ಮುಂಬೈ (ಮಹಾರಾಷ್ಟ್ರ): ಕೊರೊನಾ ಸೋಂಕಿತನೋರ್ವ ವೈದ್ಯನ ಮೇಲೆ ಚಾಕುವಿನಿಂದ ಹಲ್ಲೆಗೈದ ಘಟನೆ ಮಲಬಾರ್ ಹಿಲ್ ಕೋವಿಡ್ ಕೇಂದ್ರದಲ್ಲಿ ನಡೆದಿದೆ.
ಐಸಿಯುಗೆ ತೆರಳುವ ಬಗ್ಗೆ ವಿಚಾರವಾಗಿ ಕೋಪಗೊಂಡ ರೋಗಿಯು ವೈದ್ಯರ ಕುತ್ತಿಗೆ ಮತ್ತು ಬೆನ್ನಿನ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಘಟನೆಯಲ್ಲಿ ವೈದ್ಯ ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಮಹಾರಾಷ್ಟ್ರದ ಕೋವಿಡ್ ವರದಿ
ಮಹಾರಾಷ್ಟ್ರದಲ್ಲಿ ನಿನ್ನೆ 62,097 ಸೋಂಕಿತ ಪ್ರಕರಣಗಳು ದಾಖಲಾಗಿವೆ. 519 ಜನರು ಸಾವನ್ನಪ್ಪಿದ್ದಾರೆ. ಮುಂಬೈನಲ್ಲೇ 7,214 ಕೋವಿಡ್ ಪ್ರಕರಣ ಕಾಣಿಸಿಕೊಂಡಿದ್ದು, 35 ಜನರು ಸಾವನ್ನಪ್ಪಿದ್ದಾರೆ. ನಾಗ್ಪುರದಲ್ಲಿ 6,890 ಪ್ರಕರಣ ಪತ್ತೆಯಾಗಿವೆ.
ಇದನ್ನೂ ಓದಿ: ಕಳೆದ 24 ಗಂಟೆಯಲ್ಲಿ 2,95,041 ಜನರಿಗೆ ಸೋಂಕು; ಎರಡು ಸಾವಿರಕ್ಕೂ ಹೆಚ್ಚು ಮಂದಿ ಸಾವು