾಲನೆ ಮಾಡಲು ಎಡಗೈ ಚಾಲನೆ ಮುಖ್ಯವಾಗಿದೆ. ಇದರಿಂದ ಯುವಕರಿಗೆ ತುಂಬಾ ಉಪಯೋಗವಾಗಲಿದೆ.
ಕರೌಂಡಿಯಲ್ಲಿ 1 ಕಿ ಮೀ ತರಬೇತಿ ಟ್ರ್ಯಾಕ್ ನಿರ್ಮಾಣ : ರಾಜ್ಯದ ಮೊದಲ ಎಡಗೈ ಡ್ರೈವಿಂಗ್ ಟ್ರಾಕ್ನ್ನು ಕರೌಂಡಿಯಲ್ಲಿರುವ ಐಟಿಐ ಕ್ಯಾಂಪಸ್ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿನ ಎಡ ಬದಿಯಲ್ಲಿ ಸ್ಟೇರಿಂಗ್ ಹೊಂದಿರುವ ಕಾರುಗಳ ತರಬೇತಿ ನಡೆಯಲಿದೆ. ಈ ಟ್ರ್ಯಾಕ್ನ್ನು ಒಂದು ಕಿಮೀ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ಟ್ರ್ಯಾಕ್ನ ಮಧ್ಯದಲ್ಲಿ ಹುಲ್ಲುಗಳನ್ನು ಹಾಸಲಾಗಿದೆ. ಈ ಟ್ರ್ಯಾಕ್ನ್ನು ಕಾಂಕ್ರಿಟ್ನಿಂದ ನಿರ್ಮಾಣ ಮಾಡಲಾಗಿದೆ.
ಇಲ್ಲಿಗೆ ತರಬೇತಿಗೆ ಬರುವ ಯುವಕರಿಗೆ ಮೊದಲು ಒಂದು ತಿಂಗಳು ತರಬೇತಿ ನೀಡಲಾಗುತ್ತದೆ. ಇದರಲ್ಲಿ 15 ದಿನ ಪ್ರಾಯೋಗಿಕ ಮತ್ತು 15 ದಿನ ವಿಷಯ ವಸ್ತುಗಳನ್ನು ಬೋಧಿಸಲಾಗುತ್ತದೆ. ಈ ಟ್ರ್ಯಾಕ್ನಲ್ಲಿ ಮೂರರಿಂದ ನಾಲ್ಕು ತಿರುವುಗಳಿರುತ್ತದೆ. ಒಂದು ಕೋಟಿ ವೆಚ್ಚದಲ್ಲಿ ಈ ಟ್ರ್ಯಾಕ್ ನಿರ್ಮಾಣ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದ ಯೋಜನಾ ವ್ಯವಸ್ಥಾಪಕ ಅಮಿತ್ ಕುಮಾರ್, ಎಡಗೈ ಚಾಲನೆ ತರಬೇತಿ ನೀಡುವ ಯೋಜನೆ ಸಂಬಂಧ ಒಂದು ಕೋಟಿ ರೂಪಾಯಿ ಅನುದಾನ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಇದರ ಡ್ರೈವಿಂಗ್ ಸ್ಕೂಲನ್ನು ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಆರಂಭಿಸಲಾಗುತ್ತದೆ. ಜನವರಿ ತಿಂಗಳಲ್ಲಿ ಈ ಟ್ರ್ಯಾಕ್ನ ಕಾಮಗಾರಿ ಪೂರ್ಣಗೊಳ್ಳಲಿದೆ. ಬಳಿಕ ಮೊದಲ ತರಬೇತಿಯ 30 ಜನರ ಗುಂಪನ್ನು ವಿದೇಶಕ್ಕೆ ಉದ್ಯೋಗಕ್ಕೆ ಕಳುಹಿಸುವ ಯೋಜನೆಯನ್ನು ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.
ನವೆಂಬರ್ 4ರಿಂದ ಕರೌಂಡಿ ಐಟಿಐ ಕಾಲೇಜಿನಲ್ಲಿ ಚಾಲನಾ ತರಬೇತಿಗೆ ದಾಖಲಾತಿ ಆರಂಭವಾಗುತ್ತದೆ. ಈ ಟ್ರ್ಯಾಕನ್ನು ಸ್ಕಿಲ್ ಇಂಡಿಯಾ ಇಂಟರ್ ನ್ಯಾಷನಲ್ ಸೆಂಟರ್ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತದೆ. ವಿದೇಶದಲ್ಲಿ ಉದ್ಯೋಗ ಬಯಸುವವರಿಗೆ ಸ್ಕಿಲ್ ಇಂಡಿಯಾ ಇಂಟರ್ ನ್ಯಾಷನಲ್ ಸೆಂಟರ್ (NSDC) ಸಹಾಯವಾಣಿ ಸಂಖ್ಯೆಗಳನ್ನು ನೀಡಿದೆ. ಆಸಕ್ತರು 7007077030, 7007077033 ಮತ್ತು www.nsdcinternational.com ಗೆ ಭೇಟಿ ನೀಡುವ ಮೂಲಕ ಮಾಹಿತಿ ಪಡೆಯಬಹುದು.
ಇದನ್ನೂ ಓದಿ : ದಟ್ಟ ಮಂಜಿನಿಂದ ಪಂಜಾಬ್ನಲ್ಲಿ ಸರಣಿ ಅಪಘಾತ: 100 ವಾಹನಗಳು ಜಖಂ, ಓರ್ವ ಸಾವು- ವಿಡಿಯೋ